Maruti Baleno Car: ಮಾರುತಿ ಬಲೆನೊ ಕಾರ್ ಖರೀದಿಗೆ ಸಾಲ, EMI ಎಷ್ಟು ಬರುತ್ತೆ ಎಲ್ಲದರ ಬಗ್ಗೆ ಇಲ್ಲಿದೆ ಸಂಪೂರ್ಣ ಡಿಟೇಲ್ಸ್!

Advertisement
ಇತ್ತೀಚಿನ ದಿನದಲ್ಲಿ ಭಾರತೀಯ ಮಾರುಕಟ್ಟೆಗೆ ಹೊಸ ಹೊಸ ಕಾರ್ ಗಳು ಲಗ್ಗೆ ಇಡುತ್ತಿವೆ. ಅದರಲ್ಲಿ ಮಾರುತಿ ಬಲೊನೊ(Maruti Baleno) ಕಳೆದ ಒಂದೆರಡು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. 2023 ಫೆಬ್ರುವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರ್ ಗಳಲ್ಲಿ ಬಲೆನೊ ಮುಂಚೂಣಿಯಲ್ಲಿದೆ. ಜನರು ಬಲೆನೊ ಕಾರನ್ನು ಖರೀದಿಸಲು ಮುಂದಾಗುತ್ತಿದ್ದಾರೆ ನೀವು ಕೂಡ ಈ ಕಾರ್ ಖರೀದಿ ಮಾಡಲು ಬಯಸಿದರೆ ಅದರ ಡೌನ್ ಪೇಮೆಂಟ್(Down Payment), ಇಎಂಐ(EMI) ಇವುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಮುಂದೆ ಓದಿ.
ಐದು ವರ್ಷಗಳ ಈ ಎಂ ಐ:
ಮಾರುತಿ ಬಲೆನೊದ ಮೂಲ ರೂಪಾಂತರ (ಸಿಗ್ಮ) ಎಕ್ಸ್ ಶೋರೂಮ್ ಬೆಲೆ 6.56 ಲಕ್ಷ ರೂಪಾಯಿಗಳು. ಇದರ ಆನ್ ರೋಡ್ ಪ್ರೈಸ್(On Road Price) 7.44 ಲಕ್ಷ ರೂಪಾಯಿಗಳಾಗುತ್ತವೆ. ಇದರಲ್ಲಿ ನೀವು 1.5 ಲಕ್ಷ ಡೌನ್ ಪೇಮೆಂಟ್ ಮಾಡಿದರೆ ನಿಮ್ಮ ಸಾಲದ ಮೊತ್ತ 5.94 ಆಗಿರುತ್ತದೆ. ನೀವು ಐದು ವರ್ಷಗಳವರೆಗೆ ಈ ಸಾಲದ ಮೊತ್ತವನ್ನು ಡಿವೈಡ್ ಮಾಡಿಕೊಂಡರೆ 9.8ರಷ್ಟು ಬಡ್ಡಿ ದರದಲ್ಲಿ ಲೋನ್ ತೆಗೆದುಕೊಳ್ಳಬಹುದು.
Advertisement
ಅದಕ್ಕೆ ನೀವು ಒಟ್ಟಿಗೆ 7.54 ಲಕ್ಷಗಳನ್ನು ಪಾವತಿಸಬೇಕಾಗುತ್ತದೆ. ಇಲ್ಲಿ 1.59 ಲಕ್ಷಗಳನ್ನು ಬಡ್ಡಿ ಆಗಿ ಕಟ್ಟಬೇಕು. ಇನ್ನು ತಿಂಗಳಿಗೆ 12,577 ರೂಪಾಯಿಗಳು ಈ ಎಂ ಐ ಬರುತ್ತದೆ. ಕಾರ್ ಬೇಕು ಸಾರ್ವಜನಿಕರಿಗೆ ಇದು ಹೆಚ್ಚು ಅನುಕೂಲವಾಗಿದೆ.
ಮಾರುತಿ ಬಲೆನೊ ವೈಶಿಷ್ಟ್ಯತೆಗಳು:
ಮಾರುತಿ ಬಲೆನೊ ಖರೀದಿಸುವುದಾದರೆ ಅದರ ಬಗ್ಗೆ ತಿಳಿದುಕೊಳ್ಳಲೇ ಬೇಕು ಅಲ್ವಾ. ಮಾರುತಿ ಬಲೆನೊದ ಫೇಸ್ ಲಿಫ್ಟ್(Maruti Baleno Facelift) ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ ಇದರಲ್ಲಿ 360° ಕ್ಯಾಮರಾ ಹೆಡ್ ಅಪ್ ಡಿಸ್ಪ್ಲೇ, ಟೈಪ್ ಸಿ ಯು ಎಸ್ ಬಿ ಪೋರ್ಟ್ ನೀಡಲಾಗಿದೆ. \ಎಲ್ಇಡಿ ಫಾಗ್ ಲ್ಯಾಂಪ್ ಗಳನ್ನು ಮರು ವಿನ್ಯಾಸಗೊಳಿಸಲಾಗಿದ್ದು ಎಲ್ಇಡಿ(LED) ಪ್ರಾಜೆಕ್ಟರ್ ಹೆಡ್ ಲೈಟ್, ಆಪಲ್ ಕಾರ್ ಪ್ಲೇ ಆಂಡ್ರಾಯ್ಡ್ ಆಟೋ 9 ಇಂಚಿನ ಟಚ್ ಸ್ಕ್ರೀನ್(Touch Screen) ಇನ್ಫೋಟೈನ್ಮೆಂಟ್ ಸಿಸ್ಟಮ್, ರಿಯಲ್ ಕ್ಯಾಮೆರಾ ಕ್ರೂಸ್ ಕಂಟ್ರೋಲ್ ಮೊದಲಾದ ವೈಶಿಷ್ಟ್ಯತೆಗಳನ್ನು ಬೆಲೆ ನೀವು ಪಡೆಯುತ್ತೀರಿ.
Advertisement