ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅದರಲ್ಲೂ ಹಾಲಿವುಡ್ ನ ಕೆಲವು ಆಕ್ಷನ್ ಸಿನಿಮಾಗಳಲ್ಲಿ ಹೀರೋ ಬೈಕ್ ನಲ್ಲಿ ಹಾರುವುದು ಅಥವಾ ಕಾರ್ ಆಕಾಶದಲ್ಲಿ ತೇಲಾಡುವುದನ್ನು ನೀವು ನೋಡಿರಬಹುದು. ಇದೆಲ್ಲಾ ಸಿನಿಮಾಕ್ಕೆ ಮಾತ್ರ ಸೀಮಿತ ಎಂದು ಅಂದುಕೊಂಡಿದ್ದರೆ ಇದು ಖಂಡಿತವಾಗಿಯೂ ತಪ್ಪು ಯಾಕೆಂದರೆ ವಾಸ್ತವದಲ್ಲಿಯೂ ಹಾರಾಡುವ ಬೈಕ್ ತಯಾರಾಗಿಬಿಟ್ಟಿದೆ ಸದ್ಯ ಆಕಾಶದಲ್ಲಿ ಬೈಕ್ ಹಾರಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಂಪನಿಯೊಂದು ಈಗಾಗಲೇ ಭವಿಷ್ಯದ ಹಾರುವ ಬೈಕ್ ಅನ್ನು ತಯಾರಿಸಿಬಿಟ್ಟಿದೆ ಕನಸಿನಲ್ಲಿ ನೀವು ಈ ಹಾರುವ ಬೈಕ್ ಕಂಡಿದ್ದರೆ ಅದು ಶೀಘ್ರದಲ್ಲಿಯೇ ನಿಮ್ಮ ಕಣ್ಣು ಮುಂದೆ ಇರಲಿದೆ. ಸದ್ಯ ಜಪಾನಿನ ಸ್ಟಾರ್ಟ್ ಕಂಪನಿ AERWINS ಎನ್ನುವ ಕಂಪನಿ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ಯಾಕೆ ಅಂತೀರಾ? ಈ ಕಂಪನಿ ಈಗಾಗಲೇ ಫ್ಯೂಚುರೆಷ್ಟಿಕ್ ಪ್ಲೈಯಿಂಗ್ ಬೈಕ್ (Flying Bike) ತಯಾರಿಸಿದೆ. ಈ ಬೈಕ್ ನ ಹೆಸರು ಎಕ್ಸ್ ತ್ರುಸಿಮೋ (XTURISMO). ಈ ಬೈಕ್ ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಬೈಕ್ ಎನಿಸಿಕೊಂಡಿದೆ. ಅಂದಹಾಗೆ ಈ ಹೋವರ್ ಬೈಕ್ ಜಪಾನಿನಲ್ಲಿ ಮಾರಾಟಕ್ಕೆ ಇದೆ. ಸದ್ಯದಲ್ಲೇ ಜಪಾನದಿಂದ ಹೊರಗೆ ಅದರಲ್ಲೂ ಅಮೆರಿಕದಲ್ಲಿ ಈ ಬೈಕ್ ಗಳ ಮಾರಾಟ ಆರಂಭಿಸುವುದಾಗಿ ಕಂಪನಿಯ ಸಿಇಓ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ XTURISMO ಬೈಕ್ ಹಾರಾಡುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿ ಒಬ್ಬ ಬೈಕ್ ಮೇಲೆ ಕುಳಿತು ಟರ್ಬೈನ್ ಸುತ್ತುತ್ತಿರುವ ದೃಶ್ಯ ನೋಡಬಹುದು. ಬೈಕ್ ಸವಾರ ಬೈಕ್ ಸ್ಟಾರ್ಟ್ ಮಾಡಿದ ಕೂಡಲೇ ಮೊದಲು ಗಾಳಿಯಲ್ಲಿ ಏರಿ ನಂತರ ಹಾರಲು ಆರಂಭಿಸುತ್ತದೆ ಬೈಕ್. ಉದ್ಯಮಿ ಕೋರ್ಟ್ ಎನ್ನುವ ಬಳಕೆದಾರರು ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. xturismo_official ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಈ ಬೈಕ್ ನಿಜವಾಗಿಯೂ ಅಸ್ತಿತ್ವದಲ್ಲಿ ಎಂದು ದೃಢೀಕರಿಸಲ್ಪಟ್ಟಿದೆ.
ಎರಡು ವಾರಗಳ ಹಿಂದೆ ಈ ವಿಡಿಯೋವನ್ನು ಶೇರ್ ಮಾಡಲಾಗಿತ್ತು. ಈಗಾಗಲೇ ಮಿಲಿಯನ್ ಗಟ್ಟಲೆ ಜನ ಈ ವಿಡಿಯೋ ವೀಕ್ಷಿಸಿದ್ದು ಸಾಕಷ್ಟು ಲೈಕ್ ಹಾಗೂ ಕಮೆಂಟ್ಗಳು ಕೂಡ ಬರುತ್ತಿವೆ. ಗಾಳಿಯಲ್ಲಿ ಹಾರುವ ಬೈಕ್ ನ ಈ ವಿಡಿಯೋ ನೋಡಿದರೆ ಸಿನಿಮಾ ನೋಡಿದ ಹಾಗೆ ಆಗುತ್ತದೆ ಎಂದು ಜನ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಮನುಷ್ಯ ಕುಳಿತುಕೊಳ್ಳಬಹುದಾದ ಡ್ರೋನ್ ಅಷ್ಟೇ ಬೈಕ್ ಅಲ್ಲ ಎಂಬುದಾಗಿಯೂ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಹಾರಾಡುವ ಬೈಕ್ ಸದ್ಯ ಜನರಲ್ಲಿ ಕುತೂಹಲ ಮೂಡಿಸಿದ್ದು ಇದರ ಬಗ್ಗೆ ಇನ್ನಷ್ಟು ಅಪ್ಡೇಟ್ ಗಾಗಿ ಜನ ಕಾದಿದ್ದಾರೆ.
Credit: South China Morning Post