Tata Nexon Facelift: 2024ರಲ್ಲಿ ಬಿಡುಗಡೆಯಾಗಲಿದೆ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್; ಇಲ್ಲಿದೆ ಅದ್ಬುತ ಫೀಚರ್ಸ್
ಟಾಟಾ ಮೋಟಾರ್ಸ್(Tata Motors), ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್(Tata Nexon facelift) ಮೇಲೆ ಕೆಲಸ ಮಾಡುತ್ತಿದೆ. ಮುಂಬರುವ ನೆಕ್ಸಾನ್ ಈಗ ಚಾಲ್ತಿಯಲ್ಲಿರುವ ನೆಕ್ಸಾನ್ ಗಿಂತಲೂ ಸಂಪೂರ್ಣ ವಿಭಿನ್ನವಾಗಿ ಇರಲಿದೆ. 2024ರಲ್ಲಿ ನೆಕ್ಸಾನ್ ಫೇಸ್ ಲಿಫ್ಟ್ ರುಪಾಂತರ ನಿಮ್ಮ ಮುಂದೆ ಇರಲಿದೆ. ವಿನ್ಯಾಸ, ಹೊಸ ಇಂಟೀರಿಯರ್‌ಗಳನ್ನು ಸಹ ಅಳವಡಿಸಲಾಗಿದೆ.
ನೆಕ್ಸಾನ್ ಉತ್ತಮ ಬೇಡಿಕೆಯನ್ನು ಹೊಂದಿರುವ ಕಾರ್. ಭಾರತದಲ್ಲಿ ಅಟಿ ಹೆಚ್ಚು ಯುನಿಟ್ ಗಳು ಮಾರಾಟವಾಗಿವೆ. ಇದೀಗ ಟಾಟಾ(Tata) ತನ್ನ ನವೀಕರಿಸಿದ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆಬಿಡುಗಡೆ ಮಾಡುವ ಯೋಜನೆ ಮಾಡಿದೆ. ಅಂದಹಾಗೆ ನವೀಕರಣ ಮಾಡೆಲ್ ನಲ್ಲಿ ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ(Touch Screen) ಫೇಸ್‌ಲಿಫ್ಟ್ ಅನ್ನು ನೋಡಬಹುದು.
ಟಾಟಾ ನೆಕ್ಸಾನ್ ಹೊಸ ಮಾದರಿಯ ವಿನ್ಯಾಸ:
ಸ್ಲಿಮ್ ಹೆಡ್‌ಲ್ಯಾಂಪ್‌ಗಳೊಂದಿಗೆ ಕರ್ವ್ ಕಾಣಬಹುದು, ಇನ್ನು ಹಿಂಭಾಗದಲ್ಲಿ ಎಲ್‌ಇಡಿ(LED) ಟೈಲ್-ಲ್ಯಾಂಪ್‌ಗಳಿಗೆ ಸಂಪರ್ಕಗೊಳ್ಳುವ ಲೈಟ್ ಬಾರ್(Light Bar) ಅಳವಡಿಸಲಾಗಿದೆ. ಒಟ್ತಾರೆಯಗಿ ನೆಕ್ಸಾನ್ ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಭಾರಿ ವ್ಯತ್ಯಾಸ ಕಾಣಬಹುದು. ಅಲಾಯ್ ವೀಲ್ಸ್ ಗಳಲ್ಲಿಯೂ ಹೊಸ ವಿನ್ಯಾಸ ಇದ್ದು, ಒಳಭಾಗದಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.ಅಷ್ಟೇ ಅಲ್ಲ, ರೂಪಾಂತರಿ ನೆಕ್ಸಾನ್ 360-ಡಿಗ್ರಿ ಕ್ಯಾಮೆರಾವನ್ನು(Camera) ಕೂಡ ಹೊಂದಿರಬಹುದು.
ಇನ್ನು 2024ರಲ್ಲಿ ಪರಿಚಯಗೊಳ್ಳಲಿರುವ ವಿನೂತನ ನೆಕ್ಸಾನ್ ನ ಪವರ್‌ಟ್ರೇನ್‌ನಲ್ಲಿಯೂ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದು 1.2ಲಿ ಟರ್ಬೊ ಪೆಟ್ರೋಲ್ ಎಂಜಿನ್(Tarbo Petrol Engine) ಇದೆ. ಈಗಿರುವ ಎಂಜಿನ್ ಗಿಂತಲೂ ಶಕ್ತಿಶಾಲಿ ಇಂಜಿನ್ ಇದಾಗಲಿದೆ. ಸ್ವಯಂಚಾಲಿತ DCT ಗೇರ್‌ಬಾಕ್ಸ್(GearBox) ಅನ್ನು ಕೂಡ ಅಳವಡಿಸಲಾಗುವುದು. ಮುಂದಿನ ಕೆಲವು ವರ್ಷಗಳಲ್ಲಿ ಮಾರುಕಟ್ಟೆಯನ್ನು ಆರವಿಸಲಿರುವ ನೆಕ್ಸಾನ್ ಹೊಸ ಮಾದರಿ 2024 ರಲ್ಲಿ ದೇಶೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿದೆ. ಕರ್ವ್ ಕೂಪ್ ಎಸ್‌ಯುವಿ(Curvv Coupe SUV) ಮತ್ತು ಇತರ ಕೆಲವು ಕಾರುಗಳು ಕೂಡ ಸಮಯದಲ್ಲಿ ಬಿಡುಗಡೆಯಾಗಲಿವೆ.