Karnataka Times
Trending Stories, Viral News, Gossips & Everything in Kannada

BESCOM: ಸುಸ್ಥಿರ ‘ಇವಿ’ ಭವಿಷ್ಯದತ್ತ ಬೆಸ್ಕಾಂನ ಮಹತ್ವದ ಹೆಜ್ಜೆ!

ಪ್ರಸ್ತುತ ದಿನಗಳಲ್ಲಿ ಜನತೆ ಫಾಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ವಿದ್ಯುತ್ ಚಾಲಿತ ವಾಹನ ಅಥವಾ ಇವಿ ಬಳಕೆಯತ್ತ ಜನತೆ ಒಲವು ತೋರುತ್ತಿರುವ ನಿಟ್ಟಿನಲ್ಲಿ, ಇವಿ ಬಳಕೆಗೆ ಬೆಸ್ಕಾಂ ತನ್ನ ವಿಶೇಷ ಪ್ರೋತ್ಸಾಹವನ್ನು ನೀಡುತ್ತಿದೆ.

ಕರ್ನಾಟಕ ವಿದ್ಯುತ್ ವಾಹನ ಮತ್ತು ಶಕ್ತಿ ಶೇಖರಣೆ ನೀತಿ-2017 ಅನ್ನು ಜಾರಿಗೆ ತಂದ ಪ್ರಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾದ ಹಿನ್ನೆಲೆಯೊಂದಿಗೆ, ತನ್ನ ವ್ಯಾಪ್ತಿಯಲ್ಲಿ ಇವಿ ಬಳಕೆಗೆ ವಿಶೇಷ ಪ್ರೋತ್ಸಾಹ ನೀಡುವಲ್ಲಿ ಬೆಸ್ಕಾಂ ಶ್ರಮಿಸುತ್ತಿದೆ.

Join WhatsApp
Google News
Join Telegram
Join Instagram

136 ಅತ್ಯುತ್ತಮ ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ:

ಈವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 136 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2023ರ ಮಾರ್ಚ್ ಅಂತ್ಯದೊಳಗೆ ಇನ್ನಷ್ಟು ಹೆಚ್ಚಿನ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಬೆಸ್ಕಾಂ ಹೊಂದಿದೆ.

ಇವಿ ಅಭಿಯಾನ -2022 ರ ಆಯೋಜನೆ:

ಇವಿ ಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಇವಿ ಬಳಕೆಯ ಕುರಿತಾದ ಜಾಗೃತಿ ಮೂಡಿಸುವ ಸಲುವಾಗಿ, ಇವಿ ಅಭಿಯಾನ 2022 ಅನ್ನು ಆಯೋಜಿಸಿ, ಜನತೆಯನ್ನು ಇವಿ ಬಳಕೆಯತ್ತ ಆಕರ್ಷಿಸುವಲ್ಲಿ ಬೆಸ್ಕಾಂ ಸಫಲವಾಗಿದೆ.

ಇವಿ ಬಳಕೆದಾರರಿಗೆ ಬೆಸ್ಕಾಂ ವ್ಯಾಪ್ತಿಯಲ್ಲಿನ ಇವಿ ಚಾರ್ಜಿಂಗ್ ಕೇಂದ್ರಗಳ ವಿವರಗಳನ್ನು ತಿಳಿಯಲು ಹಾಗೂ ಇವಿ ಚಾರ್ಜಿಂಗ್ ಸ್ಲಾಟ್ ಅನ್ನು ಮುಂಗಡವಾಗಿ ಕಾಯ್ದಿರಿಸಲು ಇವಿ ಮಿತ್ರ ಎನ್ನುವ ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೆ ತಂದಿದ್ದು, ಹಲವಾರು ಇವಿ ಬಳಕೆದಾರರು ಈ ಇವಿ ಚಾರ್ಜಿಂಗ್ ಕೇಂದ್ರದ ಪ್ರಯೋಜನ ಪಡೆದಿದ್ದಾರೆ.

ಇವಿ ದ್ವಿಚಕ್ರ ವಾಹನ ಬಳಕೆದಾರರಿಗೆ ವಿಶೇಷವೆಂಬಂತೆ, ಏಥರ್ ಕಂಪನಿಯು ತನ್ನ ಎರಡು ಇವಿ ದ್ವಿಚಕ್ರ ಚಾರ್ಜಿಂಗ್ ಪಾಯಿಂಟ್’ಗಳನ್ನು ಕೆ.ಆರ್.ವೃತ್ತದಲ್ಲಿರುವ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಆರಂಭಿಸಿದ್ದು, ಏಥರ್ ದ್ವಿಚಕ್ರ ವಾಹನ ಬಳಕೆದಾರರಿಗೆ ಇಲ್ಲಿ ಉಚಿತ ಚಾರ್ಜಿಂಗ್ ಸೌಲಭ ಕಲ್ಪಿಸಿದೆ.

ಇದಲ್ಲದೇ ಬೆಸ್ಕಾಂನ ನಿಗಮ ಕಚೇರಿಯಲ್ಲಿ ಸೌರವಿದ್ಯುತ್ ಸಂಯೋಜಿತ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಬೆಸ್ಕಾಂ ಸ್ಥಾಪಿಸಿದ್ದು, ನವೀಕರಿಸಬಹುದಾದ ಶಕ್ತಿಯ ಮೂಲ ಹಾಗೂ ಪರಿಸರಸ್ನೇಹಿ ಇವಿ ಬಳಕೆಯಲ್ಲಿ ಹೊಸ ಹೆಜ್ಜೆಯನ್ನೇ ಅನುಸರಿಸಿರುವುದು ವಿಶೇಷ.

ಈ ಎಲ್ಲಾ ಗಮನಾರ್ಹ ಉಪಕ್ರಮಗಳೊಂದಿಗೆ, ಹೆಚ್ಚಿನ ಮಟ್ಟದಲ್ಲಿ ಇವಿ ಬಳಕೆಯತ್ತ ಜನರನ್ನು ಉತ್ತೇಜಿಸಲು ಬೆಸ್ಕಾಂ ಪ್ರಯತ್ನಿಸುತ್ತಿದ್ದು, ಆ ಮೂಲಕ ಸುಸ್ಥಿರ ಹಾಗೂ ಸುದೃಢ ಭವಿಷ್ಯ ನಿರ್ಮಾಣಕ್ಕೆ ನಾಂದಿ ಹಾಡಿದೆ.

ಇವಿ ಮಿತ್ರ ಮೊಬೈಲ್ ಅಪ್ಲಿಕೇಷನ್ ಅನ್ನು ನಿಮ್ಮ ಮೊಬೈಲ್’ನಲ್ಲಿ ಡೌನ್’ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್’ಗಳನ್ನು ಬಳಸಬಹುದಾಗಿದೆ.

ಆ್ಯಪಲ್ (ಐಫೋನ್) ಬಳಕೆದಾರರಿಗೆ: https://apps.apple.com/in/app/ev-mithra/id1589123105

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ: https://play.google.com/store/apps/details?id=com.mithra.techperspect&hl=en_IN&gl=US

Leave A Reply

Your email address will not be published.