ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಹೆಚ್ಚು ಕಾರ್ಯ ಕ್ಷಮತೆ ಹೊಂದಿರುವ ಬೈಕ್ ಖರೀದಿ ಮಾಡಲು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಅತ್ಯುತ್ತಮ ಬೈಕ್ ಗಳು. ಕೇವಲ 70 ಸಾವಿರ ರೂಪಾಯಿಗಳ ಒಳಗೆ ಅಧಿಕ ಮೈಲೇಜ್ ನೀಡಬಲ್ಲ ಬೈಕುಗಳಲ್ಲಿ ಬಜಾಜ್ ಆಟೋ, ಟಿ ವಿ ಎಸ್, ಹಿರೋ ಮೋಟೋ ಕಾರ್ಪ್ ಮೊದಲಾದವು ಮುಂಚೂಣಿಯಲ್ಲಿವೆ.
Hero HF Deluxe:
ಈ ಬೈಕ್ ನ್ನು ಹೀರೋ 2013 ರಲ್ಲಿ ಬಿಡುಗಡೆ ಮಾಡಿತ್ತು. ಇದು 97.2cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 7.91bhp ಶಕ್ತಿಯನ್ನು ಉತ್ಪಾದಿಸುತ್ತದೆ. ಮೈಲೇಜ್ ನೋಡುವುದಾದರೆ ಒಂದು ಲೀಟರ್ ಪೆಟ್ರೋಲ್ ಗೆ 65 ಕಿಲೋಮೀಟರ್ ಮೈಲೇಜ್ ನೀಡಬಲ್ಲದು. ಇನ್ನು ಇದರ ಬೆಲೆ ನೋಡುವುದಾದರೆ, ರೂ.59,990 ರಿಂದ ಆರಂಭವಾಗುತ್ತದೆ.
Bajaj City 110:
ಈ ಬೈಕ್ ನ ವೈಶಿಷ್ಟ್ಯತೆ ಬಗ್ಗೆ ಮಾತನಾಡುವುದಾದರೆ, 115.45cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ 8.48bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಬರುವ ಈ ಬೈಕ್ 70kmpl ಮೈಲೇಜ್ ನ್ನು ನೀಡುತ್ತದೆ. ಇದರ ಬೆಲೆ, 67,322 ರೂ. ರಿಂದ ಆರಂಭವಾಗುತ್ತದೆ.
Bajaj Platina:
ಇದು ಮಾರುಕಟ್ಟೆಯಲ್ಲಿ ಜನಪ್ರಿಯವಾದ ಬೈಕ್ ಅಗಿದ್ದು, ಬೈಕ್ ಪ್ರಿಯರು ಹೆಚ್ಚು ಇಷ್ಟಪಡುತ್ತಾರೆ. ಪ್ಲಾಟಿನಾ 110 115.45cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 70kmpl ಮೈಲೇಜ್ ನೀಡುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ 68,544 ರೂ.ನಿಂದ ಆರಂಭ.
TVS Sports Bike:
ಈ ಬೈಕ್ 109.7cc ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದೆ.8.18bhp ಶಕ್ತಿಯನ್ನು ಉತ್ಪಾದಿಸಬಲ್ಲದು. 4-ಸ್ಪೀಡ್ ಗೇರ್‌ಬಾಕ್ಸ್ ಚಾಲಿತವಾಗಿದೆ. ಹಾಗೂ 70ಕೆಎಂಪಿಎಲ್ ಮೈಲೇಜ್ ಕೂಡ ನೀಡುತ್ತದೆ. ಇದರ (ಎಕ್ಸ್ ಶೋರೂಂ ಬೆಲೆ) ರೂ.64,050 ರಿಂದ ಆರಂಭ. ಇವಿಷ್ಟು ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇರುವ ಅಗ್ಗದ ಬೆಲೆಯ ಉತ್ತಮ ಮೋಟಾರ್ ಬೈಕ್ ಗಳು.