ಇದು ಮುಖ್ಯ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಯೂಟ್ಯೂಬ್ ಅಥವಾ ಅದರಲ್ಲಿ ಬರುವ ಅನೇಕ ರೀಲ್ಸ್ ಗಳಲ್ಲಿ ಇದನ್ನ ನೋಡಿರಬಹುದು. ಜನರು ಸ್ಟೇರಿಂಗ್ ಅನ್ನು ಬಿಟ್ಟು ಹೆದ್ದಾರಿಯಲ್ಲಿ ಕಾರನ್ನು ಓಡಿಸುವ ವಿಡಿಯೋಗಳು ಈಗಾಗಲೇ ಸಾಕಷ್ಟು ವೈರಲ್ ಆಗುತ್ತಿದೆ. ಹೀಗೆ ಡ್ರೈವರ್ ಕೈ ಬಿಟ್ಟು ಆರಾಮವಾಗಿ ಕುಳಿತು ಕಾರು ಓಡಿಸಬಹುದಾದರೆ ಅಂತಹ ವಿಶಿಷ್ಟ ಕಾರು ಯಾವುದು ಎಂಬುದು ತಿಳಿದುಕೊಳ್ಳಲೇಬೇಕು ಅಲ್ವಾ?
ಅದುವೇ Mahindra XUV700. ಈ ಎಕ್ಸ್ ಯುವಿ ಎಲ್ಲಿ ಇರುವ ಈ ವೈಶಿಷ್ಟ್ಯತೆಯಿಂದಾಗಿ ಇದನ್ನು ಭಾರತೀಯ ಟೆಸ್ಲಾ ಎಂದೇ ಕರೆಯಲಾಗುತ್ತೆ. ಸ್ವಯಂ ಚಾಲಿತವಾದ (Self-Driving Car) ಈ ಕಾರ್ ಸ್ಟಿರಿಂಗ್ ಬಿಟ್ಟು ಹೆದ್ದಾರಿಯಲ್ಲಿ ಮೈಲುಗಟ್ಟಲೆ ಓಡಬಹುದು. ಇದರಲ್ಲಿ ಅಳವಡಿಸಲಾದ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸ್ವಯಂ ಚಾಲಿತವಾಗಿ ಸ್ಟೀರಿಂಗ್ ಬಿಟ್ಟು ಕಾರನ್ನು ಓಡಿಸಲು ಸಹಾಯ ಮಾಡುತ್ತದೆ.
ಇ ಡಿ ಎ ಎಸ್ ನಂತಹ ವೈಶಿಷ್ಟ್ಯತೆ ಹೊಂದಿರುವ ಮೊದಲ ಸ್ವಯಂ ಚಾಲಿತ ಕಾರ್ (Self-Driving Car) ಇದಾಗಿದೆ. ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಮಾತ್ರ ಈ ಸೌಲಭ್ಯ ಇತ್ತು ಇದೀಗ ಜನಸಾಮಾನ್ಯರು ಕೂಡ ಬಳಸುವುದಕ್ಕಾಗಿ Mahindra XUV700ರಸ್ತೆಗಿಳಿಯಲಿದೆ. ಆದರೆ ಕೆಲವು ನಗರಗಳಲ್ಲಿ ಈ ಕಾರನ್ನು ಪಡೆಯುವುದಕ್ಕೆ ಎರಡು ವರ್ಷ ಕಾಯಲೇಬೇಕು.
Mahindra XUV700 ಕಾರಿಗೆ ಈಗಾಗಲೇ ಬೇಡಿಕೆ ಹೆಚ್ಚಾಗಿದ್ದು ಜನವರಿ ತಿಂಗಳಿನಲ್ಲಿ 75,000 ಮಂದಿ ಬುಕ್ ಮಾಡಿದ್ದಾರೆ. ಈ ಒಂದು ಅಂಕಿ ಅಂಶವೇ ಈ ಕಾರಿನ ವೈಶಿಷ್ಟ್ಯತೆಯನ್ನು ತಿಳಿಸುತ್ತದೆ. ಇನ್ನು ಈ ಕಾರಿನ ರೂಪಾಂತರದ ಆಯ್ಕೆಗೆ ತಕ್ಕ ಹಾಗೆ ಬೆಲೆ ಬದಲಾಗುತ್ತದೆ. 16.12 ಲಕ್ಷ ರೂಪಾಯಿಗಳಿಂದ ಆರಂಭವಾಗಿ 31.07 ಲಕ್ಷ ರೂಪಾಯಿಗಳವರೆಗೆ ಈ ಕಾರ್ ಲಭ್ಯವಿದೆ.
Mahindra XUV700 ವೈಶಿಷ್ಟ್ಯತೆ:
ಈ ಕಾರ್ ನ ವೈಶಿಷ್ಟ್ಯತೆಯನ್ನು ನೋಡುವುದಾದರೆ ಯಾವ ಐಷಾರಾಮಿ ಕಾರಿಗೂ ಕಡಿಮೆ ಇಲ್ಲ ಲೆದರ್ ಸೀಟ್ಗಳು, ಲೆದರ್ ಸ್ಟೀರಿಂಗ್ ಹಾಗೂ ಗೇರ್ ಲಿವರ್ ನಲ್ಲಿಯೂ ಲೆದರ್ ಅಳವಡಿಸಲಾಗಿದೆ ಎಂಟು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಏಳು ಇಂಚಿನ ಡಿಜಿಟಲ್ ಇನ್ಫೋಟೈನ್ಮೆಂಟ್ ಕ್ಲಸ್ಟರ್ ಕೂಡ ಲಭ್ಯವಿದೆ. ಇನ್ನು ಉನ್ನತ ಶ್ರೇಣಿಯ XUV700 ವನ್ನು ಖರೀದಿಸಿದರೆ ಆ ಕಾರಿನಲ್ಲಿ ವಯರ್ಲೆಸ್ ಆಂಡ್ರಾಯ್ಡ್ ಆಟೋ, ಆಂಡ್ರಾಯ್ಡ್ ಎಕ್ಸ್ ಕನೆಕ್ಟ್, ಆರು ಮಾರ್ಗದ ಪವರ್ ಸೀಟ್ ಮೊದಲಾದ ಹೆಚ್ಚಿನ ವೈಶಿಷ್ಟ್ಯತೆ ದೊರೆಯಲಿದೆ.
ಇನ್ನು ಈ ಎಕ್ಸ್ ಯು ವಿ ಇಂಜಿನ್ ಬಗ್ಗೆ ಹೇಳುವುದಾದರೆ ಎಂಎಕ್ಸ್ ಸರಣಿಯ 2.0 ಲೀಟರ್ ಟರ್ಬೊ ಜಿಡಿಐಎಂ ಸ್ಟಾಲನ್ ಪೆಟ್ರೋಲ್ ಎಂಜಿನ್ ಅಥವಾ 2.2 ಲೀಟರ್ ನ ಕ್ಯಾಮನ್ ರೈಲ್ ಟರ್ಬೊ ಡಿಸೇಲ್ mhawk ಅಳವಡಿಸಲಾಗಿದೆ. ಅದೇ ರೀತಿ ಎ ಎಕ್ಸ್ ಸರಣಿಯಲ್ಲಿ 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 195 ಬಿಎಚ್ಪಿ ಮತ್ತು 380 nm ಪವರ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನ್ ವಾಲ್ ಹಾಗೂ ಆಟೋಮ್ಯಾಟಿಕ್ ಎರಡು ರೀತಿಯ ಗೇರ್ ಬಾಕ್ಸ್ ಪಡೆಯಬಹುದು. ಸುರಕ್ಷತೆಯ ದೃಷ್ಟಿಯಿಂದಲೂ ಈ ಕಾರಿನಲ್ಲಿ ಹೆಚ್ಚು ವೈಶಿಷ್ಟ್ಯತೆ ಇದೆ. 5 ಸ್ಟಾರ್ ಅನ್ನು ಸುರಕ್ಷಿತ ರೇಟಿಂಗ್ ಆಗಿ ಮಹೀಂದ್ರ ಎಕ್ಸ್ ಯುವಿ 700 ಕಾರು ಪಡೆದುಕೊಂಡಿದೆ.