Tata Motors: 5.5 ಲಕ್ಷ ರೂ. ಗಳಿಂದ ಪ್ರಾರಂಭವಾಗುವ ಟಾಟಾದ ಅತೀಹೆಚ್ಚು ಮಾರಾಟವಾದ ಕಾರ್ ಇದು; ಕಳೆದ ವರ್ಷಕ್ಕಿಂತ ಹೆಚ್ಚಿನ ದಾಖಲೆ!

Advertisement
ಟಾಟಾ ಮೋಟಾರ್ಸ್ ಫೆಬ್ರುವರಿ ತಿಂಗಳಿನಲ್ಲಿ, ತನ್ನಲ್ಲಿ ಇರುವ ಕಾರ್ ಗಳಲ್ಲಿ ಅತಿ ಹೆಚ್ಚು ಯೂನಿಟ್ ಗಳನ್ನು ಮಾರಾಟ ಮಾಡಿದೆ. ಒಂದು ಅಂದಾಜಿನ ಪ್ರಕಾರ ಟಾಟಾ ಮೋಟಾರ್ಸ್ ಕಳೆದ ತಿಂಗಳು 42,865 ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ಕಳೆದ ವರ್ಷ ಅಂದರೆ 2022 ಫೆಬ್ರವರಿಯಲ್ಲಿ, 39,980 ಯೂನಿಟ್ ಗಳನ್ನು ಮಾರಾಟ ಮಾಡಿತ್ತು. ಅಂದರೆ ಕಂಪನಿಯ ಮಾರಾಟ ಶೇಕಡ ಏಳರಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆ ಟಾಟಾ ಮೋಟರ್ಸ್ ದೇಶದ ಮೂರನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ ಎಂಬ ಖ್ಯಾತಿಗಳಿಸಿದೆ. ಇನ್ನು ನೀವು ಕೂಡ ಟಾಟಾ ಮೋಟರ್ಸ್ ನ ದಕ್ಷ ಕಾರುಗಳನ್ನ ಕೊಳ್ಳಲು ಬಯಸಿದರೆ ಟಾಟಾದ ಮೂರು ಬೆಸ್ಟ್ ಕಾರುಗಳ ಪಟ್ಟಿ ಇಲ್ಲಿದೆ.
Tata Nexon:
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸನ್ ಗೆ ಅತ್ಯುತ್ತಮ ಬೇಡಿಕೆ ಇದೆ ಫೆಬ್ರುವರಿಯಲ್ಲಿ ನೆಕ್ಸನ್ ಕಾರುಗಳ 13,914 ಯೂನಿಟ್ ಮಾರಾಟ ಮಾಡಿದೆ ಕಂಪನಿ. ಕಳೆದ ವರ್ಷ 12,259 ಯೂನಿಟ್ ಮಾರಾಟವಾಗಿತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ನೆಕ್ಸನ್ ಮಾರಾಟ ಶೇಕಡ 14% ಹೆಚ್ಚಿದೆ. ಅತಿ ಹೆಚ್ಚು ಮಾರಾಟವಾಗಿರುವ ಹಾಗೂ ದೀರ್ಘಕಾಲದ ವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ನೆಲೆ ಊರಿರುವ ಎಸ್ ಯು ವಿ ಕಾರ್ ಇದು.
Advertisement
Tata Tiago:
ಟಾಟಾ ಮೋಟರ್ಸ್ ನ ಅಗ್ಗದ ಕಾರು ಇದು. 5.54 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಟಾಟಾ ಟಿಯಾಗೊ ಕಳೆದ ವರ್ಷ ಫೆಬ್ರುವರಿ ತಿಂಗಳಿನಲ್ಲಿ 4,489 ಯೂನಿಟ್ ಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಮಾರಾಟದಲ್ಲಿ ಶೇಕಡ 66. ಹೆಚ್ಚಳವಾಗಿದ್ದು, ಕಳೆದ ತಿಂಗಳು 70457 ಟಿಯಾಗೋ ಯೂನಿಟ್ ಮಾರಾಟವಾಗಿದೆ. ಟಾಟಾ ಟಿಯಾಗೋ ವರ್ಷದಿಂದ ವರ್ಷಕ್ಕೆ ಹೆಚ್ಚು ಮಾರಾಟ ಆಗುತ್ತಿದೆ.
Tata Punch Micro:
ಇದು ಕೂಡ ಅತ್ಯುತ್ತಮ ಸೇಲ್ ಕಂಡಿರುವ ಎಸ್ ಯು ವಿ ಆಗಿದೆ. ಫೆಬ್ರುವರಿಯಲ್ಲಿ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿ ಇದ್ದ ಪಂಚ್ ಮೈಕ್ರೋ ಈ ಬಾರಿಯು ಅತಿ ಹೆಚ್ಚಿನ ಮಾರಾಟ ಕಂಡಿದೆ. ಫೆಬ್ರವರಿ 2022 ರಲ್ಲಿ 9,592 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಈ ವರ್ಷ ಅದು 11,169 ಕ್ಕೆ ಏರಿದ್ದು ಕಳೆದ ವರ್ಷಕ್ಕಿಂತ 16% ಹೆಚ್ಚಿಗೆ ಮಾರಾಟವಾಗಿದೆ. ಇನ್ನು ಸದ್ಯದಲ್ಲಿಯೇ ಪಂಚ್ ಮೈಕ್ರೋ ಸಿ ಏನ್ ಜಿ ರೂಪಾಂತರವನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್.
Advertisement