Second Hand Cars: ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವವರು ಈ ಐದು ವಿಷಯಗಳನ್ನ ಮರೆಯದೆ ಚೆಕ್ ಮಾಡಿ ಇಲ್ವಾದ್ರೆ ನಷ್ಟ ಗ್ಯಾರಂಟಿ!

Advertisement
ಎಲ್ಲರಿಗೂ ಹೊಸ ಕಾರ್ ಖರೀದಿಸಲು ಸಾಧ್ಯವಿಲ್ಲ. ಆದರೆ ನಮ್ಮ ಅಗತ್ಯತೆಗಳಿಗೆ ಕೆಲವೊಮ್ಮೆ ಕಾರ್ ಬೇಕೇ ಬೇಕು ಎನಿಸುತ್ತದೆ ಆ ಸಂದರ್ಭದಲ್ಲಿ ಕೆಲವರು ಈಗಾಗಲೇ ಬಳಸಿದ ಸೆಕೆಂಡ್ ಹ್ಯಾಂಡ್ ಕಾರ್ (Second Hand Cars) ಖರೀದಿಸಲು ಮುಂದಾಗುತ್ತಾರೆ ಆದರೆ ಹೀಗೆ ಬಳಸಿದ ಕಾರನ್ನು ಖರೀದಿಸಬೇಕು ಅಂದ್ರೆ ವಿಶೇಷವಾದ ಜಾಗರೂಕತೆ ಇರಬೇಕು.
ಒಮ್ಮೆ ಬಳಸಿದ ಕಾರನ್ನು ಮತ್ತೆ ಖರೀದಿಸುವುದು ಅಂದರೆ ಅದರಲ್ಲಿ ಸಾಕಷ್ಟು ವಿಷಯಗಳನ್ನು ನೀವು ಗಮನಿಸಬೇಕು. ಇಲ್ಲವಾದರೆ ಆ ಕಾರು ನಾವು ಖರೀದಿಸಿದ ಕೆಲವೇ ದಿನಗಳಲ್ಲಿ ಮತ್ತೆ ಮತ್ತೆ ರಿಪೇರಿ ಮಾಡಿಕೊಂಡು ಇರಬೇಕಾದ ಹಾಗೂ ಅಧಿಕ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ನೀವು ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುದಿದ್ದರೆ ಗಮನಿಸಲೇಬೇಕಾದ ಕೆಲವು ಮುಖ್ಯ ಅಂಶಗಳನ್ನು ಈ ಲೇಖನದಲ್ಲಿ ಹೇಳಿದ್ದೇವೆ ಮುಂದೆ ಓದಿ.
1. ಬಜೆಟ್:
ಮೊದಲನೆಯದಾಗಿ ಬಜೆಟ್ ಅಂದರೆ ಹಣ. ಬಳಸಿದ ಕಾರನ್ನು ನೀವು ಮತ್ತೆ ಖರೀದಿಸುವಾಗ ಕೋಟ್ ಮಾಡಲಾಗಿರುವ ಹಣದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿ. ಸೆಕೆಂಡ್ ಹ್ಯಾಂಡ್ ಕಾರುಗಳು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿದೆ ಹಾಗಾಗಿ ಅದರ ಮೌಲ್ಯದ ಬಗ್ಗೆ ನೀವು ಸರಿಯಾಗಿ ನಾಲ್ಕು ಕಡೆ ವಿಚಾರಿಸಿ ತಿಳಿದುಕೊಳ್ಳಿ. ನಿಮ್ಮ ಬಜೆಟ್ ಗಿಂತ ಅಧಿಕ ಎನಿಸಿದರೆ ಆಕಾರನ್ನು ಖರೀದಿ ಮಾಡಬೇಡಿ. ಸೆಕೆಂಡ್ ಹ್ಯಾಂಡ್ ಕಾರಿನಲ್ಲಿ ಖರೀದಿ ಮಾಡುವಾಗ ನಿಮ್ಮ ಬಜೆಟ್ ಪ್ರಕಾರವೇ ಖರೀದಿ ಮಾಡಿ ಇಲ್ಲವಾದರೆ ನಷ್ಟವಾಗುತ್ತದೆ.
2. ಟೆಸ್ಟ್ ಡ್ರೈವ್:
ನೀವು ಬಳಸಿದ ಕಾರನ್ನು ಖರೀದಿ ಮಾಡುವುದಾದರೆ ಮೊದಲು ಅದರನ್ನು ಟೆಸ್ಟ್ ಡ್ರೈವ್ ಮಾಡಲೇಬೇಕು. ಟೆಸ್ಟ್ ಡ್ರೈವ್ ಮಾಡುವಾಗ ಆ ಕಾರಿನಲ್ಲಿ ಏನಾದರೂ ದೋಷವಿದೆಯೇ, ವಿಚಿತ್ರ ಶಬ್ದವೇನಾದರೂ ಬರುತ್ತದೆಯೇ, ಇಂಜಿನ್ ಸರಿಯಾಗಿ ಇದೆಯೇ ಎಂಬುದನ್ನ ಗಮನಿಸಿ. ನೀವು ಕಾರ್ ಓಡಿಸಿದವರಾಗಿದ್ದರೆ ನಿಮಗೆ ಇಂತಹ ಕಾರನ್ನು ಒಮ್ಮೆ ಓಡಿಸಿದರೆ ಅದು ಸರಿಯಾಗಿ ಇದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ. ಸಣ್ಣ ಡ್ರೈವ್ ನಿಂದ ಎಲ್ಲಾ ವಿಷಯಗಳು ತಿಳಿದುಕೊಳ್ಳಲು ಸಾಧ್ಯವಾಗದೆ ಇದ್ದರೆ ಸ್ವಲ್ಪ ಲಾಂಗ್ ಡ್ರೈವ್ ಹೋಗಿ. ಕಾರಿನ ಕಂಡಿಶನ್ ಸ್ಪಷ್ಟವಾಗಿ ತಿಳಿಯುತ್ತದೆ.
Advertisement
3. ಕಾರಿನ ರೇಟಿಂಗ್:
ಒಮ್ಮೆ ಟೆಸ್ಟ್ ಡ್ರೈವ್ ಮಾಡಿದ ನಂತರ ನೀವು ಕೊಂಡುಕೊಳ್ಳಬೇಕು ಎಂದು ಇರುವ ಕಾರಿನ ರೇಟ್ ಮಾಡಿ. ಕಾರಿನಲ್ಲಿ ಇರುವ ಪ್ರತಿಯೊಂದು ಅಂಶಕ್ಕೂ ಒಂದೊಂದು ರೈಟಿಂಗ್ ಕೊಡುತ್ತಾ ಬನ್ನಿ. ಆ ಕಾರಿನಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಗಮನಿಸಿ. ಒಂದು ವೇಳೆ ನಿಮಗೆ ಕಾರಿನ ಎಲ್ಲಾ ವಿಷಯಗಳು ಇಷ್ಟವಾಗಿ ಒಂದು ಸಣ್ಣ ಸಮಸ್ಯೆ ಇದ್ದರೆ ಅದನ್ನ ಸರಿಪಡಿಸಬಹುದೇ ಅಥವಾ ಅದಕ್ಕೆ ಅಷ್ಟು ಹಣ ಖರ್ಚು ಮಾಡಬಹುದೇ ಎಂಬುದನ್ನ ಲೆಕ್ಕ ಹಾಕಿ. ನೀವು ಕೊಡುವ ಹಣಕ್ಕೆ ಆ ಕಾರ್ ವರ್ಥ್ ಆಗಿದೆಯಾ ಎಂಬುದನ್ನು ಚೆಕ್ ಮಾಡಿ.
4. ಸರ್ವಿಸ್ ರೆಕಾರ್ಡ್:
ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಸರ್ವಿಸ್ ರೆಕಾರ್ಡ್ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಅಧಿಕೃತ ಸೇವ ಕೇಂದ್ರದಲ್ಲಿ ಅದರ ಬಗ್ಗೆ ಪರಿಶೀಲನೆ ಮಾಡಿಸಿಕೊಳ್ಳಿ. ಸರ್ವಿಸ್ ರೆಕಾರ್ಡ್ ಸರಿಯಾಗಿ ಇದ್ದರೆ ಕಾರು ಉತ್ತಮ ಸ್ಥಿತಿಯಲ್ಲಿ ಇದೆ ಎಂದು ಅರ್ಥ.
5. ಮೆಕಾನಿಕ್ ಚೆಕ್:
ಕಾರನ್ನು ಕೊಳ್ಳುವಾಗ ಕೊನೆಯದಾಗಿ ಗಮನಿಸಲೇಬೇಕಾದ ಅಂಶವೆಂದರೆ ಈ ಕಾರನ್ನು ನೀವು ಒಬ್ಬ ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗಿ ಅದನ್ನ ಪರಿಶೀಲಿಸಿ. ಅಥವಾ ಸರ್ವಿಸ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಕಾರಿನ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ. ಅವರು ಹೇಳಿದ ರೀತಿಯಲ್ಲಿ ಕಾರ್ ಸರಿಯಾಗಿ ಇದ್ದರೆ ನೀವು ಈ ಕಾರ್ ಖರೀದಿಗೆ ಮುಂದಾಗಬಹುದು.
Advertisement