Simple One: ಸಿಂಪಲ್ ಒನ್ ಎಲೆಕ್ಟ್ರಿಕ್ ಬೈಕ್ ನಲ್ಲಿ ಸಿಂಪಲ್ ಆಗಿ ಒಂದೇ ಚಾರ್ಜ್ ನಲ್ಲಿ 236 ಕಿಲೋಮೀಟರ್ ಕ್ರಮಿಸಬಹುದು ಗೊತ್ತೇ?
ಈಗಾಗಲೇ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಸಾಕಷ್ಟು ತರಾವರಿ ಆಯ್ಕೆಗಳು ಕೂಡ ನಿಮಗೆ ಸಿಗುತ್ತವೆ. ಬಹುತೇಕ ಎಲ್ಲಾ ಮೋಟಾರ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಕಾರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಒಂದಕ್ಕಿಂತ ಒಂದು ಹೈಟೆಕ್ ವೈಶಿಷ್ಟ್ಯತೆಗಳನ್ನು ಹೊಂದಿವೆ. ಹೀಗೆ ನೀವು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹುಡುಕುತ್ತಿದ್ದರೆ ಒಂದು ಸಿಂಪಲ್ ಎನರ್ಜಿ (Simple Energy) ಯನ್ನು ಹೊಂದಿರುವಂತಹ ಸ್ಕೂಟರ್ ಬಗ್ಗೆ ನಾವು ಹೇಳುತ್ತೇವೆ.
ಈ ವರ್ಷದ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ಸಿಂಪಲ್ ಒನ್ (Simple One) ಸ್ಕೂಟರ್ ಉತ್ತಮ ಆಯ್ಕೆ ಎನಿಸಿಕೊಳ್ಳಬಹುದು. ಹೆಚ್ಚು ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಗರಿಷ್ಠ ವೇಗ ಮತ್ತಿತರ ವೈಶಿಷ್ಟ್ಯತೆಗಳನ್ನು ಹೊಂದಿರುವ ಸಿಂಪಲ್ ಒನ್ ಬೈಕ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Simple One ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟತೆಗಳು:
4.8 ಕೆ ಡಬ್ಲ್ಯೂ ಹೆಚ್ ಹಾಗೂ 1.6 ಕೆ ಡಬ್ಲ್ಯೂ ಹೆಚ್ ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿ ಬ್ಯಾಕ್ ಅಳವಡಿಸಲಾಗಿದೆ. 8500 ಶಕ್ತಿ ಇರುವ ಬ್ಯಾಟರಿ ಪ್ಯಾಕ್ ಇದಾಗಿದ್ದು ಕಂಪನಿ ಮೂರು ವರ್ಷಗಳ ವಾರಂಟಿ ಕೊಡುತ್ತದೆ. ಹಾಗಾಗಿ ಒಮ್ಮೆ ಚಾರ್ಜ್ ಮಾಡಿದರೆ 236 ಕಿಲೋಮೀಟರ್ ವರೆಗೆ ಕ್ರಮಿಸಬಹುದು. ಇದು ಎ ಆರ್ ಎ ಐ ನಿಂದ ಪ್ರಮಾಣಿಕರಿಸಲ್ಪಟ್ಟಿದೆ. 2.77 ಸೆಕೆಂಡ್ ಗಳಲ್ಲಿ ಗಂಟೆಗೆ 0 ಇಂದ 40 ಕಿಲೋಮೀಟರ್ ವೇಗವನ್ನ ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನು ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡೋಣ. ಕಾಂಬಿ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ ಮುಂದೆ ಹಾಗೂ ಹಿಂದೆ ಎರಡು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಕೊಡಲಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೋನೋ ಟ್ಯೂಬ್ ಸಸ್ಪೆನ್ಷನ್ ಸಿಸ್ಟಮ್ ಇದೆ. ಎಲ್ಇಡಿ ಟರ್ನ್ ಸಿಗ್ನಲ್ ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಹೆಡ್ ಲೈಟ್ ಹೆಚ್ಚು ಸಾಮರ್ಥ್ಯವನ್ನು ಒದಗಿಸಿದೆ. ಬ್ಲೂಟೂತ್ ಹಾಗೂ ವೈಫೈ ಕನೆಕ್ಟಿವಿಟಿ ಕೂಡ ನೀಡಲಾಗಿದೆ.
ಇನ್ನು ಡಾರ್ಕ್ ಮೋಡ್ ಆನ್ ಡಿಸ್ಪ್ಲೇ, ರಿಮೋಟ್ ಆಕ್ಸಿಸ್, ರೈಡ್ ಸ್ಟ್ಯಾಟಿಕ್ಸ್ ಈ ರೀತಿ ಮೂರು ರೈಡಿಂಗ್ ಮೋಡ್ ಗಳ ವೈಶಿಷ್ಟ್ಯತೆಯನ್ನು ಹೊಂದಿದೆ. 30 ಲೀಟರ್ ಕೆಪ್ಯಾಸಿಟಿಯ ಸೀಟ್ ಸ್ಟೋರೇಜ್ ಹೊಂದಿದೆ.
Simple One ಬೆಲೆ ಎಷ್ಟು?
Simple One ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ 1.10 ಲಕ್ಷ ರೂಪಾಯಿಗಳು. ಆದರೆ ಈ ಸ್ಕೂಟರ್ ನ ರೂಪಾಂತರಕ್ಕೆ ಸಂಬಂಧಪಟ್ಟ ಹಾಗೆ 1.45 ಲಕ್ಷ ರೂಪಾಯಿಗಳವರೆಗೂ ಆಗಬಹುದು.