ದ್ವಿಚಕ್ರ ವಾಹನಗಳ ಇಂಡಸ್ಟ್ರಿಯಲ್ಲಿ ಸ್ಕೂಟರ್ ವಿಭಾಗದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಹೊಂಡಾ ಆಕ್ಟಿವಾ (Honda Activa) ಸಾಕಷ್ಟು ವರ್ಷಗಳಿಂದಲೂ ಕೂಡ ತನ್ನ ಅಧಿಪತ್ಯವನ್ನು ಸಾಧಿಸಿ ಕೊಂಡು ಬಂದಿದೆ. ಈಗ ಹೊಸದಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಲೇಟೆಸ್ಟ್ ಸುದ್ದಿಗಳ ಪ್ರಕಾರ ಹೊಂಡಾ ಆಕ್ಟಿವಾ 7ಜಿ ಸ್ಕೂಟರ್ ಮಾರ್ಕೆಟ್ಗೆ ಎಂಟ್ರಿ ನೀಡೋದಕ್ಕೆ ತಯಾರಿ ನಡೆಸಿಕೊಳ್ಳುತ್ತಿದೆಯಂತೆ. ಕೇವಲ ಸ್ವಲ್ಪ ತಿಂಗಳುಗಳ ಕಾದರೆ ಸಾಕು ನೀವು ಈ ಸ್ಕೂಟರ್ನ ದರ್ಶನ ಮಾಡಬಹುದಾಗಿದೆ.
ಹೊಂಡಾ ಆಕ್ಟಿವಾ 7ಜಿ ಸ್ಕೂಟರ್!
ಕೆಲವೊಂದು ಮಾಹಿತಿಗಳ ಪ್ರಕಾರ ಹೊಂಡಾ ಆಕ್ಟಿವಾ 7ಜಿ (Honda Activa 7G) ಸ್ಕೂಟರ್ ಅನ್ನು 2025ರ ಜನವರಿ ತಿಂಗಳಿನಲ್ಲಿ ಲಾಂಚ್ ಮಾಡುವಂತಹ ತಯಾರಿ ನಡೆಯುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಹೊಂಡಾ ಆಕ್ಟಿವಾ 7ಜಿ ಸ್ಕೂಟರ್ ನ ಮ್ಯಾನುಫ್ಯಾಕ್ಚರಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ ಎಂಬುದಾಗಿ ತಿಳಿದು ಬಂದಿದೆ.
ಹೊಂಡಾ ಆಕ್ಟಿವಾ 7ಜಿ (Honda Activa 7G) ಸ್ಕೂಟರ್ ನಲ್ಲಿ ವಿಶೇಷವಾಗಿ ಮೈಲೇಜ್ ವಿಚಾರದಲ್ಲಿ ಸಾಕಷ್ಟು ಉತ್ತಮ ಅಪ್ಡೇಟ್ ಅನ್ನು ತರಲಾಗುತ್ತಿದೆ ಎನ್ನುವ ಮಾಹಿತಿ ಇದ್ದು, ಒಂದು ಲೀಟರ್ ಪೆಟ್ರೋಲ್ ನಲ್ಲಿ ಇದು 55 ರಿಂದ 60 ಕಿಲೋಮೀಟರ್ಗಳ ಮೈಲೇಜ್ ನೀಡಲಿದೆ. ಎಲ್ಇಡಿ ಲೈಟ್ಗಳ ಜೊತೆಗೆ ಯು ಎಸ್ ಬಿ ಚಾರ್ಜರ್ ಅನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಅಲಾಯ್ ವೀಲ್ಗಳ ಜೊತೆಗೆ ಡಿಸ್ಕ್ ಬ್ರೇಕ್ ಅನ್ನು ಕೂಡ ಈ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ. ಈಗಾಗಲೇ ಹೋಂಡಾ ಆಕ್ಟಿವಾ ಸೀರೀಸ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಸ್ಕೂಟರ್ ಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಪ್ರತಿಯೊಂದು ವೇರಿಯಂಟ್ ಗಳು ಕೂಡ ಗ್ರಾಹಕರಲ್ಲಿ ಇನ್ನಷ್ಟು ಹೆಚ್ಚಿನ ಉತ್ಸುಕತೆಯನ್ನು ತರುತ್ತಿವೆ.
ಹೋಂಡಾ ಆಕ್ಟಿವಾ 7 ಜಿ (Honda Activa 7G) ಸ್ಕೂಟರ್ ಅನ್ನು ಮಾರುಕಟ್ಟೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಪರಿಚಯಿಸುವಂತಹ ಪ್ರಯತ್ನವನ್ನು ಹೋಂಡಾ ಸಂಸ್ಥೆ ಮಾಡಲು ಹೊರಟಿದೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಈ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ 80 ರಿಂದ 90 ಸಾವಿರ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪರಿಚಯಿಸಲು ಸಂಸ್ಥೆ ಸಿದ್ಧವಾಗಿದೆ. ಉತ್ತಮ ಮೈಲೇಜ್ ಜೊತೆಗೆ ಸ್ಪರ್ಧಾತ್ಮಕ ಬೆಲೆ ಖಂಡಿತವಾಗಿ ಸ್ಕೂಟರ್ ಲಾಂಚ್ ಆದ ನಂತರ ಗ್ರಾಹಕರ ಸಂಖ್ಯೆಯನ್ನು ಹೆಚ್ಚು ಮಾಡುವುದಕ್ಕೆ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ.