Creta-Sletos: ಕ್ರೆಟಾ ಅಥವಾ ಸೆಲ್ಟೋಸ್ ಯಾವುದು ಬೆಟರ್ ಗೊತ್ತಾ? ಖರೀದಿಗೂ ಮೊದಲು ವ್ಯತ್ಯಾಸ ತಿಳಿದುಕೊಳ್ಳಿ!

Advertisement
ಇತ್ತೀಚಿಗೆ ಅಗ್ಗದ ಬೆಲೆಯ ಕಾರುಗಳಲ್ಲಿಯೂ ಎಸ್ಯುವಿ ಮಾಡೆಲ್ ಗಳು ಲಭ್ಯವಿವೆ. ಹುಂಡೈ ನ ಕ್ರೆಟಾ ಹಾಗೂ ಕಿಯಾದ ಸೆಲ್ಟೋಸ್ ಈ ಎರಡು ಮಾಡೆಲ್ ಖರೀದಿ ಮಾಡಲು ಜನ ಮುಗಿ ಬೀಳುತ್ತಿದ್ದಾರೆ. ವಿಭಿನ್ನ ಬ್ರಾಂಡ್ ಗಳ ವಿಭಿನ್ನ ಕಾರ್ ಆಗಿರುವ ಕ್ರೆಟಾ ಹಾಗೂ ಸೆಲ್ಟೋಸ್ ಹೆಚ್ಚು ಬೇಡಿಕೆ ಹೊಂದಿದೆ ನೀವು ಕೂಡ ಈ ಎರಡು ಕಾರ್ ಗಳಲ್ಲಿ ಯಾವುದನ್ನು ಖರೀದಿಸಬೇಕು ಎನ್ನುವ ಗೊಂದಲದಲ್ಲಿ ಇದ್ರೆ ಈ ಎರಡು ಕಾರ್ ಗಳ ನಡುವೆ ಇರುವ ವ್ಯತ್ಯಾಸ ಇಲ್ಲಿದೆ.
15 ಲಕ್ಷ ರೂಪಾಯಿ ಆಸು ಪಾಸಿನ ಬಜೆಟ್ ಹೊಂದಿದ್ದು ಕಾಂಪ್ಯಾಕ್ಟ್ ಎಸ್ ಯು ವಿ ಖರೀದಿ ಮಾಡಲು ನೀವು ಬಯಸಿದರೆ ಕ್ರೆಟಾ ಹಾಗೂ ಸೆಲ್ಟೋಸ್ ಎರಡು ಬೆಸ್ಟ್ ಆಯ್ಕೆ. ಈ ಎರಡು ಕಾರುಗಳ ನಡುವಿನ ವ್ಯತ್ಯಾಸವೇನು ನೋಡೋಣ.
Creta-Sletos ವಿನ್ಯಾಸದಲ್ಲಿನ ವ್ಯತ್ಯಾಸ:
ಹೊರ ಭಾಗದ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ ಹುಂಡೈ ಕಂಪನಿಯ ಕ್ರೆಟಾ 17 ಇಂಚಿನ ಅಲಾಯಿ ವೀಲ್, ಎಲ್ಇಡಿ ಲೈಟಿಂಗ್ ಎದುರು ಮತ್ತು ಹಿಂಭಾಗದಲ್ಲಿ ಸ್ಪೀಡ್ ಪ್ಲೇಟ್ ಗಳನ್ನು ಹೊಂದಿದೆ. ಇನ್ನು ರೂಫ್ ರೈಲ್ ಗಳನ್ನು ಕೆಲವು ಮಾದರಿಯಲ್ಲಿ ಕಾಣಬಹುದು. ಅದೇ ರೀತಿ ಸೆಲ್ಟೋಸ್ ವಿನ್ಯಾಸ ನೋಡುವುದಾದರೆ 18 ಇಂಚಿನ ಅಲಾಯಿ ವೀಲ್ ಹೊಂದಿದೆ. ಇದರಲ್ಲೂ ಎಲ್ಇಡಿ ಹೆಡ್ ಲೈಟ್, ಟೌ ಟೈಲ್ ಲ್ಯಾಂಪ್ ಹಾಗೂ ರೂಫ್ ರೈಲ್ಸ್ಗಳು ಇವೆ. ಸೆಲ್ಟೋಸ್ ಸ್ಪೋರ್ಟಿ ಲುಕ್ ಹೊಂದಿದೆ.
Creta-Sletos ಸೈಜ್ ನಲ್ಲಿಯೂ ವ್ಯತ್ಯಾಸ:
ಬಹುತೇಕ ಈ ಎರಡು ಎಸ್ ಯು ವಿಗಳು ಗಾತ್ರದ ವಿಚಾರಕ್ಕೆ ಬಂದರೆ ಒಂದೇ ರೀತಿಯಾಗಿವೆ. ಎರಡು ಕಾರ್ ಗಳಲ್ಲಿ ವೀಲ್ ಬೇಸ್ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಒಂದೇ ತೆರನಾಗಿ ಇದೆ. ಆದರೆ ಎತ್ತರದ ವಿಚಾರಕ್ಕೆ ಬಂದರೆ ಕ್ರೆಟಾ ಹೆಚ್ಚು ಎತ್ತರವಾಗಿದೆ. 433 ಲೀಟರ್ ಬೂಟ್ ಸ್ಪೇಸ್ ಹಾಗೂ 190 ಗ್ರೌಂಡ್ ಕ್ಲಿಯರೆನ್ಸ್ ಅನ್ನು ಎರಡು ಕಾರ್ ಗಳಲ್ಲಿ ಕಾಣಬಹುದು.
Creta-Sletos ವೈಶಿಷ್ಟ್ಯತೆಗಳಲ್ಲಿಯ ವ್ಯತ್ಯಾಸ:
ವಯರ್ಲೆಸ್ ಚಾರ್ಜಿಂಗ್, ಸನ್ ರೂಫ್, ವೆಂಟಿಲೇಟೆಡ್ ಸೀಟ್ ಗಳು ಡುಯಲ್ ಟೋನ್ ಅಥವಾ ಕಪ್ಪು ಒಳಾಂಗಣ ವಿನ್ಯಾಸ, ಎಲೆಕ್ಟ್ರಿಕ್ ಟೈಲ್ ಗೇಟ್, ಪವರ್ ಡ್ರೈವರ್ ಮೊದಲಾದ ಸುಧಾರಿತ ವೈಶಿಷ್ಟ್ಯತೆಗಳನ್ನು ಕ್ರೆಟಾದಲ್ಲಿ ಕಾಣಬಹುದು. ಸೆಲ್ಟೋಸ್ ಬಹುತೇಕ ಒಳಭಾಗದ ವಿನ್ಯಾಸದಲ್ಲಿ ಕ್ರೆಟಾವನ್ನು ಹೋಲುತ್ತದೆ. ಡುಯಲ್ ಟೋನ್ ಬಣ್ಣದ ಆಯ್ಕೆ, ಸಾಫ್ಟ್ ಮೆಟೀರಿಯಲ್ ಡ್ಯಾಶ್ ಬೋರ್ಡ್, ಸಣ್ಣ ರೂಫ್ ವೆಂಟಿಲೇಟೆಡ್ ಸೀಟ್ ಗಳನ್ನು ಸೆಲ್ಟೋಸ್ ನಲ್ಲಿ ಕಾಣಬಹುದು.
Creta-Sletos ಬೆಲೆಯಲ್ಲಿನ ವ್ಯತ್ಯಾಸ:
ಹುಂಡೈ ಕ್ರೆಟಾ ಎಕ್ಸ್ ಶೋರೂಮ್ ಬೆಲೆ (ದೆಹಲಿ) 10.84 ಲಕ್ಷದಿಂದ 19.13 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಅದೇ ಕಿಯಾ ಸೆಲ್ಟೋಸ್ ಬೆಲೆ ನೋಡುವುದಾದರೆ 10.69 ಲಕ್ಷ ರೂಪಾಯಿಗಳಿಂದ ಆರಂಭವಾಗಿ 19.15 ಲಕ್ಷ ರೂಪಾಯಿಗಳವರೆಗೆ ಇದೆ. ಅಂದರೆ ಬೆಲೆಯ ದೃಷ್ಟಿಯಲ್ಲಿ ನೋಡುವುದಾದರೆ ಎರಡು ಕಾರ್ ಗಳ ಬೆಲೆ ಬಹುತೇಕ ಒಂದೇ ರೀತಿಯಾಗಿದೆ.
Creta-Sletos ಎಂಜಿನ್ ನಲ್ಲಿನ ವ್ಯತ್ಯಾಸ:
ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಇಂಜಿನ್ ಹೊಂದಿದೆ ಕ್ರೆಟಾ. ಸೆಲ್ಟೋಸ್ ನಲ್ಲಿ ಒಂದೇ ಆಯ್ಲೆಯನ್ನು ಕಾಣಬಹುದು. ಇನ್ನು ಎಂಜಿನ್ ಸಾಮರ್ಥ್ಯದ ವಿಚಾರಕ್ಕೆ ಬಂದರೆ ಎರಡು ಕಾರುಗಳು ಸಮಾನ ಶಕ್ತಿಯನ್ನು ಉತ್ಪಾದಿಸುತ್ತವೆ. ಗೇರ್ ಬಾಕ್ಸ್ ನಲ್ಲಿಯೂ ಕೂಡ ಒಂದೇ ರೀತಿಯ ತಂತ್ರಜ್ಞಾನ ಅಳವಡಿಸಲಾಗಿದೆ. ಸ್ಪೋರ್ಟಿ ಲುಕ್ ಇರುವ ಎಸ್ ಯು ವಿ ಬೇಕಿದ್ರೆ ಕಿಯಾ ಸೆಲ್ಟೋಸ್ ಬೆಸ್ಟ್ ಆಯ್ಕೆ ಆಗಬಹುದು. ಆದರೆ ಜನಪ್ರಿಯತೆ ದೃಷ್ಟಿಯಿಂದ ನೋಡಿದರೆ ಕ್ರೆಟಾ ಖರೀದಿ ಮಾಡುವುದು ವಾಸಿ.