Karnataka Times
Trending Stories, Viral News, Gossips & Everything in Kannada

India’s Best Cars: 5 ರಿಂದ 10 ಲಕ್ಷದೊಳಗಿನ ಭಾರತದ ಬೆಸ್ಟ್ ಕಾರುಗಳು ಇಲ್ಲಿವೆ.

ಆಟೋ ಮೋಟಾರ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಮಾರುತಿ ಈಗಾಗಲೇ ಮಾರುಕಟ್ಟೆಯನ್ನು ಆವರಿಸಿಕೊಂಡು ಬಿಟ್ಟಿದೆ. ಸಾಮಾನ್ಯವಾಗಿ ಜನರು ಮಾರುತಿ ಸುಜುಕಿ ವಾಹನಗಳನ್ನು ಖರೀದಿ ಮಾಡಲು ಇಷ್ಟಪಡುತ್ತಾರೆ. ಇದಕ್ಕೆ ಮುಖ್ಯವಾದ ಕಾರಣ ಆ ಕಾರಗಳು ಉತ್ತಮ ಮೈಲೇಜ್ ನೀಡುತ್ತವೆ ಕೈಗೆಟುಕುವ ಬೆಲೆಯಲ್ಲಿ, ಕಡಿಮೆ ನಿರ್ವಹಣೆ ಹೊಂದಿರುವ ಕಾರ್ ಗಳನ್ನ ಮಾರುತಿ ಮೋಟಾರ್ ಕಂಪನಿ ತಯಾರಿಸುತ್ತದೆ. ಹಾಗಾಗಿ ಭಾರತದ ಮಾರುಕಟ್ಟೆಯಲ್ಲಿ ಕಾರು ಮಾರಾಟದ ಅಗ್ರಗಣ್ಯ ಸ್ಥಾನದಲ್ಲಿ ಮಾರುತಿ ವಾಹನಗಳು ಇವೆ.

ಫೆಬ್ರುವರಿ 2023ರಲ್ಲಿ ದಾಖಲೆ ಮಟ್ಟದಲ್ಲಿ ಮಾರುತಿ ಕಾರುಗಳು ಸೇಲ್ ಆಗಿವೆ. ನೀವು ಐದರಿಂದ 10 ಲಕ್ಷ ರೂಪಾಯಿ ಒಳಗಿನ ಬಜೆಟ್ ನಲ್ಲಿ ಉತ್ತಮವಾದ ಕಾರನ್ನು ಖರೀದಿಸಲು ಬಯಸಿದರೆ ಈ ಮೂರು ಕಾರ್ ಗಳು ಅತ್ಯುತ್ತಮ ಆಯ್ಕೆ. ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಮಾರುತಿ ಸುಜುಕಿ ಈ ಮೂರು ಕಾರುಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಅಳವಡಿಸಿಕೊಂಡು ಬಂದಿದೆ. ಅಂದ ಹಾಗೆ ಈ ಮೂರು ಕಾರುಗಳಲ್ಲಿ ಸಿಎಂಜಿ ಆಯ್ಕೆ ಕೂಡ ಇದೆ. ಅತ್ಯುತ್ತಮ ಮೈಲೇಜ್ ಜೊತೆಗೆ ಇಂಧನದ ವೆಚ್ಚ ಕೂಡ ಕಡಿಮೆ ಇರುವ ಕಾರ್ ಗಳು ಇವು. ಹಾಗಾದ್ರೆ ಮಾರುತಿ ಸುಜುಕಿ ಆ ಮೂರು ಅತ್ಯುತ್ತಮ ಕಾರುಗಳು ಯಾವವು ನೋಡೋಣ.

Join WhatsApp
Google News
Join Telegram
Join Instagram

Maruti Suzuki Baleno:

ಭಾರತೀಯ ಮಾರುಕಟ್ಟೆಯಲ್ಲಿ ಬಲೆನೊ ಕಾರಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ. 2023ರ ಫೆಬ್ರವರಿಯಲ್ಲಿ ಅತಿ ಹೆಚ್ಚು ಈ ಮಾದರಿಯ ಕಾರ್ ಮಾರಾಟವಾಗಿದೆ. ಹೊಸ ನವೀಕರಣಗಳನ್ನು ಅಳವಡಿಸಿರುವ ಮಾರುತಿ ಸುಜುಕಿ ಬಲೆನೊ ಕಾರ್ ಕಳೆದ ವರ್ಷ ಆರಂಭವಾಯಿತು. ಬಲೆನೊ ಬೆಲೆ 7.64 ಲಕ್ಷ ರೂಪಾಯಿಯಿಂದ 11.35 ಲಕ್ಷ ರೂಪಾಯಿಗಳವರೆಗೆ ಇದ್ದು, ಗ್ರಾಹಕರಿಗೆ ಕೈ ಕೆಟ್ಟುಕುವ ಬೆಲೆಯಲ್ಲಿ ಉತ್ತಮ ಸೌಲಭ್ಯ ಹೊಂದಿರುವ ಕಾರ್ ಇದಾಗಿದೆ. 1.2 ಲೀಟರ್ ನಾಲ್ಕು ಸಿಲೆಂಡರ್ ಪೆಟ್ರೋಲ್ ಇಂಜಿನ್ ಹೊಂದಿರುವ ಈ ಕಾರ್, ಸಿ ಎನ್ ಜಿ ಮಾದರಿಯಲ್ಲಿ 30km ವರೆಗೆ ಮೈಲೇಜ್ ನೀಡುತ್ತದೆ. ಜೊತೆಗೆ ಅಗತ್ಯವಿರುವ ಎಲ್ಲಾ ಆಧುನಿಕ ಸುಧಾರಿತ ಫೀಚರ್ ಗಳನ್ನು ಕೂಡ ಈ ಕಾರ್ ನಲ್ಲಿ ನೀವು ಕಾಣಬಹುದು.

Maruti Suzuki Swift:

ಇದು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಎರಡನೆಯ ಅತಿ ದೊಡ್ಡ ಮಾರಾಟವಾದ ಕಾರು ಎನಿಸಿಕೊಂಡಿದೆ. ಹೆಚ್ಚು ಜನಪ್ರಿಯವಾಗಿರುವ ಈ ಕಾರಣ ನಲ್ಲಿ ದೀರ್ಘಕಾಲದ ವರೆಗೆ ಯಾವುದೇ ನವೀಕರಣವನ್ನು ಕೂಡ ಮಾಡಿಲ್ಲ ಆದರೂ ಕೂಡ ಮಾರುತಿ ಸುಜುಕಿ ಸ್ವಿಫ್ಟ್ ಬೇಡಿಕೆ ಅಂತೂ ಕಡಿಮೆ ಆಗಿಲ್ಲ. ಸ್ವಿಫ್ಟ್ ಸಿಎಂಜಿ ಆವೃತ್ತಿಯನ್ನು ಕಳೆದ ವರ್ಷ ಆರಂಭಿಸಲಾಗಿದೆ. ಸ್ವಿಫ್ಟ್ ಕೆ ಸರಣಿಯ 1.2 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಕಾರ್ 23.76 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಅದೇ ಸಿ ಏನ್ ಜಿ ಆವೃತ್ತಿಯಲ್ಲಿ 30 ಕಿಲೋಮೀಟರ್ ಮೈಲೇಜ್ ಪಡೆಯಬಹುದು.

Maruti Suzuki Alto:

ಇದು ಮಾರುತಿಯ ಮೂರನೇ ದೇಶದ ಅತ್ಯಂತ ಕೈ ಕೆಡುಕುವ ಹಾಗೂ ಅತ್ಯುತ್ತಮ ಕಾರ್ ಎನಿಸಿದೆ. ಈ ಕಾರಿನ ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಆಲ್ಟೊ, ಆಲ್ಟೋ 800 ಆಲ್ಟೊ ಕೆ10 ಎನ್ನುವ ಎರಡು ಮಾದರಿಯನ್ನು ಹೊಂದಿದೆ. ಕಳೆದು ವರ್ಷ ಹೊಸ ಅವತಾರದಲ್ಲಿ ಆಲ್ಟೋ 800 ಬಿಡುಗಡೆಯಾಗಿದೆ ಭಾರತೀಯರು ಮೊದಲೇ ಈ ಕಾರಣ ಇಷ್ಟಪಡುತ್ತಾರೆ. ಈಗ ನವೀಕರಣದ ಮಾಡೆಲ್ ಜನರಿಗೆ ಇನ್ನಷ್ಟು ಹತ್ತಿರವಾಗಿದೆ. ಇದರಲ್ಲಿಯೂ ಸಿ ಎನ್ ಜಿ ಮಾಡೆಲ್ ಲಭ್ಯವಿದ್ದು 35 ಕಿಲೋಮೀಟರ್ ವರಗೆ ಮೈಲೇಜ್ ಪಡೆಯಬಹುದು.

Leave A Reply

Your email address will not be published.