ಕೆಲವು ವರ್ಷಗಳಿಂದ ದೇಶದಲ್ಲಿ ಕಾರುಗಳ ಬೇಡಿಕೆ ಹೆಚ್ಚಾಗಿದೆ. ವಿವಿಧ ರೀತಿಯ ವಿವಿಧ ಫೀಚರ್ ಹೊಂದಿರುವ ಹೊಸ ಹೊಸ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಇನ್ನು ಜನರು ಕೂಡ ಅಷ್ಟೇ ಹೆಚ್ಚು ಸೌಲಭ್ಯಗಳು, ಇರುವ ಕಡಿಮೆ ಬೆಲೆಯಲ್ಲಿ ಸಿಗುವ ಕಾರನ್ನೇ ಹುಡುಕುತ್ತಾರೆ. ಇನ್ನು ನೀವೇನಾದರೂ 9 ರಿಂದ 12 ಲಕ್ಷಗಳ ಬೆಲೆಯಲ್ಲಿ ಹುಡುಕುತ್ತಿದ್ದರೆ ನಾವು ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.
Nissan Magnite:
ಇದು ಟಾಪ್ ಮಾಡೆಲ್ ಕಾರ್ ಆಗಿದ್ದು ಇದರ ಎಕ್ಸ್ ಶೋ ರೂಂ ಬೆಲೆ 11,00,000ಗಳಿಗಿಂತಲೂ ಕಡಿಮೆ ಇದೆ. ಎಲ್ಇಡಿ ಪ್ರಾಜೆಕ್ಟರ್ ಹೆಡ್ ಲ್ಯಾಂಪ್ ಎಲ್ಇಡಿ ಡಿ ಆರ್ ಎಲ್ ಗಳು ಓ ಆರ್ ವಿಎಂ (ವಿದ್ಯುತ್ ಹೊಂದಾಣಿಕೆ ಇರುವ ಮತ್ತು ಮಡಿಸಬಹುದಾದ) ವಯರ್ಲೆಸ್ ಆಪಲ್ ಕಾರ್ ಪ್ಲೇ, ಎಂಟು ಇಂಚಿನ ಟಚ್ ಸ್ಕ್ರೀನ್ ವಯರ್ಲೆಸ್ ಚಾರ್ಜಿಂಗ್ ಎಲ್ಲವನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಸೇಫ್ಟಿಗಾಗಿ ಮಲ್ಟಿಪಲ್ ಹೇರ್ ಪ್ಯಾಕ್ ಗಳು ಇವೆ ಸೌಲಭ್ಯ ಇದ್ದು ಹಿಲ್ ಸ್ಟಾರ್ಟ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಬ್ರೇಕ್ ಅಸಿಸ್ಟ್ ಮೊದಲದ ವೈಶಿಷ್ಟ್ಯತೆಗಳು ಕೂಡ ಈ ಕಾರ್ ನಲ್ಲಿ ಲಭ್ಯ.
Hyundai Verna:
ಈ ಕಾರಿನಲ್ಲಿರುವ ವೈಶಿಷ್ಟ್ಯತೆಯಿಂದಾಗಿಯೇ ಇದರ ಬೇಡಿಕೆಯೂ ಈಗ ಹೆಚ್ಚಾಗಿದೆ. ಇದರಲ್ಲಿರುವ ಫೀಚರ್ಸ್ ನೋಡುವುದಾದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದ್ದು, ಬ್ಲೂ ಲಿಂಕ್ ಟೆಕ್ನಾಲಜಿ, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಈ ಕಾರಿನಲ್ಲಿ ಕಾಣಬಹುದು. 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್ ಅಳವಡಿಸಲಾಗಿದೆ. ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಗಳೂ ಈ ಕಾರಿನಲ್ಲಿವೆ. ISOFIX ಚೈಲ್ಡ್ ಸೀಟ್ ಆಂಕರ್ ಪಾಯಿಂಟ್‌ಗಳು ಇವೆ.
ಕ್ರೂಸ್ ಕಂಟ್ರೋಲ್ ಇರಬಹುದು, ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್ ಇರಬಹುದು ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜಿಂಗ್, ಪ್ಯಾಡಲ್-ಶಿಫ್ಟರ್‌ಗಳು, ಎಲ್ಲವೂ ನೂತನವಾಗಿ ಅಳವಡಿಸಲಾಗಿದ್ದು, ಹೆಚ್ಚು ಬಾಳಿಕೆಯ ಹಾಗೂ ಸುರಕ್ಷತೆಯ ಭದ್ರತೆಯನ್ನು ನೀಡುತ್ತವೆ.
Maruti Suzuki Ciaz:
ಮೇಲಿನ ಕಾರುಗಳಲ್ಲಿ ಅಳವಡಿಸಿರುವಂತೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ರಿಯರ್ ಕಾಂಬಿನೇಶನ್ ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಈ ಕಾರಿನಲ್ಲಿಯೂ ಇದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದ್ದು, ವಾಯ್ಸ್ ಕಮಾಂಡ್ ಸಿಸ್ಟಮ್ ಕೂಡ ಹೊಂದಿದೆ. ವಿಶೇಷವಾದ ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ಲೆದರ್ ಸೀಟ್‌ಗಳು ಆಕರ್ಷಕವಾಗಿದೆ. ಸುರಕ್ಷತೆಗಾಗಿ ಏರ್ ಬ್ಯಾಗ್ ಗಳು ಇವೆ ಎಬಿಎಸ್ ಇದೆ. ಆಂಟಿ-ಥೆಫ್ಟ್ ಸಿಸ್ಟಮ್, ಡೇ ನೈಟ್ IRVM, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. ಸೀಟ್-ಬೆಲ್ಟ್ ರಿಮೈಂಡರ್, ಹೈ-ಸ್ಪೀಡ್ ಎಚ್ಚರಿಕೆ ವ್ಯವಸ್ಥೆ ನೀಡಲಾಗಿದೆ.
Kia Sonet:
ಕಿಯಾ ಸೋನೆಟ್ ಕಾರಿನಲ್ಲಿ ಮೊಟ್ಟಮೊದಲನೆಯದಾಗಿ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಹೆಚ್ಚು ಉಪಯುಕ್ತ ಅಳವಡಿಕೆಯಾಗಿದೆ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ ಹಾಗೆನೇ ಎಲ್ ಇ ಡಿ ಹೆಡ್‌ಲ್ಯಾಂಪ್‌ಗಳು, ಟೈಲ್‌ಲೈಟ್‌ಗಳು, 16-ಇಂಚಿನ ಅಲಾಯ್ ವೀಲ್ಸ್, ಸ್ಟೀರಿಂಗ್ ಕಂಟ್ರೋಲ್ ಇದೆ. ಇದು ಆರು ಏರ್‌ಬ್ಯಾಗ್‌ಗಳು ಇಬಿಡಿಯೊಂದಿಗೆ ಎಬಿಎಸ್, ವಾಹನ ಸ್ಥಿರತೆ ನಿರ್ವಹಣೆ, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ, ವೇಗ-ಸಂವೇದಿ ಆಟೋ ಡೋರ್ ಲಾಕ್, ಇಂಪ್ಯಾಕ್ಟ್-ಸೆನ್ಸಿಂಗ್ ಆಟೋ ಡೋರ್ ಅನ್‌ಲಾಕ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ಚೈಲ್ಡ್ ಲಾಕ್ ಎಲ್ಲವನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಅಳವಡಿಸಲಾಗಿದೆ.
Hyundai i20:
ಹೊಸ ಹ್ಯುಂಡೈ ಐ20 ವಿಶೇಷತೆಬಗ್ಗೆ ಹಲವರಿಗೆ ಗೊತ್ತಿರಬಹುದು. ಇದೂ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿರುವ ಕಾರ್ ಗಳಲ್ಲಿ ಒಂದಾಗಿದೆ. ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ORVM ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ ಇ ಡಿ ಟೈಲ್‌ಲೈಟ್‌ಗಳು ಇದರಲ್ಲಿವೆ, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ಚಕ್ರಗಳನ್ನು ಕೊಡಲಾಗಿದೆ. ಎಲೆಕ್ಟ್ರಿಕ್ ಸನ್‌ರೂಫ್ ಇದೆ ಹಾಗೂ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಉಳಿದ ಕಾರ್ ಗಳಿಗಿಂತಲೂ ಇದರಲ್ಲಿ ಹೆಚ್ಚು ಆಕರ್ಶಕವಾಗಿಯೂ ಕಾಣಿಸುತ್ತದೆ. ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಬೋಸ್ ಸರೌಂಡ್ ಸೌಂಡ್ ಸಿಸ್ಟಮ್ ಕೂಡ ಐ20ಯತ್ತ ಜನರನ್ನು ಆಕರ್ಷಿಸುತ್ತವೆ.