ಹೀರೋ ಮೋಟೋ ಕಾರ್ಪ್ ಶೀಘ್ರದಲ್ಲಿಯೇ ತನ್ನ ಹೊಸ ಬೈಕ್ ಬಿಡುಗಡೆ ಮಾಡಲಿದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟಿಸಿತ್ತು. ಇದೀಗ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅದುವೇ ಕೂಲ್ ಕರೀಜ್ಮಾ!
ಈ ಬೈಕ್ ಗಳ ಜೊತೆಗೆ ಕರೀಜ್ಮಾ ನೇರಾ ನೇರ ಪೈಪೋಟಿ:
ಹೀರೋ ಕಂಪನಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅದುವೇ ಕರಿಜ್ಮಾ ಎಕ್ಸ್ ಎಂ ಆರ್ 200 ಮತ್ತು ಕರಿಷ್ಮಾ ಎಕ್ಸ್ ಎಂ ಆರ್ ಟ್ರೇಡ್ಮಾರ್ಕ್. ಈ ಹೀರೋ ಬೈಕ್ ಗಳು 22 ಸಿಸಿ ಲಿಕ್ವಿಡ್ ಕೂಲ್ ಇಂಜಿನ್ ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಅಂದಹಾಗೆ ಪಲ್ಸರ್ 250cc, Gixxer 250cc ಹಾಗೂ ಡೊಮಿನೊರ್ 250cc ಜೊತೆಗೆ ಸ್ಪರ್ಧಿಸಲಿದೆ.
ಎಂಜಿನ್ ಸಾಮರ್ಥ್ಯ:
ಹೊಸ ಕರೀಜ್ಮಾ, 210cc ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. 25bhp ಮತ್ತು 30nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆರು ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.
ಲಡಾಕ್ ನಲ್ಲಿ ನಡೆಸಿದೆ ಟೆಸ್ಟ್:
ಹೀರೋ ಲೈನ್ ಅಪ್ ವೈಫ್ ಗಳಲ್ಲಿ ಮುಂಚೂಣಿಯಲ್ಲಿ ಇರಲಿ ಇರುವ ಬೈಕ್ ನ್ನು ಲಡಾಕ್ ಬಳಿ ಸಕ್ಸೆಸ್ ಫುಲ್ ಟೆಸ್ಟ್ ನಡೆಸಲಾಗಿದ್ದು ಕರೀಜ್ಮಾ210 ಪ್ರೀಮಿಯರ್ ವರ್ಗದ ಮೋಟರ್ ಸೈಕಲ್ ಸ್ಥಾನ ಪಡೆಯಬಹುದು. ಆದರೆ ಈ ಹೊಸ ಬೈಕ್ ಬಗ್ಗೆ ಕಂಪನಿ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಕರೀಜ್ಮಾ ಮತ್ತೆ ಬೈಕ್ ಪ್ರಿಯರನ್ನು ಆಕರ್ಷಿಸಲಿರುವುದಂತೂ ಸುಳ್ಳಲ್ಲ.