Car Showroom: ಹತ್ತು ಲಕ್ಷ ರೂಪಾಯಿ ಮೌಲ್ಯದ ಕಾರು ಮಾರಾಟ ಮಾಡಿದರೆ ಶೋರೂಂ ಮಾಲೀಕರಿಗೆ ಎಷ್ಟು ಲಾಭವಾಗುತ್ತದೆ ಗೊತ್ತಾ?
ಸಾಮಾನ್ಯವಾಗಿ ನಾವು ಯಾವುದೇ ಅಂಗಡಿಯಿಂದ ಯಾವುದೇ ಸರಕನ್ನು ಖರೀದಿಸಿದರು ಆ ವಸ್ತುಗಳ ಮೇಲೆ ಮಾರ್ಜಿನ್ ಬೆಲೆಯನ್ನು ಇಟ್ಟುಕೊಂಡು ಅಂಗಡಿಯ ಮಾಲೀಕ ವಸ್ತುವನ್ನು ಮಾರಾಟ ಮಾಡುತ್ತಾನೆ. ಉದಾಹರಣೆಗೆ ನೀವು ಒಂದು ವಸ್ತುವನ್ನು ನೂರು ರೂಪಾಯಿಗೆ ಕೊಂಡರೆ ಅದರ ಬೆಲೆ 80, 85, 90 ರೂಪಾಯಿಗಳಷ್ಟು ಇರುತ್ತದೆ. ಈ ರೀತಿ ಮಾರ್ಜಿನ್ ಇಟ್ಟುಕೊಂಡು ಮಾರಾಟ ಮಾಡುವ ವಿಷಯ ನಿಮಗೂ ತಿಳಿದಿರುತ್ತದೆ ಆದರೆ ಕಾರಿನಲ್ಲಿ ಕಾರಿನ ಡೀಲರ್ಗಳು ಎಷ್ಟು ಹಣ ಗಳಿಸುತ್ತಾರೆ ಎಂಬುದು ನಿಮಗೆ ಗೊತ್ತಾ? ಒಂದು ಕಾರು ಮಾರಾಟವಾಗಬೇಕಾದರೆ ಆ ಕಾರಿನ ಮಾರಾಟದಲ್ಲಿ ಡೀಲರ್ಗಳ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಪ್ರತಿಯೊಂದು ಕಾರಿನ ಎಕ್ಸ್ ಶೋರೂಮ್ ಬೆಲೆ ವಿಭಿನ್ನವಾಗಿರುತ್ತದೆ. ತೆರಿಗೆ ಮೊದಲಾದವು ಸೇರಿ ಆನ್ ರೋಡ್ ಬೆಲೆ ಹೆಚ್ಚಾಗಬಹುದು.
ಕಾರಿನಲ್ಲಿ ಎಷ್ಟು ಹಣ ಉಳಿಸಬಹುದು?
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್, ಕಾರಿನ ಉಳಿತಾಯದ ಬಗ್ಗೆ ಸಮೀಕ್ಷೆ ಒಂದನ್ನು ನಡೆಸಿತ್ತು. ಅದರ ಆಧಾರದ ಮೇಲೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡೀಲರ್ಗಳ ಮಾರ್ಜಿನ್ ಕಡಿಮೆ ಇರುತ್ತದೆ ಎಂದು ವರದಿ ಮಾಡಲಾಗಿದೆ. ಭಾರತದಲ್ಲಿ ಡೀಲರ್ಗಳು ಅಥವಾ ವಿತರಕರು ಒಂದು ಕಾರಿನ ಮೇಲೆ 5% ಗಿಂತ ಕಡಿಮೆ ಮಾರ್ಜಿನ್ ಹೊಂದಿರುತ್ತಾರೆ. ಅಂದರೆ ಒಂದು ಕಾರಿನ ಮಾರಾಟದ ಮೇಲೆ ಡೀಲರ್ಗಳಿಗೆ 5% ನಷ್ಟು ಲಾಭ ಸಿಗುತ್ತದೆ.
ಡೀಲರ್ಸ್ ಗಳ ಮಾರ್ಜಿನ್ 2.9% ನಿಂದ 7.49% ವರೆಗೆ ಇರುತ್ತದೆ. ಇದು ಆಯಾ ಕಂಪನಿ ಹಾಗೂ ಆಯಾ ಪ್ರದೇಶವನ್ನು ಅವಲಂಬಿಸಿರುತ್ತದೆ. ಎಂ ಜಿ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಈ ಎರಡು ಮೋಟಾರ್ ಕಂಪನಿಗಳಲ್ಲಿ ಡೀಲರ್ಗಳಿಗೆ ಹೆಚ್ಚಿನ ಮಾರ್ಜಿನ್ ಇದೆ ಎಂದು ಮಾಹಿತಿ ಇದೆ. 5 ಅಥವಾ ಅದಕ್ಕಿಂತ ಹೆಚ್ಚಿನ ಕಮಿಷನ್ ಈ ಕಂಪನಿ ನೀಡುತ್ತದೆ. ಹಾಗೆಯೇ ಕಾರು ತಯಾರಾಗುವ ದೇಶದ ಆಧಾರದ ಮೇಲೆ ಲಾಭದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.
ಕಾರಿನ ಮೇಲಿನ ತೆರಿಗೆ:
ಒಂದು ಕಾರನ್ನು ಖರೀದಿಸಿದರೆ ಆ ಕಾರಿನ ಮೇಲೆ ರಸ್ತೆ ತೆರಿಗೆ ಜಿಎಸ್‌ಟಿಎಸ್ ಮೊದಲಾದವುಗಳನ್ನು ಪಾವತಿಸಬೇಕಾಗುತ್ತದೆ. ತೆರಿಗೆಯು ಆಯಾ ಕಾರಿನ ಬ್ರಾಂಡ್ ಹಾಗೂ ಸ್ಥಳಕ್ಕೆ ಸಂಬಂಧಪಟ್ಟ ಹಾಗೆ ವಿಭಿನ್ನವಾಗಿರುತ್ತದೆ. ಉದಾಹರಣೆಗೆ 1500 ಸಿಸಿಗಿಂತ ಕಡಿಮೆ ಇರುವ ಕಾರಿಗೆ 28% ಜಿ ಎಸ್ ಟಿ ಹಾಗೂ 17% ಸೆಸ್ ಹಾಗೂ ರಸ್ತೆ ತೆರಿಗೆ ಕಟ್ಟಬೇಕು. ಅದರಿಂದ ಕಾರಿನ ಬೆಲೆಯ ಜೊತೆಗೆ ತೆರಿಗೆ ಪಾವತಿಯೇ ಹೆಚ್ಚಿನ ಮೊತ್ತದ್ದಾಗಿರುತ್ತದೆ. ಡೀಲರ್ಗಳಿಗೆ ಕಾರಿನ ಎಕ್ಸ್ ಶೋರೂಮ್ ಬೆಲೆಯ ಆಧಾರದ ಮೇಲೆ ಕಮಿಷನ್ ದೊರೆಯುತ್ತದೆ.