ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವಂತಹ ಇಂಡಸ್ಟ್ರಿಗಳಲ್ಲಿ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಒಂದಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಹೆಚ್ಚಾಗಿರುವುದರಿಂದಾಗಿ ಹಾಗೂ ಪರಿಸರ ಮಾಲಿನ್ಯದ ಕಾರಣದಿಂದಾಗಿ ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ.
ಕಾರ್ ನಿರ್ಮಾಣ ಕಂಪನಿಗಳು ಕೂಡ ಹೆಚ್ಚಾಗಿ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯ 65% ಭಾಗವನ್ನ ಟಾಟಾ (Tata) ಸಂಸ್ಥೆಯ ಎಲೆಕ್ಟ್ರಿಕ್ ಕಾರುಗಳು ಆವರಿಸಿಕೊಂಡಿವೆ. ಇನ್ನು ಈ ವರ್ಷದ ಅಂತ್ಯದೊಳಗೆ ಟಾಟಾ ಸಂಸ್ಥೆ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಲಾಂಚ್ ಮಾಡೋದಕ್ಕೆ ಸಿದ್ಧತೆಯನ್ನು ನಡೆಸಿಕೊಂಡಿದೆ.
Tata Harrier EV
2023ರ ಎಕ್ಸ್ಪೋದಲ್ಲಿ Tata Harrier EV ಕಾರನ್ನು ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಮಾಹಿತಿಯ ಮೂಲಗಳ ಪ್ರಕಾರ ಈ ಕಾರನ್ನು 2024ರ ಅಂತ್ಯದ ಒಳಗೆ ಲಾಂಚ್ ಮಾಡುವಂತಹ ತಯಾರಿಯನ್ನು ಟಾಟಾ (Tata) ಸಂಸ್ಥೆ ಮಾಡಿಕೊಳ್ಳುತ್ತಿದೆ. ಈ ಕಾರಿನಲ್ಲಿ 60 ಕಿಲೋ ವ್ಯಾಟ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಮೈಲೇಜ್ ವಿಚಾರದ ಬಗ್ಗೆ ಮಾತನಾಡುವುದಾದರೆ ಫುಲ್ ಚಾರ್ಜ್ ನಲ್ಲಿ ಐನೂರು ಕಿಲೋಮೀಟರ್ಗಳ ರೇಂಜ್ ನೀಡಲಿದೆ. ಸರಿಸುಮಾರು ಮೂವತ್ತು ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಮಾರುಕಟ್ಟೆಗೆ ಲಾಂಚ್ ಆಗುವ ಸಾಧ್ಯತೆ ಇದೆ.
Tata Sierra EV
ಸಂಸ್ಥೆಯ ಮೂಲಗಳ ಪ್ರಕಾರ ಈ ಎಲೆಕ್ಟ್ರಿಕ್ ಕಾರ್ ಅನ್ನು 2025 ರಲ್ಲಿ ಲಾಂಚ್ ಮಾಡೋದಕ್ಕೆ ಎಲ್ಲಾ ತಯಾರಿಗಳು ನಡೆದಿವೆ. 2023ರ ಎಕ್ಸ್ಪೋದಲ್ಲಿ ಇದರ ಕಾನ್ಸೆಪ್ಟ್ ವರ್ಷನ್ ಅನ್ನು ಅನಾವರಣಗೊಳಿಸಲಾಗಿತ್ತು. ಇದರಲ್ಲಿ ಹಾರಿಯರ್ ಕಾರಿನ ಪವರ್ ಟ್ರಾನ್ ಅನ್ನು ನೀಡಲಾಗುತ್ತದೆ ಹಾಗೂ ಇದು ಕೂಡ ಬಹುತೇಕ 500 ಕಿಲೋಮೀಟರ್ಗಳ ಮೈಲೇಜ್ ಅನ್ನೇ ನೀಡುವುದು ಖಚಿತವಾಗಿದೆ. ಮಾಹಿತಿಗಳ ಪ್ರಕಾರ ಇದು 25 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಗ್ರಾಹಕರಿಗೆ ಸಿಗುವಂತಹ ಸಾಧ್ಯತೆ ಹೆಚ್ಚಾಗಿದೆ.
Tata Safari EV
ಟಾಟಾ ಸಂಸ್ಥೆನ ಅತ್ಯಂತ ಜನಪ್ರಿಯ ಎಸ್ ಯು ವಿಗಳಲ್ಲಿ ಒಂದಾಗಿರುವಂತಹ ಸಫಾರಿಯನ್ನು ಕೂಡ ಎಲೆಕ್ಟ್ರಿಕ್ ರೂಪಾಂತರದಲ್ಲಿ ಲಾಂಚ್ ಮಾಡುವ ಸಿದ್ಧತೆ ನಡೆಸಿಕೊಂಡಿದೆ. ಈಗಾಗಲೇ ಇದರ ಟೆಸ್ಟಿಂಗ್ ಕೂಡ ನಡೆದಿದೆ. ಇದು ಕೂಡ ಬಹುತೇಕ 500 ಕಿಲೋಮೀಟರ್ ಗಳ ರೇಂಜ್ ನೀಡಲಿದ್ದು 26 ರಿಂದ 30 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಗ್ರಾಹಕರಿಗೆ ದೊರಕಲಿದೆ.