Karnataka Times
Trending Stories, Viral News, Gossips & Everything in Kannada

Electric Scooter: ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್, 10 ಇಂಚ್ ವೀಲ್, 120 Km ರೇಂಜ್, ಬೆಲೆ ಅತಿ ಕಡಿಮೆ.

Advertisement

ಇತ್ತೀಚಿನ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳದ್ದೇ ಹವಾ. ಇಂಧನ ದುಬಾರಿ ಆಗುತ್ತಿದ್ದು ಅದಕ್ಕೆ ಇವಿ ವಾಹನಗಳ ಖರೀದಿಯನ್ನು ಸರ್ಕಾರವು ಬೆಂಬಲಿಸುತ್ತಿದೆ. ಈ ಕಾರಣಕ್ಕಾಗಿ ಸಾಕಷ್ಟು ಮೋಟಾರ್ ಕಂಪನಿಗಳು ಇವಿ ವಾಹನಗಳನ್ನು ತಯಾರಿಸುತ್ತಿವೆ. ಅವುಗಳಲ್ಲಿ pure ev ಯ Epluto 7ಜಿ ಇತರ ಎಲ್ಲಾ ಇವಿ ಜೊತೆ ಸ್ಪರ್ಧಿಸಲಿದೆ. 10 ಇಂಚಿನ ದೊಡ್ಡ ಅಲಾಯಿ ವೀಲ್ ಗಳು ಈ ಸ್ಕೂಟರ್ ನ ವೈಶಿಷ್ಟ್ಯತೆ.

EPluto 7ಜಿಯಲ್ಲಿ ಏನಿದೆ?

ರೌಂಡ್ ಹೆಡ್ ಲ್ಯಾಂಪ್ ಗಳು (Round Head Lamp), ಕ್ರೋಮ್ ಫಿನಿಷ್ಡ್ ಮಿರರ್ ಗಳು, ಫ್ಲಶ್ ಬಾಡಿ ಪ್ಯಾನೆಲ್ ಹಾಗೂ ಸುತ್ತಲೂ ಸ್ವೂಪಿಂಗ್ ಲೈನ್ ಈ ಸ್ಕೂಟರ್ ಅನ್ನು ಸೌಂದರ್ಯವನ್ನು ಹೆಚ್ಚಿಸಿವೆ ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ವರೆಗೆ ಈ ಸ್ಕೂಟರ್ ನಲ್ಲಿ ಕ್ರಮಿಸಬಹುದು.

ಇನ್ನು ಬ್ಯಾಟರಿ ಬಗ್ಗೆ ಹೇಳುವುದಾದರೆ 1500 ವ್ಯಾಟ್ ಸಾಮರ್ಥ್ಯವಿರುವ ಬ್ಯಾಟರಿ ಅಳವಡಿಸಲಾಗಿದ್ದು, ಉತ್ತಮ ಚಾರ್ಜಿಂಗ್ ವೇಗ ಪಡೆದುಕೊಳ್ಳುತ್ತದೆ. ನಾಲ್ಕು ಗಂಟೆಗಳಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಮಾಡಬಹುದು. ಈ ಸ್ಕೂಟರ್ 76 ಕೆಜಿ ತೂಕವಿದೆ. ಇನ್ನು ಈ ಇವಿ ಸ್ಕೂಟರ್ ನ ಬೆಲೆ ನೋಡುವುದಾದರೆ (ಎಕ್ಸ್ ಶೋರೂಮ್ ಬೆಲೆ) 93,468 ರೂಪಾಯಿಗಳು.

ಗರಿಷ್ಠ ವೇಗ ನೀಡುವ ಇವಿ ಸ್ಕೂಟರ್:

ಈ ಸ್ಕೂಟರ್ ಗರಿಷ್ಠ 60 ಕೆ ಎಮ್ ಪಿ ಹೆಚ್ ವೇಗವನ್ನು ಹೊಂದಿದೆ 1.5 ಕೆ ಡಬ್ಲ್ಯೂ(KW) ಮತ್ತು 2.2 ಕೆ ಡಬ್ಲ್ಯೂ (KW)ಬ್ಯಾಟರಿ ಆಯ್ಕೆ ನೀಡಲಾಗುತ್ತದೆ. ಸ್ಕೂಟರ್ ನಲ್ಲಿ ಎಲ್ಇಡಿ ಡಿಸ್ಪ್ಲೇ (LED Display) ಸ್ಮಾರ್ಟ್ ಲಾಕ್(Smart Lock) ಟೆಲಿಸ್ಕೋಪಿಕ್ ಫೋರ್ಕ್ಸ್ ಮೊನೊಶಾಕ್ ಸಸ್ಪೆನ್ಷನ್ (Teliscopic Mono Shock Suspension) ಅಳವಡಿಸಲಾಗಿದ್ದು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ (Disk Breck) ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ನಲ್ಲಿ ವಿನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ಪ್ಯೂರ್ ಇವಿ ಅವರ EPluto 7ಜಿ ಅತ್ಯಾಕರ್ಷಕವಾದ ಆರು ಬಣ್ಣಗಳಲ್ಲಿ ಲಭ್ಯವಿದೆ.

Leave A Reply

Your email address will not be published.