Karnataka Times
Trending Stories, Viral News, Gossips & Everything in Kannada

Fortuner Alternative Cars: ಫಾರ್ಚುನರ್ ಗಿಂತ 20 ಲಕ್ಷ ಕಡಿಮೆ ಬೆಲೆಯಲ್ಲಿ ಬರಲಿದೆ ಈ ಕಾರು! ಈಗಲೇ ಬುಕ್ ಮಾಡುತ್ತಿರುವ ಜನ

advertisement

KIA CARNIVAL: ಹಲವು ವರ್ಷಗಳಿಂದ ಅತ್ಯುತ್ತಮ ಕಾರ್ ಗಳನ್ನು ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಮುಂದಿರುವ ಕಿಯಾ ಕಂಪನಿಯು ಇದೀಗ ಇತ್ತೀಚಿಗಷ್ಟೇ 11 ಸೀಟುಗಳಿರುವ ಕ್ಲಾಸಿಕ್ ಕಾರ್ನಿವಲ್(Classic carnival car) ಕಾರನ್ನು ಪರಿಚಯಿಸಲು ಮುಂದಾಗಿದ್ದು, ಇದರ ಸ್ಟೈಲಿಶ್ ಲುಕ್ ಹಾಗೂ ವಿಶಾಲತೆಗೆ ಗ್ರಾಹಕರು ಮನಸೋತು ಖರೀದಿಸಬೇಕೆಂಬ ಹಿಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಕಿಯಾ ಕಂಪನಿಯು 11 ಸೀಟ್(11 seater) ಗಳಿರುವ ಈ ಕಾರನ್ನು ಅತ್ಯುತ್ತಮ ಹಾಗೂ ಆಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಿ ನವೀಕಾರ ಮಾಡಿ ಮರು ಪರಿಚಯಿಸಲು ಮುಂದಾಗಿದ್ದಾರೆ.

ಫಾರ್ಚುನರ್ ಕಾರಿಗಿಂತ 10 ಪಟ್ಟು ಮಿಗಿಲಾಗಿರುವ ಕಿಯಾ ಕಾರ್ನಿವಲ್

ಕಿಯಾ ಕಂಪನಿ ತನ್ನ ಎಲ್ಲಾ ಕಾರುಗಳನ್ನು ಕ್ಲಾಸಿಕ್ ಸ್ಟೈಲ್ ನಲ್ಲಿ ತಯಾರು ಮಾಡಿದಂತೆ ಕಿಯಾ ಕಾರ್ಣಿವಲ್ ವಾಹನವನ್ನು ತಯಾರಿಸಿದ್ದು, ಇದರಲ್ಲಿ 12.3 ಇಂಚಿನ ಡಿಸ್ಪ್ಲೇ ಹೋಲ್ಡರ್, ಎಲ್ಲಾ ಸೀಟ್ಗಳಿಗೂ ಏರ್ ಕಂಡೀಷನಿಂಗ್ ವ್ಯವಸ್ಥೆ, ಆಡಿಯೋ ಕಂಟ್ರೋಲ್ ಮತ್ತು 360 ಡಿಗ್ರಿ ಕ್ಯಾಮೆರಾಗಳಿದೆ ಅದರಂತೆ ಪ್ರೀಮಿಯಂ ಲುಕ್ಕನ್ನು ಹೊಂದಿರುವ ಒಳಾಂಗಣವನ್ನು ಕ್ರೋಮ್ ಫಿನಿಶ್ ಮಾಡಿ ತಯಾರು ಮಾಡಿದ್ದಾರೆ.

CHEAQP CARS THAN FORTUNER

advertisement

ಶಕ್ತಿಯುತ ಇಂಧನ ಮತ್ತು ಮೈಲೇಜ್ ಕೆಪ್ಯಾಸಿಟಿ

2.2 ಲೀಟರ್ ಟರ್ಬೋ ಡೀಸಲ್ ಇಂಜಿನ್ ಅಳವಡಿಸಿ ತಯಾರು ಮಾಡಲಾಗಿರುವ ಕಿಯಾ ಕಾರ್ನಿವಲ್ ವಾಹನ 210 ಹಾರ್ಸ್ಪವರನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆಟೋಮೆಟಿಕ್ ಮತ್ತು ಮಾನ್ಯುಯಲ್ ಟ್ರಾನ್ಸ್ ಮಿಷನ್(Automatic and manual transmission) ಎಂಬ ಎರಡು ಆಯ್ಕೆಯಲ್ಲಿ ಬರಲಿರುವ ಈ ವಾಹನವು ಪ್ರತಿ ಲೀಟರ್ ಡೀಸೆಲ್ ಗೆ ಬರೋಬರಿ 21 km ವರೆಗೂ ಮೈಲೇಜ್ ನೀಡುತ್ತದೆ. ಹೀಗೆ ಇತರೆ ವಾಹನಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಮೈಲೇಜ್ ಕೊಡುವ 11ಸೀಟರ್ ವಾಹನವಿದು ಎಂದರೆ ತಪ್ಪಾಗಲಾರದು.

ಅಗ್ಗದ ಬೆಲೆಯಲ್ಲಿ ಕಿಯಾ ಕಾರ್ನಿವಲ್ ಲಭ್ಯ

ಏಳು ಸೀಟಿನ ಫಾರ್ಚುನರ್(Fortuner) ವಾಹನಕ್ಕೆ ಹೋಲಿಸಿದರೆ ಕಿಯಾ ಕಾರ್ನಿವಲ್ ವಾಹನವನ್ನು ಗ್ರಾಹಕರ ಕೈಗೆಟುಕುವ ಬೆಲೆಗೆ ನೀಡಲು ಕಂಪನಿ ಮುಂದಾಗಿದ್ದು ನೀವೇನಾದರೂ ನಿಮ್ಮ ಸಹ ಕುಟುಂಬಗೋಸ್ಕರ ಕಾರು ಒಂದನ್ನು ತೆಗೆದುಕೊಳ್ಳುವ ಯೋಜನೆಯಲ್ಲಿದ್ದರೆ ಆಧುನಿಕ ತಂತ್ರಜ್ಞಾನದಲ್ಲಿ ತಯಾರಾಗಿರುವ ಪ್ರೀಮಿಯಂ ವರ್ಷನ್ ನ ಕಿಯಾ ಕಾರ್ನಿವಲ್(Kia Carnival) ವಾಹನವನ್ನು 30 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಇದರ ಇತರೆ ರೂಪಾಂತರಗಳ ಕುರಿತಾದ ಮಾಹಿತಿಯನ್ನು ಕಂಪನಿ ಎಲ್ಲಿಯೂ ಅಧಿಕೃತವಾಗಿ ಹಂಚಿಕೊಂಡಿಲ್ಲ.CHEAP CARS THAN FORTUNER

advertisement

Leave A Reply

Your email address will not be published.