ಇಂದು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (EV Scooter) ನ ಹವಾ ಜೋರಾಗಿದೆ. ಬಹುತೇಕ ಎಲ್ಲಾ ಮೋಟಾರ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಯಾರಿಸುತ್ತಿದ್ದಾರೆ. ಅದೇ ರೀತಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಕೂಡ ಹೆಚ್ಚಾಗಿದೆ. ಆದರೆ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಖರೀದಿಸುವಾಗ ಮೊದಲು ಅದರ ಬ್ಯಾಟರಿಯ ಬಗ್ಗೆ ತಿಳಿದುಕೊಳ್ಳಬೇಕು.
ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಎಷ್ಟು ಕಿಲೋಮೀಟರ್ ವರೆಗೆ ಓಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದರೆ ಇನ್ನು ಮುಂದೆ ಈ ಸಮಸ್ಯೆ ಇರೋದಿಲ್ಲ. ಯಾಕಂದ್ರೆ ಈವಿ ಸ್ಟಾರ್ಟ್ ಅಪ್ ಕಂಪನಿ ಕೊಮಾಕಿ (Komaki) ಬ್ಯಾಟರಿ ಸಮಸ್ಯೆಗೆ ಉತ್ತಮ ಪರಿಹಾರ ಕಂಡುಹಿಡಿದಿದೆ. ಕೂಮಕಿ ಎಲ್ ವೈ ಪ್ರೊ (Komaki LY Pro) ಸ್ಕೂಟರ್ ಅನ್ನು ಕಂಪನಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ ವಿಶೇಷತೆ ಅಂದ್ರೆ ಇದರಲ್ಲಿ ಎರಡೆರಡು ಬ್ಯಾಟರಿ ಜೋಡಿಸಲಾಗಿದೆ. ಈ ಸ್ಕೂಟರ್ ಇನ್ನಷ್ಟು ವಿಶೇಷತೆ ನೋಡೋಣ.
ಗಂಟೆಗೆ 62 ಕಿಲೋಮೀಟರ್ ಗರಿಷ್ಠ ವೇಗ:
Komaki LY Pro ಸ್ಕೂಟರ್ ನಲ್ಲಿ ಒಂದಲ್ಲ ಎರಡು ಬ್ಯಾಟರಿ ಅಳವಡಿಸಲಾಗಿದೆ. ನೀವು ಎರಡು ಬ್ಯಾಟರಿಗಳನ್ನ ಫುಲ್ ಚಾರ್ಜ್ ಮಾಡಿಸಿಕೊಂಡು ಪ್ರಯಾಣ ಬೆಳೆಸಿದರೆ 180 ಕಿಲೋಮೀಟರ್ ವರೆಗೆ ಕ್ರಮಿಸಬಹುದು. ಒಂದೇ ಬ್ಯಾಟರಿ ಚಾರ್ಜ್ ನಲ್ಲಿ 85km ಚಲಿಸಬಹುದು. ಈವಿ ಸ್ಕೂಟರ್ ಗಂಟೆಗೆ 62 ಕಿಲೋಮೀಟರ್ ವೇಗ ನೀಡುತ್ತದೆ.
ಇನ್ನು ಈ ಬ್ಯಾಟರಿಗಳನ್ನ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಇಷ್ಟು ಮಾತ್ರವಲ್ಲ ರಸ್ತೆ ಅಪಘಾತಗಳನ್ನ ತಡೆಯುವ ಸಲುವಾಗಿ ಅಡ್ವಾನ್ಸ್ ಆಂಟಿ ಸ್ಕಿಡ್ ತಂತ್ರಜ್ಞಾನವನ್ನು ಈ ಸ್ಕೂಟರ್ ನಲ್ಲಿ ನೀವು ಕಾಣಬಹುದು. 12 ಇಂಚಿನ ಟ್ಯೂಬ್ಲೆಸ್ ಟೈಯರ್ ಇದೆ ಜೊತೆಗೆ 3 ಗೇರ್ ಮೋಡ್ ಗಳನ್ನು ಮಿಶ್ರಣ ಮಾಡಬಹುದು.
ಇನ್ನು ಈ ಸ್ಕೂಟರ್ ನಲ್ಲಿ ನೀಡಲಾಗಿರುವ ಬ್ಯಾಟರಿ 62ವಿ 32 ಎಹೆಚ್ ಸಾಮರ್ಥ್ಯ ಹೊಂದಿದೆ. ಡುಯೆಲ್ ಚಾರ್ಜರ್ ಬಳಸಿ ಬಹಳ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಟಿ ಎಫ್ ಟಿ ಡಿಸ್ಪ್ಲೇ, ಆನ್ ಬೋರ್ಡ್ ನ್ಯಾವಿಗೇಶನ್ ಕೂಡ ಈ ಸ್ಕೂಟರ್ ನಲ್ಲಿ ಇದೆ. ಇನ್ನು ಮೂರು ಗೇರ್ ಮೂಡ್ಗಳನ್ನು ಕೂಡ ವಿಶಿಷ್ಟವಾಗಿ ನೀಡಲಾಗಿದೆ. ಇನ್ನು ಕೊಮಾಕಿ ಎಲ್ ವೈ ಪ್ರೋ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ನೋಡುವುದಾದರೆ (ಎಕ್ಸ್ ಶೋರೂಮ್ ಬೆಲೆ) 1,37,500 ರೂಪಾಯಿಗಳು. ಅತ್ಯುತ್ತಮ ಬ್ಯಾಟರಿ ಹಾಗೂ ಅಧಿಕ ವೇಗ ಇರುವ ಸ್ಕೂಟರ್ ಬಯಸುವವರಿಗೆ ಕೊಮಾಕಿ ಎಲ್ ವೈ ಪ್ರೊ ಇದು ಸರಿಯಾದ ಆಯ್ಕೆ.