Karnataka Times
Trending Stories, Viral News, Gossips & Everything in Kannada

Hyundai: ಹೊಸ ಕಾರು ಖರೀದಿ ಮೇಲೆ ಬಂಪರ್ ಅಫರ್ ಕೊಟ್ಟ ಹ್ಯುಂಡೈ ಕಂಪೆನಿ

ಒಂದು ಕಾಲದಲ್ಲಿ ಕಾರು ಒಂದು ಶ್ರೀಮಂತಿಕೆ ಪ್ರತಿಬಿಂಬಿಸುವ ವಾಹನವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ, ಸಾಮಾನ್ಯ ವರ್ಗದ ಜನರು ಕೂಡ ಇಎಂಐ (EMI) ಕೊಟ್ಟು ಕಾರು ಖರೀದಿ ಮಾಡುತ್ತಿದ್ದಾರೆ. ಕಾರು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಕಾರು ಉತ್ಪಾದಕ ಕಂಪೆನಿಗಳ ಸಂಖ್ಯೆ ಸಹ ಹೆಚ್ಚಾಗಿದೆ. ಈಗ ಅದೇ ರೀತಿ ಕಾರಿನ ಬೆಲೆ ಸಹ ಏರಿಕೆಯಾಗುತ್ತಲೇ ಇರುವುದನ್ನು ಕಾಣಬಹುದು. ಆದರೆ ಈಗ ಹ್ಯುಂಡೈ ಕಂಪೆನಿ ಮಾತ್ರ ಈ ನಿರ್ಧಾರಗಳಿಂದ ವ್ಯತಿರಿಕ್ತವಾಗಿದೆ ಎನ್ನಬಹುದು .

ಯಾವ ಕಾರಿನ ಬೆಲೆ ಕಡಿಮೆ:

ಪ್ರತಿಷ್ಠಿತ ಕಾರು ಮಾರಾಟ ಕಂಪೆನಿ ಎನಿಸಿದ ಹ್ಯುಂಡೈ ಐ 20 ಪ್ರೀಮಿಯಂ ಹ್ಯಾಚ್‌ಬ್ಯಾಕ್ (Hyundai i20 premium) ಬೆಲೆಯನ್ನು ಕಡಿಮೆ ಮಾಡಲಾಗಿದೆ. ಹ್ಯುಂಡೈ ಐ 20 ಹ್ಯಾಚ್‌ಬ್ಯಾಕ್‌ನ ಸ್ಪೋರ್ಟ್ಸ್ ಆವೃತ್ತಿಯ ಬೆಲೆ ಬದಲಾಗಿದೆ. ಈ ಮೂಲಕ i20 Sportz ಬೆಲೆ 8.05 ಲಕ್ಷಕ್ಕೆ ಮಾರಾಟವಾಗುತ್ತಿದ್ದು i20 Sportz IVT ಬೆಲೆ 9.07 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ಇದು ಹಿಂದಿನ ಬೆಲೆಗಿಂತ ಕಡಿಮೆ ದರವಾಗಿದ್ದು ಮಹಾ ಉಳಿತಾಯವನ್ನು ಗ್ರಾಹಕರ ಹಿತದೃಷ್ಟಿಯಿಂದ ಇಟ್ಟಿದೆ ಎನ್ನಲಾಗಿದೆ.

Join WhatsApp
Google News
Join Telegram
Join Instagram

ಈ ಕಾರಿನ ವೈಶಿಷ್ಟ್ಯಗಳೇನು?

ಸದ್ಯ ಈ ಕಾರು ಮಾರುಕಟ್ಟೆಯಲ್ಲಿ ಬಹುಬೇಡಿಕೆ ಹೊಂದಿರುವ ಕಾರು ಆಗಿದ್ದು, ಹ್ಯುಂಡೈ ಕಂಪೆನಿಯ ಇತರ ಕಾರಿನಂತೆ ಅತ್ಯಧಿಕ ವೈಶಿಷ್ಟ್ಯತೆ ಇದಕ್ಕೂ ಇದೆ. ಆದರೆ ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್ (Automatic Climate Control) ವೈಶಿಷ್ಟ್ಯಕ್ಕೆ ಬದಲಾಗಿ ಹೀಟರ್‌ನೊಂದಿಗೆ ಸಾಂಪ್ರದಾಯಿಕ ಮ್ಯಾನ್ಯುವಲ್ ಎಸಿಗೆ (Manual Ac) ಬದಲಾಯಿಸಿದೆ. ಮೈಲೆಜ್ (Mileage), ಹೈ ಸ್ಪೀಡ್ (High speed), ಆಕರ್ಷಕ ಬಣ್ಣ ದೊಂದಿಗೆ ಈ ಕಾರು ಸದಾ ಮುಂಚುಣಿಯಲ್ಲಿದೆ‌ ಎನ್ನಬಹುದು.

ಹುಂಡೈ ಔರಾ (Hyundai Aura) ಕಾರು ಇದು ಗ್ರಾಹಕರಿಗೆ ಕೈಗೆಟುಕುವ ಸೆಡಾನ್ ಆಗಿದ್ದು, ಹೋಂಡಾ ಅಮೇಜ್‌ (Honda Amaze) ನಂತಹ ಕಾರುಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ. ಹ್ಯುಂಡೈ ಈ ತಿಂಗಳು ಔರಾದಲ್ಲಿ ರೂ 48,000 ವರೆಗಿನ ಕೊಡುಗೆಗಳನ್ನು ನೀಡಿ, ಇದರಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ ಎನ್ನಲಾಗಿದೆ

Leave A Reply

Your email address will not be published.