Karnataka Times
Trending Stories, Viral News, Gossips & Everything in Kannada

ಮೇ ನಲ್ಲಿ ಕೇವಲ 125 ಜನ ಮಾತ್ರ ಖರೀದಿಸಿದ್ದಾರೆ ಈ ಕಾರನ್ನು ! ಮೈಲೇಜ್ 18Km, ಬೆಲೆ ತುಂಬಾ ಕಡಿಮೆ

advertisement

ಭಾರತ ದೇಶದ ಆಟೋಮೊಬೈಲ್ ಇಂಡಸ್ಟ್ರಿಯ ಬೆಳವಣಿಗೆಯನ್ನು ನೋಡಿಕೊಂಡು ಬೇರೆ ದೇಶದ ಕಾರುಗಳು ಕೂಡ ಭಾರತದ ಮಾರುಕಟ್ಟೆಗೆ ಕಾಲಿಟ್ಟಿವೆ. ಕೆಲವು ಕಾರುಗಳು ಯಶಸ್ಸನ್ನು ಸಂಪಾದಿಸಿದ್ರೆ ಇನ್ನು ಕೆಲವು ಕಾರುಗಳು ಸಂಪೂರ್ಣವಾಗಿ ಭಾರತದ ಮಾರುಕಟ್ಟೆಯಲ್ಲಿ ಮುಳುಗಿ ಹೋಗುವಂತಹ ಪರಿಸ್ಥಿತಿಯಲ್ಲಿ ಇವೆ ಎಂದು ಹೇಳಬಹುದಾಗಿದೆ. Citroen ಸಂಸ್ಥೆ ತನ್ನ ಪೋರ್ಟ್ಫೋಲಿಯೋದಲ್ಲಿ ಸಾಕಷ್ಟು ಕಾರುಗಳನ್ನ ಭಾರತದ ಗ್ರಾಹಕರಿಗೆ ನೀಡುವಂತಹ ಪ್ರಯತ್ನವನ್ನು ಮಾಡ್ತಾ ಇದೆ.

Citroen C3 Aircross ಕಾರು ಅತ್ಯಂತ ಕಡಿಮೆ ದರದಲ್ಲಿ ಭಾರತದಲ್ಲಿ ಗ್ರಾಹಕರಿಗೆ ಸಿಗುವಂತಹ ಅಡ್ವಾನ್ಸ್ ಫೀಚರ್ ಗಳನ್ನು ನೀಡುವಂತಹ ಕಾರ್ ಆಗಿದೆ. ಹೇಗಿದ್ದರೂ ಕೂಡ ಭಾರತದ ಮಾರುಕಟ್ಟೆಯಲ್ಲಿ ಈ ಕಂಪನಿ ತನ್ನ ಕಾರುಗಳನ್ನು ಉತ್ತಮ ರೀತಿಯಲ್ಲಿ ಮಾರಾಟ ಮಾಡುವುದಕ್ಕೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಕಳೆದ ಆರು ತಿಂಗಳಿನಿಂದಲೂ ಕೂಡ ಇದರ ಮಾರಾಟದಲ್ಲಿ ಸಂಪೂರ್ಣವಾಗಿ ಇಳಿಕೆ ಕಂಡುಬಂದಿದೆ. ಹಿಂದಿನ ತಿಂಗಳು ಅಂದರೆ ಮೇ ತಿಂಗಳಲ್ಲಿ ಕೇವಲ 125 ಕಾರುಗಳನ್ನು ಮಾತ್ರ ಮಾರಾಟ ಮಾಡುವುದಕ್ಕೆ ಇದು ಯಶಸ್ವಿಯಾಗಿದೆ.

ಏಪ್ರಿಲ್ ತಿಂಗಳಲ್ಲಿ ಕೇವಲ 93 ಯೂನಿಟ್ ಕಾರುಗಳನ್ನು ಮಾತ್ರ ಮಾರಾಟ ಮಾಡುವುದಕ್ಕೆ ಕಂಪನಿ ಯಶಸ್ವಿಯಾಗಿತ್ತು. ಈ ಕಾರಿನ ಬೆಲೆ ಬಗ್ಗೆ ಮಾತನಾಡುವುದಾದರೆ 8.99 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಆಗಿದೆ. Citroen C3 Aircross ಕಾರಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

Citroen C3 Aircross:

 

Image Source: CarDekho

 

advertisement

Citroen C3 Aircross ಕಾರ್ ನಲ್ಲಿ 1.2 ಲೀಟರ್ ಮೂರು ಸಿಲಿಂಡರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. ಕಂಪನಿ ಹೇಳಿರುವ ಮಾಹಿತಿಯ ಪ್ರಕಾರ ಇದರ ಮೈಲೇಜ್ 18.5 ಕಿಲೋಮೀಟರ್ ಪ್ರತಿ ಲೀಟರ್ ಆಗಿದೆ.

ಇದರ 5 ಸೀಟರ್ ಮಾಡೆಲ್ ನ ಬೂಟ್ ಸ್ಪೇಸ್ 444 ಲೀಟರ್ ಆಗಿದೆ. ಏಳು ಸೀಟರ್ ಮಾಡೆಲ್ ನ ಬೂಟ್ ಸ್ಪೇಸ್ 511 ಲೀಟರ್ ಆಗಿದೆ. ಇದರಲ್ಲಿ 17 ಇಂಚಿನ ಡೈಮಂಡ್ ಅಲಾಯ್ ವೀಲ್ಗಳನ್ನು ಕೂಡ ಜೋಡಿಸಲಾಗಿದೆ. 10.25 ಇಂಚಿನ ಟಚ್ ಸ್ಕ್ರೀನ್ ಇಂಫೋಟೈನ್ಮೆಂಟ್ ಸಿಸ್ಟಮ್ ಹಾಗೂ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ.

ಇದರಲ್ಲಿ ಸಾಕಷ್ಟು ಕನೆಕ್ಟೆಡ್ ಫ್ಯೂಚರ್ ಗಳನ್ನು ಕೂಡ ನೀವು ಕಾಣಬಹುದಾಗಿತ್ತು ಸಾಕಷ್ಟು ಅತ್ಯಾಧುನಿಕ ಆವಿಷ್ಕಾರಗಳನ್ನು ಕೂಡ ಈ ಕಾರ್ ನಲ್ಲಿ ಅಳವಡಿಸಲಾಗಿದೆ.

 

Image Source: The Financial Express

 

ಇದನ್ನು ನೀವು 10 ಕಲರ್ ಆಪ್ಶನ್ ಗಳಲ್ಲಿ ಕೂಡ ಖರೀದಿ ಮಾಡುವಂತಹ ಅವಕಾಶ ಇದೆ. ಸಾಕಷ್ಟು ಡುಯಲ್ ಟೋನ್ ಗಳಲ್ಲಿ ಕೂಡ ನಿಮಗೆ ಈ ಕಾರು ನಿಮಗೆ ಲಭ್ಯವಿರುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಇಷ್ಟೆಲ್ಲಾ ಸೌಲಭ್ಯಗಳು ಅಡ್ವಾನ್ಸ್ ಫೀಚರ್ ಗಳು ಆಧುನಿಕ ತಂತ್ರಜ್ಞಾನಗಳು ಇದ್ದರೂ ಕೂಡ ಕಾರು ಅಷ್ಟೊಂದು ಸೇಲ್ ಆಗದೇ ಇರೋದು ನಿಜಕ್ಕೂ ಕೂಡ ಕಂಪನಿಗೆ ತಲೆನೋವಿನ ವಿಚಾರವಾಗಿದೆ ಎಂದು ಹೇಳಬಹುದು.

advertisement

Leave A Reply

Your email address will not be published.