ಸದ್ಯ ಹ್ಯುಂಡೈ ಕ್ರೆಟಾ (Hyundai Creta) ಎಸ್‍ಯುವಿಯು (SUV) ಹಲವು ಮಾರುಕಟ್ಟೆಗಳಲ್ಲಿ ಜನಪ್ರಿಯವಾದ ಎಸ್‍ಯುವಿಯಾಗಿದ್ದು ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ (Indian Market) ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಹೌದು ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ (Design and Advanced Features) ಮೂಲಕವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ.
ಸದ್ಯ ಇದೀಗ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ 2022ರ ಬ್ರೆಜಿಲ್ ಮಾರುಕಟ್ಟೆಯಲ್ಲಿ ಕ್ರೆಟಾ ಎನ್ ಲೈನ್ ಎಸ್‍ಯುವಿಯನ್ನು ಪರಿಚಯಿಸಿತ್ತು. ಇನ್ನು ಈ ಆವೃತ್ತಿಯು ಖರೀದಿದಾರರಿಂದ ಭಾರೀ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದರಿಂದಾಗಿ ಕಂಪನಿಯು ಇದೀಗ ಹುಂಡೈ ಕ್ರೆಟಾ ಎನ್ ಲೈನ್ ನೈಟ್ ಎಡಿಷನ್ ಅನ್ನು ಬ್ರೆಜಿಲ್‌ನಲ್ಲಿ ಪರಿಚಯಿಸಿದೆ. ಅಲ್ಲದೇ ಹುಂಡೈ ಕ್ರೆಟಾ ಎನ್ ಲೈನ್ ನೈಟ್ ಎಡಿಷನ್ ಎಸ್‍ಯುವಿಯ ಕೇವಲ 900 ಯುನಿಟ್‌ಗಳು ಮಾತ್ರ ಲಭ್ಯವಿದೆ.
ಇನ್ನು ಇದು ಸಾಮಾನ್ಯ ಎನ್ ಲೈನ್ ಮಾದರಿಗೆ ಹೋಲಿಸುವುದಾದರೆ ಕೆಲವು ಬದಲಾವಣೆಗಳನ್ನು ಕೂಡ ಪಡೆದುಕೊಂಡಿದ್ದು ನ್ಯಾಚುರಲ್ ಆಸ್ಪೈರರ್ಡ್ 2.0 ಎಂಜಿನ್ ಅನ್ನು ಹೊಂದಿದೆ. R$ 181,490 (ರೂ.29 ಲಕ್ಷ) ಬೆಲೆಯಲ್ಲಿ ಹ್ಯುಂಡೈ ಕ್ರೆಟಾ ಎನ್ ಲೈನ್ ನೈಟ್ ಆವೃತ್ತಿಯನ್ನು ಪರಿಚಯಿಸಿದ್ದು ಹುಂಡೈ ಕ್ರೆಟಾ ಎನ್ ಲೈನ್ ನೈಟ್ ಎಡಿಷನ್ ಎಸ್‍ಯುವಿಯಲ್ಲಿ 2.0-ಲೀಟರ್ 4-ಸಿಲಿಂಡರ್ ನ್ಯಾಚುರಲ್-ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇನ್ನು ಈ ಎಂಜಿನ್ 157 bhp ಮತ್ತು 188 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು ಫ್ಲೆಕ್ಸ್-ಇಂಧನ ಆವೃತ್ತಿಯು 167 bhp ಪವರ್ ಮತ್ತು 202 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೌದು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ನೈಟ್ ಆವೃತ್ತಿಯು ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಅನ್ನು ಸಹ ಹೊಂದಿದೆ.
ಇನ್ನು ಕ್ರೆಟಾದ ಈ ಆವೃತ್ತಿಯ ಸೀಮಿತ 900 ಘಟಕಗಳು ಮಾತ್ರ ಲಭ್ಯವಿರಲಿದ್ದು ಈ SUV ಎರಡು ಬಣ್ಣದ ಆಯ್ಕೆಗಳನ್ನು ಖರೀದುದಾರರಿಗೆ ನೀಡುತ್ತದೆ. ಹೌದು ಇದರಲ್ಲಿ ಬ್ಲಾಕ್ ರೂಫ್‌ನೊಂದಿಗೆ ಸಿಲ್ಕ್ ಗ್ರೇ ಮತ್ತು ಬ್ಲಾಕ್ ರೂಫ್‌ನೊಂದಿಗೆ ವೈಟ್ ಇದೆ. ಇನ್ನು ಕ್ರೆಟಾ ಎನ್-ಲೈನ್ ಡಾರ್ಕ್ ಆವೃತ್ತಿಯು 2.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 157 bhp ಪವರ್ ಮತ್ತು 202 Nm ಟಾರ್ಕ್ ಅನ್ನು ಉತ್ಪಾದಿಸಲಿದ್ದು ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.
ಇನ್ನು ಕ್ರೆಟಾದ ಹೊಸ ಡಾರ್ಕ್ ಎಡಿಷನ್‌ನ ಇಂಟೀರಿಯರ್ ನಲ್ಲಿ ಡ್ಯಾಶಬೋರ್ಡ್‌ನ ವಿನ್ಯಾಸವನ್ನು ರೆಡ್ ಎಕ್ಸೆಂಟ್‌ನಲ್ಲಿ ರೆಡ್ ಎಂಬಿಯಂಟ್ ಲೈಟಿಂಗ್ ನೊಂದಿಗೆ ಸ್ಪೋರ್ಟಿಯಾಗಿ ನೀಡಲಾಗಿದ್ದು ಈ SUVಯ ಸ್ಟೇರಿಂಗ್ ಬ್ಲಾಕ್ ಲೆದರ್‌ನೊಂದಿಗೆ ಸ್ಪೋರ್ಟಿ ಎನ್ ಲೈನ್ ನೊಂದಿಗೆ ನೀಡಲಾಗಿದೆ. ಹೌದು 0.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಪಲ್ ಕಾರ್ಪ್ಲೇ ಹಾಹೂ ಆಂಡ್ರಾಯ್ಡ್ ಆಟೋ ಕ್ರೂಸ್ ಕಂಟ್ರೋಲ್ 360-ಡಿಗ್ರಿ ಕ್ಯಾಮೆರಾ ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್ ಬ್ಲೂ ಲಿಂಕ್ ಸಂಪರ್ಕಿತ ಕಾರ್ ಟೆಕ್ ಲೆವೆಲ್ 2 ADAS, ಪೆನಾರಮಿಕ್ ಸನ್‌ರೂಫ್ ವೆಂಟಿಲೇಟೆಡ್ ಡ್ರೈವರ್ ಸೀಟ್ ಮತ್ತು ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್ ಮುಂತಾದ ಪೀಚರ್‌ಗಳನ್ನು ಇದರಲ್ಲಿ ನೀಡಲಾಗಿದೆ.