Toyota Innova Crysta: ಟೊಯೊಟಾ ಇನೋವಾ ಕ್ರಿಸ್ಟಾ ಡೀಸೆಲ್ ಕಾರಿನ ಬೆಲೆ ಬಹಿರಂಗ, ಇಲ್ಲಿದೆ ಸಿಹಿಸುದ್ದಿ

Advertisement
ಇತ್ತೀಚೆಗೆ ಕಾರು ಖರೀದಿ ಮಾಡಬೇಕೆಂಬ ಕನಸು ಪ್ರತಿಯೊಬ್ಬ ವ್ಯಕ್ತಿಯದ್ದಾಗಿರುತ್ತದೆ, ಮಾರುಕಟ್ಟೆಯಲ್ಲಿ ವಿಧ ವಿಧವಾದ ಹೊಸ ಮೊಡೆಲ್ ಕಾರು(New Model Car) ಬಂದಿದೆ, ಇತ್ತೀಚೆಗೆ ಹಲವು ಹೊಸ ಕಾರುಗಳು ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಹೆಚ್ಚಿಸಿ, ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ (Toyota) ಕಂಪನಿಯು ಭಾರತದಲ್ಲಿ ಹೊಸ ಇನೋವಾ ಕ್ರಿಸ್ಟಾ (Innova Crysta) ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ, ಬೆಲೆ ಬಗ್ಗೆಯು ಮಾಹಿತಿ ದೊರೆತಿದೆ.
ಹೇಗಿದೆ ವೈಶಿಷ್ಟ್ಯ
ಹೌದು, ಇನೋವಾ ಕ್ರಿಸ್ಟಾ ಭಾರತದಲ್ಲಿ ತನ್ನ ಹೊಸ ಇನೋವಾ ಕಾರು ಬಿಡುಗಡೆಗಾಗಿ ಭರ್ಜರಿ ಸಿದ್ದತೆ ನಡೆಸಿದ್ದು 2023ರ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್(Diesel Engine) ಅನ್ನು ಹೊಂದಿರುತ್ತದೆ. ಈ ಇನೋವಾ ಕ್ರಿಸ್ಟಾ ಕಾರು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಕಾರು 7 ಮತ್ತು 8 ಸೀಟುಗಳಲ್ಲಿ ಬರಲಿದೆ. ಇನೋವಾ ಕ್ರಿಸ್ಟಾ ಮಾದರಿಗಿಂತಲೂ ಹೆಚ್ಚು ಸುಧಾರಿತ ಮತ್ತು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
Advertisement
ಬೆಲೆ ಎಷ್ಟು
ಈ ಕಾರು ತನ್ನದೇ ಆದ ಫೀಚರ್ಸ್(Features) ಅನ್ನು ಹೊಂದಿದೆ. ನೋಡಲು ಆಕರ್ಷಕವಾಗಿ ಕಾಣುವ ಈ ಕಾರು ಇದೇ ಕಾರಣಕ್ಕೆ ಬಳಕೆದಾರರನ್ನು ಹೊಂದಿದೆ. ಸದ್ಯ ನೂತನ ಕಾರಿನ ಬಿಡುಗಡೆಯಾಗಿ ಬಹುತೇಕ ಮಂದಿ ಕಾಯುತ್ತಿದ್ದಾರೆ. ಟಯರ್ ಪ್ರಶರ್ ಮಾನಿಟರಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇ ಸೇರಿಸಲಾಗಿದೆ. 2023ರ ಟೊಯೊಟಾ ಇನೋವಾ ಕ್ರಿಸ್ಟಾ ಜಿ ಬೇಸ್ ರೂಪಾಂತರ ಬೆಲೆಯು ರೂ.19.13 ಲಕ್ಷಗಳಾದರೆ, ಜಿಎಕ್ಸ್ ರೂಪಾಂತರದ ಬೆಲೆಯು ರೂ.19.99 ಲಕ್ಷಗಳಾಗಿದೆ.
ಯಾವ ಕಲರ್ ನಲ್ಲಿ ಆಯ್ಕೆಗಳಿವೆ
ಈ ಹೊಸ ಇನೋವಾ ಕ್ರಿಸ್ಟಾ , ವೈಟ್(White), ಆಟಿಟ್ಯೂಡ್ ಬ್ಲ್ಯಾಕ್(Attitude Black), ಸಿಲ್ವರ್(Silver) ಮತ್ತು ವೈಟ್ ಪರ್ಲ್(White Pearl) , ಕ್ರಿಸ್ಟಲ್ ಶೈನ್(Crystal Shine) ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ, ಇದರ ಜೊತೆಗ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್, ಡೈಮಂಡ್ ಕಟ್ ಇದೆ. ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ವಿತರಣೆಯು ಏಪ್ರಿಲ್ ತಿಂಗಳ ಅಂತ್ಯದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಕಾರಿನ ಕ್ರೇಜ್ ವಾಹನ ಪ್ರೀಯರಲ್ಲಿ ಮತ್ತಷ್ಟು ಹೆಚ್ಚಾಗಿದೆ.
Advertisement