Karnataka Times
Trending Stories, Viral News, Gossips & Everything in Kannada

Global NCAP: ನೀವು ವ್ಯಾಗನ್ ಆರ್ ಹಾಗೂ ಆಲ್ಟೋ ಕೆ10 ಕಾರಿನ ಪ್ರಿಯರಾಗಿದ್ದಾರೆ ಇಲ್ಲಿದೆ ನೋಡಿ ನಿಮಗೆ ಬ್ಯಾಡ್ ನ್ಯೂಸ್!

Advertisement

ಮಾರುತಿ ಸುಜುಕಿ ಸಂಸ್ಥೆಯ ಅತ್ಯಂತ ಹೆಚ್ಚು ಮಾರಾಟವಾಗುವಂತಹ ಹಾಗೂ ಜನಪ್ರಿಯ ಕಾರುಗಳಾಗಿರುವ Wagon R ಹಾಗೂ Alto K10 ಕಾರಿನ ಕುರಿತಂತೆ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡುವಂತಹ ಒಂದು ಸುದ್ದಿ ಅಧಿಕೃತವಾಗಿ ಹೊರಬಂದಿದೆ. Global NCAP ಸಂಸ್ಥೆ ಬಿಡುಗಡೆ ಮಾಡಿರುವಂತಹ ಪಟ್ಟಿಯಲ್ಲಿ ಇವೆರಡು ಕಾರುಗಳು ಕೂಡ ಅ ಸುರಕ್ಷಿತ ಎಂಬುದಾಗಿ ಘೋಷಣೆ ಮಾಡಿದ್ದಾರೆ.Global NCP ಕೈಗೊಂಡಿರುವ ಅಭಿಯಾನದಲ್ಲಿ ಭಾರತದ ಕಾರುಗಳ ಸುರಕ್ಷತೆಯ ಕ್ರ್ಯಾಷ್ ಟೆಸ್ಟಿಂಗ್ ಅನ್ನು ಮಾಡಲಾಗಿದ್ದು, ಇದರಲ್ಲಿ ಸುರಕ್ಷಿತ ಕಾರು ಎಂದು ಪರಿಗಣಿಸಲು ಕನಿಷ್ಠಪಕ್ಷ ಮೂರು ಅಥವಾ ಮೂರಕ್ಕಿಂತ ಹೆಚ್ಚು ಸ್ಟಾರ್ ಅನ್ನು ಪಡೆದುಕೊಳ್ಳಬೇಕು. ಆದರೆ Wagon R ಹಾಗೂ Alto K10 ಕಾರುಗಳು ಒಂದು ಹಾಗೂ ಎರಡು ಸ್ಟಾರ್ ಗಳನ್ನು ಪಡೆದುಕೊಂಡಿವೆ ಎಂಬುದಾಗಿ ತಿಳಿದು ಬಂದಿದೆ.

ಭಾರತದಲ್ಲಿ ಈಗಾಗಲೇ ಸಣ್ಣ ಕಾರುಗಳ ಸುರಕ್ಷತೆಗಾಗಿ ಹಲವಾರು Rules & Regulations ಗಳ ನಂತರವೂ ಕೂಡ ಮಾರುತಿ ಸುಜುಕಿಯ ಈ ಕಾರುಗಳು ಸೇಫ್ಟಿಯ ಮಾನದಂಡಗಳಿಗೆ ಒಳಪಡುತ್ತಿಲ್ಲ ಎನ್ನುವುದು Global NCP ಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು ಇದರ ಕುರಿತಂತೆ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದೆ. ಸಂಸ್ಥೆ ಸುರಕ್ಷತೆಯ ಮಾನದಂಡದಲ್ಲಿ ವಯಸ್ಕರಿಗೆ 34 ರಲ್ಲಿ 19.69 ಹಾಗೂ ಮಕ್ಕಳಿಗೆ ಕೇವಲ 40ರಲ್ಲಿ 3.40% ಅಂಕಗಳನ್ನು ನೀಡಿದ್ದು 1 ಸ್ಟಾರ್ ನೀಡಲಾಗಿದ್ದು ಸುರಕ್ಷತೆಯ ವಿಚಾರದಲ್ಲಿ ಈ ಕಾರು ಖರೀದಿಗೆ ಯೋಗ್ಯವಲ್ಲ ಎಂಬ ರೀತಿಯಲ್ಲಿ ಅಧಿಕೃತವಾಗಿ ಹೇಳಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಎರಡು ಸ್ಟಾರ್ ಪಡೆದುಕೊಂಡಿದ್ದ Wagon R ಅದಾದ ನಂತರ ಕೇವಲ ಫ್ರೆಂಡ್ ಏರ್ ಬ್ಯಾಗ್ ಗಳನ್ನು ಮಾತ್ರ ಅಳವಡಿಸುವಲ್ಲಿ ಯಶಸ್ವಿಯಾಗಿದ್ದು ಬೇರೆ ಯಾವುದೇ ಸುರಕ್ಷಿತ ಮಾಪನಗಳನ್ನು ಫಾಲೋ ಮಾಡಿಲ್ಲ. ಅದೇ ಕಾರಿನ ಹಾದಿಯನ್ನು ಈಗ ಹೊಸದಾಗಿ ಬಿಡುಗಡೆಯಾಗಿರುವ Alto K10 ಹಿಂಬಾಲಿಸಿ ಸುರಕ್ಷತೆಯ ಪರಿವೃತ್ತದಿಂದ ಹೊರ ಬಿದ್ದಿದೆ.

ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಕ್ಕೆ ಕೇಂದ್ರ ಸಾರಿಗೆ ಸಂಸ್ಥೆ ಸಾಕಷ್ಟು ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿದ್ದು ಇದೇ ಕಾರಣಕ್ಕೆ ಕಾರುಗಳಲ್ಲಿ ಸುರಕ್ಷಿತ ಫೀಚರ್ಸ್ ಗಳನ್ನು ಹೆಚ್ಚಿಗೆ ಮಾಡಲಾಗುತ್ತಿದ್ದು ಟೆಸ್ಟ್ ಕ್ರಾಶಿಂಗ್ ವಿಚಾರದಲ್ಲಿ ಕೂಡ ಇದು ಸಫಲವಾಗುತ್ತಿತ್ತು. ಬೇರೆಲ್ಲ ಫೀಚರ್ಸ್ ಗಳಿಗಿಂತ ಹೆಚ್ಚಾಗಿ ಸೇಫ್ಟಿ ಫೀಚರ್ಸ್ ಹೆಚ್ಚಿರುವಂತಹ ಕಾರುಗಳ ಕಡೆಗೆ ಜನರು ತಮ್ಮ ಗಮನವನ್ನು ಹರಿಸುತ್ತಿದ್ದು ಒಂದು ವೇಳೆ ಇವೆರಡೂ ಕಾರುಗಳು ಇದೇ ರೀತಿ ಮುಂದುವರೆದರೆ ಮಾರಾಟಗಳ ಸಂಖ್ಯೆ ಕೂಡ ಕಡಿಮೆಯಾಗಬಹುದಾಗಿದೆ.

Leave A Reply

Your email address will not be published.