Karnataka Times
Trending Stories, Viral News, Gossips & Everything in Kannada

Harley Davidson: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಹಾರ್ಲೆ-ಡೇವಿಡ್ಸನ್ ಬೈಕ್ ಬಿಡುಗಡೆ ದುಬಾರಿ ಲುಕ್!

ಪ್ರತಿ ಬೈಕ್ ಲವರ್ಸ್ ಗೆ ಹಾರ್ಲೆಯಲ್ಲಿ ರೈಡಿಂಗ್ ಮಾಡೋದು ಬಹಳ ಇಷ್ಟ. ಆದರೆ ಹಾರ್ಲೆ ಡೇವಿಡ್ಸನ್ ಬೈಕ್ ಗಳು(Harley Davidson Bike) ಬಹಳ ದುಬಾರಿ. ಹಾಗಾಗಿ ಹೆಚ್ಚು ಜನರಿಗೆ ಅದನ್ನು ಖರೀದಿ ಮಾಡುವುದು ಅಷ್ಟು ಸುಲಭ ಆಗಿರಲಿಲ್ಲ. ಆದರೆ ಬೈಕ್ ಪ್ರೇಮಿಗಳ ಮನಸ್ಸನ್ನು ಅರಿತ ಕಂಪನಿ ಹಾರ್ಲೆ ಡೇವಿಡ್ಸನ್ ಖರೀದಿ ಮಾಡುವ ಬೈಕರ್ ಗಳ ಕನಸನ್ನು ನನಸು ಮಾಡಲು ಹೊರಟಿದೆ. ಹಾರ್ಲೆ ಡೇವಿಡ್ಸನ್ ಎಕ್ಸ್ 350 ಬಿಡುಗಡೆಯಾಗಲಿದ್ದು ಜನರ ಕೈ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ಬರಲಿದೆ. ಹಾರ್ಲೆ ಡೇವಿಡ್ಸನ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟರೆ ರಾಯಲ್ ಎನ್ಫೀಲ್ಡ್ ಗೆ ನೇರವಾದ ಪೈಪೋಟಿ ನೀಡಲಿದೆ.

ಹಾರ್ಲೆ ಡೇವಿಡ್ಸನ್ ಎಕ್ಸ್ 350 ವೈಶಿಷ್ಟ್ಯತೆ:
ಹಾರ್ಲೆ ಡೇವಿಡ್ಸನ್ ಮೋಟಾರ್ ಬೈಕ್(Motor Bike) ಅನ್ನು ಮೊದಲ 350 ಸಿಸಿ ಬೈಕ್ ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಬೈಕ್ ನ ಎಂಜಿನ್ ಬಲಿಷ್ಠವಾಗಿದ್ದು ಆಕರ್ಷಕ ಲುಕ್ ಕೂಡ ಹೊಂದಿದೆ. ಇದರ ಬೆಲೆ ಚೀನಾದ ಕರೆನ್ಸಿಯಲ್ಲಿ 33 ಸಾವಿರ ಯುವಾನ್ ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ 3.93 ಲಕ್ಷ ರೂಪಾಯಿ. ಈ ಬೈಕ್ QJ ಮೋಟಾರ್ ನಿಂದ ಪಡೆದ 350 ಸಿಸಿ, ಸಮನಾಂತರ ಟ್ವಿನ್ ಇಂಜಿನ್ ಹೊಂದಿದೆ.

Join WhatsApp
Google News
Join Telegram
Join Instagram

ಈ ಬೈಕ್ ಹೆಚ್ಚು ಸ್ಪೋರ್ಟ್ಸ್ ಲುಕ್(Sports Look) ಹೊಂದಿದ್ದು, ಸ್ಪೋರ್ಟ್ ಸ್ಟರ್ XR1 1200X ನಿಂದ ಪ್ರೇರಿತವಾಗಿದೆ. ಇದರ ಮುಂಭಾಗದ ಲುಕ್ ಹೊಸದಾಗಿದ್ದು ಸಿಂಗಲ್ ಪ್ಯಾಡ್ ಕನ್ಸೋಲ್ ಹೊಂದಿದೆ. ವೃತ್ತಾಕಾರದ ಹೆಡ್ ಲ್ಯಾಂಪ್(Head Lamp) ಅಳವಡಿಸಲಾಗಿದೆ. 13.5 ಲೀ ಸಾಮರ್ಥ್ಯದ ಇಂದಿನ ಟ್ಯಾಂಕ್ ಅಳವಡಿಸಲಾಗಿದ್ದು ಟಿಯರ್ ಡ್ರಾಪ್ ಆಕಾರ ಪಡೆದುಕೊಂಡಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಹೆಡ್ ಲೈಟ್ ನಲ್ಲಿ ಇರುವ ಹಾರ್ಲೆ ಲೋಗೋ, ಬೈಕ್ ಪ್ರೀಮಿಯಂ ಲುಕ್ ಹೆಚ್ಚಿಸಿದೆ.

ಹಾರ್ಲೆ ಎಂಜಿನ್ ಸಾಮರ್ಥ್ಯ ಎಷ್ಟಿದೆ ಗೊತ್ತಾ?
353ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು ಲಿಕ್ವಿಡ್ ಕುಲ್ಡ್ ಪ್ಯಾರಲಲ್ ಟ್ವಿನ್ ಇಂಜಿನ್ ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇನ್ನು ಎಂಜಿನ್ ಕೂಡ ಶಕ್ತಿಶಾಲಿಯಾಗಿದ್ದು 36.7 ಪಿ ಎಸ್ ಶಕ್ತಿಯನ್ನು 31 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ 350 ಸಿಸಿ ರಾಯಲ್ ಎನ್ಫೀಲ್ಡ್ ಬೈಕ್ ಗಳಿಗೆ ಹೋಲಿಸಿದರೆ ಹಾರ್ಲೆ ಇನ್ನಷ್ಟು ಪ್ರಭಾವಶಾಲಿ ಹಾಗೂ ಶಕ್ತಿಶಾಲಿಯಾಗಿ ಕಾಣಿಸುತ್ತದೆ.

ಎದುರುಗಡೆ 41ಎಂಎಂ ಅಪ್ಸೆಟ್ ಫೋರ್ಕ್ ರಿಬೌಂಡ್ ಹಾಗೂ ಹಿಂಭಾಗದಲ್ಲಿ ಫ್ರೀಲೋಡ್ ರೀಬೌಂಡ್ ಹೊಂದಾಣಿಕೆ ಪಡೆದುಕೊಂಡಿದೆ. ನಾಲ್ಕು ಪಿಸ್ಟನ್ ಕ್ಯಾಲಿಪರ್ ಗಳನ್ನು ಮುಂಭಾಗದಲ್ಲಿಯೂ ಸಿಂಗಲ್ ಪಿಸ್ಟನ್ ಘಟಕವನ್ನು ಹಿಂಭಾಗದಲ್ಲಿಯೂ ಕಾಣಬಹುದು. ಡುಯಲ್ ಚಾನೆಲ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್(Anti Lock Breaking System) ಕೂಡ ಅಳವಡಿಸಲಾಗಿದೆ. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ ಲೀಟರಿಗೆ 20.2 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಬೈಕ್ 180 ಕೆಜಿ ತೂಕ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಹಾರ್ಲೆ ಡೇವಿಡ್ಸನ್ X350 ದೇಶಕ್ಕೆ ಎಂಟ್ರಿ ಯಾವಾಗ?
ಈ ಬೈಕ್ ದೇಶಿಯ ಮಾರುಕಟ್ಟೆಗೆ ಯಾವಾಗ ಪರಿಚಯಿಸಲಾಗುತ್ತದೆ ಯಾವಾಗ ಮಾರುಕಟ್ಟೆಗೆ ಬರಬಹುದು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ ಈ ಮೋಟಾರ್ ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಅದರ ಶಕ್ತಿ ಸಾಮರ್ಥ್ಯ ಹಾಗೂ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಇದೆ.

Leave A Reply

Your email address will not be published.