Karnataka Times
Trending Stories, Viral News, Gossips & Everything in Kannada

Maruti Suzuki Cars: ಮಾರುತಿ ಸುಜುಕಿಯ 7 ವಾಹನಗಳ ಮೇಲೆ ಭಾರಿ ಡಿಸ್ಕೌಂಟ್!

ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಚ್ ನಲ್ಲಿ ಸಾಕಷ್ಟು ವ್ಯವಹಾರಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅದೇ ರೀತಿಯಾಗಿ ಮೋಟಾರ್ ಕಂಪನಿಗಳು ಕೂಡ ಈ ಸಂದರ್ಭದಲ್ಲಿ ತಮ್ಮ ವಾಹನಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಕೊಡುಗೆಗಳನ್ನು ಘೋಷಿಸುತ್ತವೆ. ಅದೇ ರೀತಿಯಾಗಿ ಮಾರುತಿ ಸುಜುಕಿ ತನ್ನ 7 ವಾಹನಗಳ ಮೇಲೆ ವಿಶೇಷವಾದ ಕೊಡುಗೆಯನ್ನು ಘೋಷಿಸಿದೆ. ನೀವು ಹೊಸ ಗಾಡಿ ಖರೀದಿ ಮಾಡಲು ಬಯಸಿದ್ದರೆ ತಪ್ಪದೆ ಈ ಆಫರ್ ಬಗ್ಗೆ ತಿಳಿದುಕೊಳ್ಳಿ.

Maruti Suzuki Wagon R:

ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕವಾದ ಬೇಡಿಕೆ ಗಳಿಸಿಕೊಂಡಿದೆ. ಹಾಗಾಗಿ ಮಾರುತಿ ಕಂಪನಿ ಈ ಗಾಡಿಯ ಮೇಲೆ 64, 000ರೂ. ಗಳ ಭಾರಿ ರಿಯಾಯಿತಿ ನೀಡುತ್ತಿದೆ. ಒಂದು ಲೀಟರ್ ಎಲ್ ಎಕ್ಸ್ ಐ, ವಿ ಎಕ್ಸ್ ಐ ರೂಪಾಂತರದ ಮೇಲೆ 40,000 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅದೇ ರೀತಿ 15 ರಿಂದ 20 ಸಾವಿರದವರೆಗೆ ಎಕ್ಸ್ಚೇಂಜ್ ಆಫರ್ ಹೆಚ್ಚುವರಿಯಾಗಿ ನೀಡಲಾಗುತ್ತಿದೆ ನಾಲ್ಕು ಸಾವಿರ ರೂಪಾಯಿಗಳ ಕಾರ್ಪೋರೇಟ್ ಡೀಲ್ ಕೂಡ ಪಡೆಯಬಹುದು.

Join WhatsApp
Google News
Join Telegram
Join Instagram

Swift:

ಮಾರುತಿ ಸುಜುಕಿ ತನ್ನ ಜನಪ್ರಿಯ ಹ್ಯಾಚ್ ಬ್ಯಾಕ್ ಆಗಿರುವ ಸ್ವಿಫ್ಟ್ ಕಾರಿನ ಮೇಲೂ ಕೂಡ ಒಳ್ಳೆಯ ಕೊಡುಗೆಯನ್ನು ಘೋಷಿಸಿದೆ. ಉನ್ನತ ಮಟ್ಟದ ರೂಪಂತರಗಳಲ್ಲಿ 54,000ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಅದೇ ರೀತಿಯಾಗಿ ಎಕ್ಸ್ಚೇಂಜ್ ಆಫರ್ ಆಗಿ 30 ಸಾವಿರಕ್ಕೂ ಅಧಿಕ ರಿಯಾಯಿತಿ ಪಡೆಯಬಹುದು. ಅದೇ ರೀತಿಯಾಗಿ ನಾಲ್ಕು ಸಾವಿರ ಕಾರ್ಪೊರೇಟ್ ರಿಯಾಯಿತಿ ಕೂಡ ನಗದು ರೂಪದಲ್ಲಿಯೇ ನಿಮಗೆ ಸಿಗುತ್ತದೆ. ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ವಿ ಎಕ್ಸ್ ಐ, ಝೆಡ್ ಮತ್ತು ಝೆಡ್ ಪ್ಲಸ್ ರೂಪಾಂತರಗಳ ಮೇಲೆ 34 ಸಾವಿರ ರೂಪಾಯಿಗಳ ರಿಯಾಯಿತಿ ಸಿಗಲಿದೆ. ಅದೇ ರೀತಿ ಎಲ್ ಎಕ್ಸ್ ಐ ನಲ್ಲೂ 29 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ. ವಿನಿಮಯಕ್ಕಾಗಿ 15 ರಿಂದ 10 ಸಾವಿರ ರೂಪಾಯಿ ನಗದು ಸೌಲಭ್ಯ ಪಡೆಯಬಹುದು ಇದರಲ್ಲಿಯೂ ಕಾರ್ಪೊರೇಟ್ ಕೊಡುಗೆ ನಾಲ್ಕು ಸಾವಿರ ರೂಪಾಯಿಗಳಿಗೆ ಸೀಮಿತ ಮಾಡಲಾಗಿದೆ.

Alto K10 and S Presso:

ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯ ಕಾರುಗಳಾಗಿರುವ ಆಲ್ಟೋ ಕೆ ಟೆನ್ ಹಾಗೂ ಎಕ್ಸ್ಪ್ರೆಸ್ಸೋ ಮೇಲೆಯೂ ಡಿಸ್ಕೌಂಟ್ ಘೋಷಿಸಲಾಗಿದೆ. ಮೂವತ್ತು ಸಾವಿರದವರೆಗೆ ರಿಯಾಯಿತಿ ಪಡೆಯಬಹುದು ಅದೇ ರೀತಿಯಾಗಿ ವಿನಿಮಯಕ್ಕಾಗಿ 15,000 ಹಾಗೂ ಕಾರ್ಪೊರೇಟ್ ಆಫರ್ ಆಗಿ ನಾಲ್ಕು ಸಾವಿರ ರೂಪಾಯಿಗಳನ್ನು ನಗದು ರೂಪದಲ್ಲಿ ಪಡೆಯಲು ಸಾಧ್ಯವಿದೆ. ಅಷ್ಟೇ ಅಲ್ಲ ಸಿ ಎನ್ ಜಿ ರೂಪಾಂತರದ ಮೇಲೆಯೂ 15,000 ವಿನಿಮಯ ರಿಯಾಯಿತಿ ನೀಡಲಾಗಿದೆ. ಆಲ್ಟೊ ಕೆ10 ಮಾತ್ರವಲ್ಲದೇ ಎಕ್ಸ್ ಪ್ರೆಸ್ಸೋ ಕಾರ್ ನಲ್ಲಿಯೂ ಕೂಡ 49 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್ ಪಡೆಯಬಹುದು.

Maruti Suzuki Celerio:

ಈ ಪ್ರಸಿದ್ಧ ಹ್ಯಾಚ್ ಬ್ಯಾಕ್ ಕಾರಿಗೆ 44,000 ದಿಂದ 25000 ರೂ.ವರೆಗೆ ರಿಯಾಯಿತಿ ಪಡೆಯಬಹುದು. 15000 ಕಾರ್ಪೊರೇಟ್ ಕೊಡುಗೆ ಆಗಿದ್ದರೆ 4000 ರೂ. ಕಾರ್ಪೊರೇಟ್ ಕೊಡುಗೆ ಸಿಗುತ್ತದೆ. ಅದೇ ರೀತಿಯಾಗಿ ಸಿ ಎನ್ ಜಿ ಆವೃತ್ತಿಗೆ 25,000 ರೂ. ರಿಯಾಯಿತಿ ಸಿಗುತ್ತದೆ. ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳ ವಿನಿಮಯ ಕೊಡುಗೆ ಪಡೆಯಬಹುದು.

Maruti Suzuki Alto 800:

ಮಾರುತಿ ಅವರು ಕಾರು ತಯಾರಿಕೆಯಲ್ಲಿಯೇ ಅತ್ಯಂತ ಅಗ್ಗದ ಕಾರು ಇದು ಈ ವಾಹನದ ಮೇಲೆ ಕೂಡ 38,00 ರೂ. 0 ವರೆಗೆ ರಿಯಾಯಿತಿ ಪಡೆಯುತ್ತೀರಿ. 15,000ರೂ. ಹಾಗೂ 3,000 ರೂ. ವರೆಗಿನ ಕಾರ್ಪೊರೇಟ್ ಕೊಡುಗೆ ನೀಡಲಾಗುತ್ತದೆ.

Dzire Car:

ಮಾರುತಿ ಸುಜುಕಿ ಅವರ ಡಿಸೈರ್ ಕಾರ್ ಕೂಡ ಭಾರತದಲ್ಲಿ ಮಾರಾಟವಾಗುವ ಕಾರ್ ಗಳಲ್ಲಿ ಟಾಪ್ 5 ಸ್ಥಾನದಲ್ಲಿ ಇದೆ. ಮಾರ್ಚ್ ಮುಗಿಯುವುದರ ಒಳಗೆ ಈ ಕಾರಿನ ಮೇಲೆಯೂ 10 ಸಾವಿರದವರಿಗೆ ರಿಯಾಯಿತಿಯನ್ನು ಪಡೆಯಬಹುದು. ಆದರೆ ಈ ಕಾರಿನಲ್ಲಿ ಉಳಿದ ಯಾವ ರಿಯಾಯಿತಿಗಳು ಕೂಡ ಅನ್ವಯ ಆಗುವುದಿಲ್ಲ.

Leave A Reply

Your email address will not be published.