Driving Certificate: ಈ ಪ್ರಮಾಣ ಪತ್ರವಿಲ್ಲದೇ ಕಾರು ಚಲಾಯಿಸಿದರೆ ದೊಡ್ದ ಮೊತ್ತದ ದಂಡ

Advertisement
ಸಾಮಾನ್ಯವಾಗಿ ದ್ವಿಚಕ್ರ ವಾಹನ ಇರಬಹುದು ಅಥವಾ ಕಾರುಗಳು ಇರಬಹುದು ಅಥವಾ ಬೇರೆ ಯಾವುದೇ ರೀತಿಯ ವಾಹನ ಇರಬಹುದು, ಒಮ್ಮೆ ಈ ವಾಹನದ ಜೊತೆಗೆ ಪ್ರಯಾಣ ಆರಂಭಿಸಿದರೆ ನಿಮ್ಮ ಜೊತೆಗೆ ಕೆಲವು ಮೂಲ ದಾಖಲೆಗಳನ್ನು ಇಟ್ಟುಕೊಳ್ಳಲೇಬೇಕು. ಅದರಲ್ಲಿ ಒಂದು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ (PUC) ಈ ಪ್ರಮಾಣ ಪತ್ರವನ್ನು ಇಂಧನದಲ್ಲಿ ಚಲಿಸುವ ಪ್ರತಿಯೊಂದು ವಾಹನವು ಕಡ್ಡಾಯವಾಗಿ ಹೊಂದಿರಲೇಬೇಕು. ಹಾಗಾದ್ರೆ ಈ ಪ್ರಮಾಣ ಪತ್ರ ಯಾಕೆ ಬೇಕು? ಇದರ ಉಪಯುಕ್ತತೆ ಏನು ನಿಮಗೆ ಗೊತ್ತೇ. ಸರ್ಕಾರದಿಂದ ನೀಡಲಾಗುವ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಆರು ತಿಂಗಳ ವರೆಗೆ ಮಾನ್ಯವಾಗಿರುತ್ತದೆ ನಂತರ ಅದನ್ನು ಪುನರ್ ಪರಿಶೀಲಿಸಿಕೊಳ್ಳಬೇಕು.
ಹತ್ತು ಸಾವಿರದವರೆಗೆ ದಂಡ:
ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಚಲಿಸುವ ವಾಹನಗಳು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಹೊಂದಿರಲೇಬೇಕು ಜೊತೆಗೆ ಅದು ಕಾಲಕಾಲಕ್ಕೆ ತಕ್ಕ ಹಾಗೆ ನವೀಕರಣಗೊಳಿಸಿಕೊಳ್ಳಬೇಕು. ನೀವು ಅಪ್ಡೇಟ್ ಆಗಿರುವ ಪಿಯುಸಿ ಪ್ರಮಾಣ ಪತ್ರ ಇಲ್ಲದೆ ಅಥವಾ ಪಿಯುಸಿ ಪ್ರಮಾಣ ಪತ್ರವನ್ನು ಮಾಡಿಸದೆ ಇದ್ದು ವಾಹನ ಚಲಾಯಿಸುವಾಗ ಸಿಕ್ಕಿ ಬಿದ್ದರೆ ಭಾರಿ ಮೊತ್ತದ ದಂಡವನ್ನು ತೆರಬೇಕಾಗುತ್ತದೆ ಜೊತೆಗೆ ನೀವು ಮುಂದೆ ವಿಮೆ ಕ್ಲೈಮ್ ಮಾಡುವಲ್ಲಿಯೂ ಕೂಡ ಸಮಸ್ಯೆ ಉಂಟಾಗಬಹುದು. ದೆಹಲಿಯಲ್ಲಿ ಅಂತೂ ಈ ನಿಯಮವನ್ನು ಉಲ್ಲಂಘಿಸಿ ಪ್ರಯಾಣ ಮಾಡಿ ಸಿಕ್ಕಿ ಬಿದ್ದರೆ 10,000 ರೂಪಾಯಿಗಳ ವರೆಗೆ ದಂಡ ಹಾಕಲಾಗುತ್ತದೆ.
Advertisement
ಪಿಯುಸಿ ಪ್ರಮಾಣ ಪತ್ರ ಕಡ್ಡಾಯ:
ಯಾವುದೇ ವಾಹನವಾದರೂ ಸರಿ ಅದಕ್ಕೆ ಪಿಯುಸಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕೇ ಬೇಕು ಅದು ಇಲ್ಲದೆ ಪ್ರಯಾಣ ನಡೆಸಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಹಾಗಾಗಿ ನೀವು ಎಲ್ಲೇ ಪ್ರಯಾಣ ಮಾಡುವುದಾದರೂ ಈ ಪ್ರಮಾಣ ಪತ್ರವನ್ನು ನಿಮ್ಮ ವಾಹನದಲ್ಲಿ ಇರಿಸಿಕೊಳ್ಳಿ. ಅಷ್ಟೇ ಅಲ್ಲದೆ ಇದು ಕೇವಲ ಆರು ತಿಂಗಳುಗಳ ಕಾಲ ಮಾನ್ಯವಾಗಿರುವುದರಿಂದ ಆಗಾಗ ನವೀಕರಿಸಿಕೊಳ್ಳುವುದನ್ನು ಕೂಡ ಮರೆಯಬೇಡಿ. ಸಂಚಾರ ಪೊಲೀಸ್ ಅಧಿಕಾರಿಗಳು ಇದನ್ನ ಕೇಳಿದರೆ ನೀವು ಅದನ್ನು ಪ್ರಸ್ತುತಪಡಿಸಲೇಬೇಕು ಇಲ್ಲವಾದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ.
ಇದರ ನಿಯಮ ಏನು ಗೊತ್ತಾ!
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ನಿಯಮ ಹೊರಡಿಸಿದ್ದು, ವಾಹನ ಚಲಾಯಿಸುವವರು ವಾಹನದ ವಿಮೆಯನ್ನು ನವೀಕರಿಸುವಾಗ ಪಿಯುಸಿ ಪ್ರಮಾಣ ಪತ್ರವನ್ನು ನೀಡಲೇಬೇಕು. ಪಿಯುಸಿ ಪ್ರಮಾಣ ಪತ್ರವಿಲ್ಲದೆ ಯಾವುದೇ ವಾಹನ ವಿಮಾ ಕಂಪನಿಯು ಯಾವುದೇ ವಾಹನದ ವಿಮೆಯನ್ನು ನವೀಕರಿಸಬಾರದು.
Advertisement