Karnataka Times
Trending Stories, Viral News, Gossips & Everything in Kannada

Tata Electric Scooter: ಶೀಘ್ರದಲ್ಲೇ ಬರಲಿದೆ 300 km ರೇಂಜ್ ನೀಡುವ ಟಾಟಾ ಎಲೆಕ್ಟ್ರಿಕ್ ಸ್ಕೂಟರ್! ಬೆಲೆ ಇಷ್ಟು ಮಾತ್ರ

advertisement

ಜನರು ಪೆಟ್ರೋಲ್ ಹಾಗೂ ಡೀಸೆಲ್ ಇಂಧನದ ಗಾಡಿಗಳನ್ನು ತೊರೆದು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿರುವ ಕಾರಣ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ (Indian Automobile Market) ವಿಧವಿಧವಾದ ಕಂಪೆನಿಗಳ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಕಾರುಗಳು ಸಾಲುಗಟ್ಟಿ ನಿಂತಿವೆ.

ಎಲ್ಲಾ ಬ್ರಾಂಡ್ ವಾಹನ ತಯಾರಿಕಾ ಕಂಪನಿಗಳು (Brand Vehicle Manufacturing Companies) ಕೂಡ ಗ್ರಾಹಕರ ಅನುಗುಣಕ್ಕೆ ತಕ್ಕ ಹಾಗೆ ವಾಹನಗಳನ್ನು ತಯಾರು ಮಾಡುತ್ತ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಹೀಗಿರುವಾಗ ಬಡ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್ (Attractive Features) ಗಳನ್ನು ಹೊಂದಿರುವ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಟಾಟಾ ಕಂಪನಿ ಅಗ್ಗದ ಬೆಲೆಯಲ್ಲಿ ನೀಡಲು ಮುಂದಾಗಿದ್ದಾರೆ.

Tata Electric Scooter Release Date:

 

Image Credit: srk18.in

 

ಬಿಡುಗಡೆಗು ಮುನ್ನವೇ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿ ಮಾಡಿರುವ ಟಾಟಾ ಕಂಪನಿಯ (Tata Company) ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದ್ದು, ಈ ವರ್ಷದ ಕೊನೆಯಲ್ಲಿ ಗ್ರಾಹಕರ ಕೈಗೆಟಕುವ ಬೆಲೆಗೆ ಬೈಕ್ ಲಭ್ಯವಿರಲಿದೆ. ಟಾಟಾ ಕಂಪನಿ ಎಲ್ಲಿಯೂ ಸಹ ಅಧಿಕೃತವಾಗಿ ಇದರ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿದ ಆದರೆ ಲೀಕ್ ಆದಂತಹ ಕೆಲ ಮಾಹಿತಿಯ ಪ್ರಕಾರ, ಸದ್ಯದಲ್ಲೇ ಟಾಟಾ ಸ್ಕೂಟರ್ ಬಿಡುಗಡೆ ಆಗಲಿತುವ ಮಾಹಿತಿ ದೊರೆತಿದೆ.

advertisement

ಶಕ್ತಿಯುತ ಮೋಟಾರ್ ಮತ್ತು ಅತ್ಯುತ್ತಮ ರೇಂಜ್:

ಇತರ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೋಲಿಸಿದರೆ, ಟಾಟಾ ಕಂಪನಿಯ ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Tata Electric Scooter) ನಲ್ಲಿ ಶಕ್ತಿಯುತ ಮೋಟರನ್ನು ಅಳವಡಿಕೆ ಮಾಡಿದ್ದು ಇದು 3KW ಪೀಕ್ ಶಕ್ತಿಯನ್ನು (Peak power) ತಯಾರಿಸಲು ಸಹಕರಿಸುತ್ತದೆ. ಜೊತೆಗೆ ಒಮ್ಮೆ ಸಂಪೂರ್ಣ ಚರ್ಚ ಮಾಡಿದರೆ ಬರೋಬ್ಬರಿ 270 km ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬಡ ಗ್ರಾಹಕರ ಕೈಗೆಟಾಕುವ ದರದಲ್ಲಿ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ:

 

Image Credit: Taza News and Updates

 

ಈಗಾಗಲೇ ಸಾಕಷ್ಟು ಅತ್ಯಾಕರ್ಷಕ ವಾಹನಗಳನ್ನು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಪರಿಚಯಿಸಿರುವ ಟಾಟಾ ಕಂಪನಿಯು ಇದೀಗ ಬಡ ಗ್ರಾಹಕರಿಗೆ ಅನುಕೂಲವಾಗುವ ವಾಹನವನ್ನು ಸದ್ಯದಲ್ಲೇ ಲಾಂಚ್ ಮಾಡಲು ಮುಂದಾಗಿದ್ದಾರೆ. ಇತರೆ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಟಾಟಾ ಎಲೆಕ್ಟ್ರಿಕ್ ಸ್ಕೂಟರನ್ನು (Tata Electric Scooter) ಆಧುನಿಕ ತಂತ್ರಜ್ಞಾನವನ್ನು (New Technology) ಅಳವಡಿಸಿಕೊಂಡು ತಯಾರು ಮಾಡಲಾಗಿದ್ದು, ಯಾವ ಎಲೆಕ್ಟ್ರಿಕ್ ವಾಹನಗಳಲ್ಲಿಯೂ ಕಾಣಿಸಿರದ ವಿಶೇಷ ಫೀಚರ್ಸ್ ಗಳನ್ನು ಈ ವಾಹನದಲ್ಲಿ ನೋಡಬಹುದು. ಅಂದ ಹಾಗೆ ಟಾಟಾ ಕಂಪನಿಯು ಕೇವಲ ₹67೦೦೦ ಬೆಲೆಗೆ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆ ಮಾಡಲು ಮುಂದಾಗಿರುವ ಮಾಹಿತಿ ತಿಳಿದು ಬಂದಿದೆ.

advertisement

Leave A Reply

Your email address will not be published.