8 Seater Car: ಫಾರ್ಚುನರ್-ಎರ್ಟಿಗಾವನ್ನು ಮೂಲೆಗುಂಪು ಮಾಡಲಿದೆ ಈ ಹೊಸ 8 ಸೀಟರ್ ಕಾರು!

Advertisement
ಟಯೋಟ ಕಿಲೋಸ್ಕರ್ ಮೋಟಾರ್ ಭಾರತದಲ್ಲಿ ತನ್ನದೇ ಆದ ಟ್ರೆಂಡ್ ಕ್ರಿಯೇಟ್ ಮಾಡಿದೆ. ಮತ್ತೆ ಇನೋವಾ ಕ್ರಿಸ್ಟಾ ನಲ್ಲಿ ಡೀಸೆಲ್ ರೂಪಾಂತರವನ್ನು ಪರಿಚಯಿಸಿದೆ. ಕಂಪನಿ ಕೆಲವು ತಿಂಗಳ ಹಿಂದೆ ಇದರ ತಯಾರಿಕೆಯನ್ನು ಸ್ಥಗಿತಗೊಳಿಸಿತು. ಬಳಿಕ ಇನ್ನೋವಾ ಹೈ ಕ್ರಾಸ್ ಮಾದರಿಯನ್ನು ಪರಿಚಯಿಸಿತು. ಇದೀಗ ನವೀಕರಿಸಿದ ಇನೋವಾ ಕ್ರಿಸ್ಟ ಡೀಸೆಲ್ ರೂಪಾಂತರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರಸ್ತುತ MPV ನಾಲ್ಕು ರೂಪಾಂತರಗಳಿದ್ದು, ಅದರಲ್ಲಿ ಜಿ ಮತ್ತು ಜಿ ಎಕ್ಸ್ ಎರಡು ರೂಪಾಂತರಗಳು ಲಭ್ಯವಿದೆ. ಅಲ್ಲದೆ ಟೊಯೋಟಾ ಇನ್ನೋವಾ ಕ್ರಿಸ್ಟ ಡೀಸೆಲ್ ವರ್ಷನ್ ನಲ್ಲಿ 7 ಮತ್ತು 8 ಸೀಟರ್ ರೂಪಾಂತರ ಹೊಂದಿದೆ.
ಇದರ ಬೆಲೆ ನೋಡುವುದಾದರೆ (ಎಕ್ಸ್ ಶೋರೂಮ್ ಬೆಲೆ) ಜಿ ವೇರಿಯಂಟ್ ನ 7 ಸೀಟರ್ ಕಾರಿನ ಬೆಲೆ 19.13 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಅದೇ ರೀತಿ 8 ಸೀಟರ್ಗಳ ಬೇಸಿಕ್ ಮಾಡೆಲ್ ಬೆಲೆ 19 .18 ಲಕ್ಷ ರೂಪಾಯಿಗಳು. ಇನ್ನು ಜಿ ಎಕ್ಸ್ ರೂಪಾಂತರದಲ್ಲಿ ಏಳು ಸೀಟರ್ ಕಾರಿಗೆ 19.99 ಲಕ್ಷ ರೂಪಾಯಿಗಳಾಗಿದ್ದರೆ, 8 ಸೀಟರ್ ನ ಜಿಎಕ್ಸ್ ರೂಪಾಂತರದ ಬೆಲೆ 20.04 ಲಕ್ಷ ರೂಪಾಯಿಗಳು. ಇನ್ನು ಎರಡು ರೂಪಾಂತರಗಳಾದ ವಿ ಎಕ್ಸ್ ಮತ್ತು ಝೆಡ್ ಎಕ್ಸ್ ರೂಪಂತರದ ಬೆಲೆ ಬಹಿರಂಗವಾಗಿಲ್ಲ.
ಇಂಜಿನ್ ಸಾಮರ್ಥ್ಯ:
ಈ ವರ್ಷ ಬಿಡುಗಡೆ ಮಾಡಲಾಗಿರುವ ಟೊಯೋಟಾ ಇನ್ನೋವಾ ಕ್ರಿಸ್ಟ, 2.4 ಲೀಟರ್ ಹಾಗೂ ನಾಲ್ಕು ಸಿಲಿಂಡರ್ ಟರ್ಬೋ ಡೀಸೆಲ್ ಇಂಜಿನ್ ಹೊಂದಿದ್ದು ಐದು ವೇಗದ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಹೊಸ ಮಾದರಿಯಲ್ಲಿ 2.7 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ತೆಗೆದುಹಾಕಲಾಗಿದೆ. ಡೀಸೆಲ್ ರೂಪಾಂತರದಲ್ಲಿ 5 ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.
Advertisement
ವಿಶೇಷವಾದ ಫೀಚರ್ ಗಳು;
ವಯರ್ಲೆಸ್ ಡೋರ್ ಲಾಕ್ ಪವರ್ ವಿಂಡೋ ಮ್ಯಾನುವಲ್ ಬ್ಲಾಕ್ ಕವರ್ ಸೀಟ್ ಗಳು, ಎಂಐ ಡಿ ಸ್ಪೀಡು ಮೀಟರ್ 16 ಇಂಚಿನ ಸ್ಟೀಲ್ ವೀಲ್ ಹಾಗೂ ಬ್ಲಾಕ್ ರೇಡಿಯೇಟರ್ ಗ್ರಿಲ್, ಹ್ಯಾಲೊಜಿನ್ ಹೆಡ್ ಲೈಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು ಮೊದಲಿಗಿಂತಲೂ ವಿಶೇಷ ಲುಕ್ ಹೊಂದಿದೆ. ಇನ್ನು ಸುರಕ್ಷತೆಗಾಗಿ 3 ಏರ್ ಬ್ಯಾಗ್ ಅನ್ನು ನೀಡಲಾಗಿದೆ. ಸಾಮಾನ್ಯ ಕಾರಿನಲ್ಲಿ ಇರುವಂತೆ ಈಬಿಡಿ ಜೊತೆಗೆ ಎಬಿಎಸ್ ನೀಡಲಾಗಿದ್ದು ಹಿಲ್ ಸ್ಟಾರ್ಟ್ ಅಸಿಸ್ಟೆಂಟ್, ಬ್ರೆಕ್ ಅಸಿಸ್ಟೆಂಟ್, ಸೀಟ್ ಬೆಲ್ಟ್ ವಾರ್ನಿಂಗ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ ಮೊದಲಾದವುಗಳನ್ನು ಹೊಸದಾಗಿ ಅಳವಡಿಸಲಾಗಿದೆ. ವೆಹಿಕಲ್ ಸ್ಟೇಬ್ಯುರಿಟಿ ಕಂಟ್ರೋಲ್ ಹಾಗೂ ಆಂಟಿ ಥ್ರೇಟ್ ಸಿಸ್ಟಮ್ ಕೂಡ ಈ ಕಾರಿನಲ್ಲಿ ನೀವು ಕಾಣಬಹುದು.
ಟೊಯೋಟಾ ಇನ್ನೋವಾ ಕ್ರಿಸ್ಟಾ ಡೀಸೆಲ್ ರೂಪಾಂತರ (2023) ಬೆಲೆಗಳು:
- ಜಿ 7 ಸೀಟರ್ – 19.13 ಲಕ್ಷ ರೂಪಾಯಿಗಳು.
- ಜಿ 8 ಸೀಟರ್ – 19.18 ಲಕ್ಷ ರೂಪಾಯಿಗಳು.
- GX 7-ಸೀಟರ್ – ರೂ 19.99 ಲಕ್ಷ ರೂಪಾಯಿಗಳು.
- GX 8-ಸೀಟರ್ – ರೂ 20.04 ಲಕ್ಷ ರೂಪಾಯಿಗಳು.
Advertisement