Best Cars Under 10 Lakh: ಭಾರತದಲ್ಲಿ 10 ಲಕ್ಷದ ಒಳಗೆ ಕಣ್ಮುಚ್ಚಿ ಖರೀದಿಸಬಹುದಾದ ಬೆಸ್ಟ್ ಕಾರುಗಳು ಇಲ್ಲಿವೆ.
ಭಾರತೀಯ ಆಟೋ ಮೋಟಾರ್(Auto Motor) ಮಾರುಕಟ್ಟೆಯನ್ನ ಆವರಿಸಿಕೊಂಡ ಕಾರ್ ಅಂದ್ರೆ ಅದು ಎಸ್ ಯು ವಿ(SUV) ಮಾಡೆಲ್ ಕಾರ್ ಗಳು. ಸೇಫ್ಟಿ, ತಂತ್ರಜ್ಞಾನ, ಲುಕ್, ನಿರ್ವಹಣೆ ಎಲ್ಲದರಲ್ಲಿಯೂ ಎಸ್ ಯು ವಿ ಕಾರ್ ಗಳೇ ಬೇಸ್ಟ್. ಇಡೆ ಕಾರಣಕ್ಕೆ ಈ ಕಾರ್ ಗಳ ಬೇಡಿಕೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಅದೇ ರೀತಿ ಜನರ ಬೇಡಿಕೆಗೆ ತಕ್ಕ ಹಾಗೆ ಆಟೋ ಮೋಟಾರ್ ಕಂಪನಿಗಳು ಎಸ್ ಯು ವಿ ಗಳಲ್ಲಿ ವಿಶೇಷ ವೈಶಿಷ್ಟ್ಯತೆಗಳನ್ನೂ ಕೂಡ ಅಳವಡಿಸಿಕೊಂಡು ಬರುತ್ತಿದ್ದಾರೆ.
ಅಂದ ಹಾಗೇ ನೀವು 10 ಲಕ್ಷ ರೂ. ಬಜೆಟ್ ಒಳಗೆ ಎಸ್ ಯು ವಿ ಕರ್ ಖರೀದಿಸುವ ಪ್ಲ್ಯಾನ್(Plan) ಮಾಡಿದ್ದೀರಾ? ಆದ್ರೆ ಯಾವ ಕಾರ್ ಕೊಂದುಕೊಳ್ಳುವುದು ಎನ್ನುವ ಗೊಂದಲಾನಾ? ಹಾಗಾದ್ರೆ ಚಿಂತೆ ಬೇಡ, ಕೈಗೆಟುಕುವ ಎಸ್ ಯು ವಿ ಕಾರ್ ಗಳಾ ಪಟ್ಟಿ ಇಲ್ಲಿದೆ ನೋಡಿ.ಮಹೀಂದ್ರಾ ಥಾರ್(Mahendra Thar) ನಿಂದ ಹಿಡಿದು ಬಹುತೇಕ ಎಲ್ಲಾ ಫೇಮಸ್(Famous) ಆಟೋ ಮೋಟಾರ್ ಕಂಪನಿಗಳ ಕಾರ್ ಗಳ ಎಸ್ ಯು ವಿ ಮಾಡೆಲ್ ಗಳನ್ನು 10 ಲಕ್ಷ ಬೆಲೆಯ ಒಳಗೆ ಖರೀದಿಮಾಡಬಹುದು.
10 ಲಕ್ಷ ರೂ. ಗಳ ಒಳಗಿನ ಎಸ್ ಯು ವಿಗಳು:
ಟಾಟಾ ಪಂಚ್ – ಆರಂಭಿಕ ಬೆಲೆ 6 ಲಕ್ಷರೂ. ಗಳಿಂದ 9.4 ಲಕ್ಷರೂ. ಗಳವರೆಗೆ
ಟಾಟಾ ನೆಕ್ಸನ್ ಆರಂಭಿಕ 7.80 ಲಕ್ಷರೂ. ಗಳಿಂದ 14.35 ಲಕ್ಷ ರೂ. ಗಳವರೆಗೆ
ಮಾರುತಿ ಬ್ರೆಝಾ – ಆರಂಭಿಕ ಬೆಲೆ 8.19 ಲಕ್ಷರೂ. ಗಳಿಂದ 13.88 ಲಕ್ಷ ರೂ.ಗಳವರೆಗೆ
ಹ್ಯುಂಡೈ ವೆನ್ಯೂ ಆರಂಭಿಕ ಬೆಲೆ ರೂ 7.68 ಲಕ್ಷ ರೂ.ಗಳಿಂದ 13.11 ಲಕ್ಷ ರೂ.ಗಳವರೆಗೆ
ಕಿಯಾ ಸೋನೆಟ್ ಆರಂಭಿಕ ಬೆಲೆ 7.69 ಲಕ್ಷ ರೂ.ಗಳಿಂದ 14.39 ಲಕ್ಷ ರೂ.ಗಳವರೆಗೆ
ರೆನಾಲ್ಟ್ ಕಿಗರ್ ಆರಂಭಿಕ ಬೆಲೆ 6.50 ಲಕ್ಷ ರೂ. ಗಳಿಂದ 11.23 ಲಕ್ಷ ರೂ.ಗಳವರೆಗೆ
ನಿಸ್ಸಾನ್ ಮ್ಯಾಗ್ನೈಟ್ ಆರಂಭಿಕ ಬೆಲೆ 5.97 ಲಕ್ಷ ರೂ. ಗಳಿಂದ 10.94 ಲಕ್ಷ ರೂ.ಗಳವರೆಗೆ
ಮಹೀಂದ್ರ XUV300 ಆರಂಭಿಕ ಬೆಲೆ 8.41 ಲಕ್ಷ ರೂ. ಗಳಿಂದ 14.07 ಲಕ್ಷ ರೂ.ಗಳವರೆಗೆ
ಮಹೀಂದ್ರ ಬೊಲೆರೊ ಆರಂಭಿಕ ಬೆಲೆ 9.78 ಲಕ್ಷ ರೂ.ಗಳಿಂದ 10.79 ಲಕ್ಷ ರೂ.ಗಳವರೆಗೆ
ಮಹೀಂದ್ರ ಥಾರ್ ಆರಂಭಿಕ ಬೆಲೆ 9.99 ಲಕ್ಷ ರೂ.ಗಳಿಂದ 16.49 ಲಕ್ಷ ರೂ.ಗಳವರೆಗೆ
ಈ ಮೇಲೆ ಹೇಳಿದ ಬೆಲೆ ಎಕ್ಸ್ ಶೋರೂಮ್ ಬೆಲೆಯಾಗಿದೆ. ಈ ಕಾರ್ ಗಳಾಲ್ಲಿ ಕೆಲವು ಮುಖ್ಯವಾದ ಅಂಶಗಳೆಂದರೆ, ಮಹೀಂದ್ರ ಬೊಲೆರೊ 7 ಆಸನ ಮತ್ತು ಥಾರ್ 4 ಆಸನ ಹೊಂದಿದ್ದು, ಈ ಎರಡು ಕಾರ್ ಗಳನ್ನು ಬಿಟ್ಟು ಉಳಿದವು 5-ಆಸನಗಳ SUV ಆಗಿದೆ.
ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ವಿಭಾಗಕ್ಕೆ ಸೇರಿದೆ ಹಾಗೂ ಉಳಿದ ಎಸ್‌ಯುವಿಗಳು ಉಪ 4-ಮೀಟರ್ ಎಸ್‌ಯುವಿ ವಿಭಾಗದಲ್ಲಿ ಬರುತ್ತವೆ. ಅಲ್ಲದೇ ಈ SUV ಗಳ ಟಾಪ್-ಎಂಡ್ ರೂಪಾಂತರಗಳು ನಿಮಗೆ ಬೇಕು ಅಂದರೆ ಅದು 10 ಲಕ್ಷ ರೂ. ಬಜೆಟ್ ನಲ್ಲಿ ಬರುವುದಿಲ್ಲ. ಹೆಚ್ಚು ಉನ್ನತ ಶ್ರೇಣಿಯ ಕಾರ್ ಗಳ ಬೆಲೆಯೂ ಹೆಚ್ಚುತ್ತಾ ಹೋಗುತ್ತದೆ ಎಂಬುದನ್ನು ನೀವಿಲ್ಲಿ ಗಮನಿಸಬೇಕು.