ಇಂದು ಮಾರುಕಟ್ಟೆಯಲ್ಲಿ ಇಲೆಕ್ಟ್ರಿಕ್ ವಾಹನಗಳ ಖರೀದಿ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇವಿ ಕಾರ್ ಗಳು ಇರಬಹುದು, ಬೈಕ್ ಇರಬಹುದು, ವಿನೂತನ ಮಾದರಿಯಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿವೆ. ಆದ್ರೆ ಇವಿ ವಾಹನ ಖರೀದಿಸುವಾಗ ಜನರಲ್ಲಿ ಆ ವಾಹನ ಒಮ್ಮೆ ಚಾರ್ಚ್ ಮಾಡಿದ್ರೆ ಎಷ್ಟು ಕಿ.ಮೀ ಓಡುತ್ತೆ ಎನ್ನುವ ಪ್ರಶ್ನೆಯನ್ನೇ ಮೊದಲು ಕೇಳುತ್ತಾರೆ. ಇದಕ್ಕೆ ತಕ್ಕ ಹಾಗೆ ಕೆಲವು ಮೋಟಾರ್ ಕಂಪನಿಗಳು ತಮ್ಮ ಇವಿ ಕಾರ್ ನ ಸಾಮರ್ಥ್ಯವನ್ನೂ ಕೂಡ ಹೆಚ್ಚಿಸಿವೆ. ಜನರ ಈ ಅಗತ್ಯತೆಯನ್ನು ಪೂರೈಸುವುದಕ್ಕಾಗಿ ಅಮೆರಿಕದ ಕಾರ್ ಕಂಪನಿ ಫಿಸ್ಕರ್ ಆಟೋಮೋಟಿವ್, ಫಿಸ್ಕರ್ ಪಿಯರ್ (Fisker Pear) ಅನ್ನು ತಯಾರಿಸಿದೆ.
ಆಕರ್ಷಣೆಗೆ ಮತ್ತೊಂದು ಹೆಸರೇ Fisker Pear:
ಮೋಟಾರ್ ಕಂಪನಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಕಾರು ಒಮ್ಮೆ ಚಾರ್ಚ್ ಮಾಡಿದರೆ ಬರೋಬ್ಬರಿ 700 ಕಿಲೋಮೀಟರ್ ಓಡುಬಲ್ಲದು. ಅಷ್ಟೇ ಅಲ್ಲ, ಈ ಕಾರಿನ ವಿನ್ಯಾಸ, ಲುಕ್, ಡಿಸೈನ್ ಎಲ್ಲವೂ ಮತ್ತೊಮ್ಮೆ ಮಗದೊಮ್ಮೆ ನಿಮ್ಮನ್ನು ಆಕರ್ಷಿಸುತ್ತವೆ. ಇ/ಇ ಆರ್ಕಿಟೆಕ್ಚರ್ ಮತ್ತು ಬ್ಲೇಡ್ ಕಂಪ್ಯೂಟರ್ ವ್ಯವಸ್ಥೆಯನ್ನು ಅಳವಡಿಸಲಾಗಿರುವ ಈ ಕಾರಿನಲ್ಲಿ ಪ್ರಯಾಣ ಸುರಕ್ಷಿತ, ಆರಾಮದಾಯಕ ಎಂದು ಕಂಪನಿ ಘೋಷಿಸಿದೆ.
ಎಲ್ಲಾ ರೀತಿಯ ಪ್ರಯಾಣಕ್ಕೂ ಸೈ Fisker Pear EV:
ಕ್ರಾಸ್ಒವರ್ ಎಲ್ ಯು ವಿ ಇದಾಗಿದ್ದು ನಗರ ಮತ್ತು ಆಫ್ ರೋಡಿಂಗ್ ಎರಡೂ ರೀತಿಯ ಪ್ರಯಾಣಕ್ಕೆ ಉತ್ತಮವಾಗಿದೆ. ಈ ಕಾರು ದೇಶಿಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಈ ಕಾರಿನ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಂಪನಿ ಸಧ್ಯದಲ್ಲಿಯೇ ಹಂಚಿಕೊಳ್ಳಲಿದೆ.