Kia Seltos 2023: ಕಿಯಾ ಸೇಲ್ಟೋಸ್ 2023 ರ ಹೊಸ ಮಾಡೆಲ್ ಬಿಡುಗಡೆ, ಇಲ್ಲಿದೆ ಹೊಸ ಫೀಚರ್ಸ್

Advertisement
ಸದ್ಯ ಭಾರತದ (Indian) ಕಾರು ಪ್ರಿಯರಲ್ಲಿ (Car Lover’s) ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಕ್ರೇಜ್ ಉಂಟು ಮಾಡಿದ ವಾಹನಗಳಲ್ಲಿ ಕಿಯಾ ಎಸ್‌ಯುವಿಯು (KIA SUV) ಪ್ರಮುಖವಾಗಿದೆ. ಹೌದು ಭಾರತದ ರಸ್ತೆಗಳಲ್ಲಿ (Indian Roads) ಈಗ ಸಾಕಷ್ಟು ಕಿಯಾ ಕಾರುಗಳಿವೆ. ಇದೀಗ ಕಿಯಾ ಕಂಪನಿಯು ಸೆಲ್ಟೋಸ್‌ನ ( KIA Seltis) ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಪರಿಚಯಿಸಿದೆ. ಹೌದು ಅಂದಹಾಗೆ ನೂತನ ಫೇಸ್‌ಲಿಫ್ಟ್ ಲಾಂಚ್ ಆಗಿರುವುದು ಕೊರಿಯಾದಲ್ಲಿ (Korea) . ಕೊರಿಯಾದಲ್ಲಿ ಲಾಂಚ್ ಆದ ನೂತನ ಎಸ್‌ಯುವಿಯು ಇದೀಗ ಭಾರತಕ್ಕೆ ಆಗಮಿಸದೆ . Kia Seltos facelift SUVಗೆ ದಕ್ಷಿಣ ಕೊರಿಯಾದಲ್ಲಿ 20.6m ಕೆಆರ್‌ಎಂ ದರವಿದ್ದು ಇದು ಬಾರತದಲ್ಲಿ ಎಷ್ಟು ಗೊತ್ತಾ?
ಇನ್ನು ಕಿಯಾ ಕಂಪನಿಯು ಸೆಲೋಸ್ ಎಂಬ ಸಣ್ಣ ಎಸ್‌ಯುವಿಯ ಫೇಸ್‌ಲಿಫ್ಟ್(Facelift) ಆವೃತ್ತಿಯನ್ನು ದಕ್ಷಿಣ ಕೊರಿಯಾದಲ್ಲಿ ಲಾಂಚ್ ಮಾಡಿದ್ದು ನೂತನ ತಲೆಮಾರಿನ ಈ ಎಸ್‌ಯುವಿಯ ವಿನ್ಯಾಸದಲ್ಲಿ ಸಾಕಷ್ಟು ಅಪ್‌ಗ್ರೇಡ್(Upgrade) ಆಗಿದ್ದು ಕಾರಿನೊಳಗೂ ಸಾಕಷ್ಟು ತಾಂತ್ರಿಕ ಬದಲಾವಣೆಗಳನ್ನು ನೋಡಬಹುದು. ಹೌದು ಭಾರತದಲ್ಲಿರುವ ಸೆಲ್ಟೋಸ್‌ಗೆ ಹೋಲಿಸಿದರೆ ನೂತನ ಸೆಲ್ಟೋಸ್‌ನಲ್ಲಿ ಸಾಕಷ್ಟು ಹೊಸ ಫೀಚರ್‌ಗಳಿವೆ.
Advertisement
ನೂತನ ಕಿಯಾ ಸೆಲ್ಟೋಸ್‌ನಲ್ಲಿ ಗುರುತಿಸಬಹುದಾದ ಒಂದು ಪ್ರಮುಖ ಬದಲಾವಣೆಯೆಂದರೆ ಅದರ ವಿನ್ಯಾಸ ಮತ್ತು ಗಾತ್ರ. ಹೌದು ಭಾರತದಲ್ಲಿ ಮಾರಾಟವಾಗುವ ಸೆಲ್ಟೋಸ್‌ಗೆ ಹೋಲಿಸಿದರೆ ನೂತನ ಕಿಯಾ ಸೆಲ್ಟೋಸ್ ಉದ್ದ ಹೆಚ್ಚಾಗಿದ್ದು ಆದರೆ ಭಾರತದಲ್ಲಿರುವ ಸೆಲ್ಟೋಸ್‌ಗಿಂತ ನೂತನ ಕಿಯಾದ ಸೀಟುಗಳು ೨೦ಎಂಎಂನಷ್ಟು ಕಡಿಮೆಯಾಗಿದೆ. ನೂತನ ಸೆಲ್ಟೋಸ್ ಗ್ರಿಲ್‌ಗಳು ಮತ್ತು ಬಂಪರ್‌ಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದೆ.
ಇನ್ನು 2023ನೇ ಆವೃತ್ತಿಯನ್ನು ಮಾರುಕಟ್ಟೆಗೆ ಇಳಿಸಿ ಇದರಲ್ಲಿ ಕೆಲವೊಂದು ಅಪ್ಡೇಟ್ಗಳನ್ನು ಕೂಡ ಮಾಡಲಾಗಿದೆ. ಪ್ರಮುಖವಾಗಿ ಈ ಹಿಂದೆ ಇದ್ದ 1.4 ಲೀಟರ್ನ ಟರ್ಬೊ ಎಂಜಿನ್ ಅನ್ನು ಕೂಡ ಸಂಪೂರ್ಣವಾಗಿ ನಿಲ್ಲಿಸಿದೆ. ಜೊತೆಗೆ ಡಿಸಿಟಿ ಕ್ಲಚ್ ಕೂಡ ಇಲ್ಲ. ಇನ್ನು 2023ನೇ ಅವೃತ್ತಿಯ ಸೆಲ್ಟೋಸ್‌ನಲ್ಲಿ ಆರ್ಡಿಇ ಎಮಿಷನ್ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದ್ದು ಈ ಎಸ್‌ಯುವಿಯ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿ. ಹೌದು ಕಿಯಾ ಸೆಲ್ಟೋಸ್ ಈಗ 1.5 ಲೀಟರ್ನ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.5 ಲೀಟರ್ನ ಟರ್ಬೊ ಡೀಸೆಲ್ ಎಂಜಿನ್ನೊಂದಿಗೆ ಮಾರುಕಟ್ಟೆಗೆ ಇಳಿದಿದೆ. ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ 6 ಸ್ಪೀಡ್ನ ಮ್ಯಾನುಯಲ್ ಹಾಗೂ ಸಿವಿಟಿ ಆಯ್ಕೆಗಳಿವೆ. ಅದೇ ರೀತಿಯಾಗಿ 1.5 ಲೀಟರ್ನ ಡೀಸೆಲ್ ಎಂಜಿನ್ 6 ಸ್ಪೀಡ್ನ ಐಎಮ್ಟಿ ಗೇರ್ಬಾಕ್ಸ್ ಹೊಂದಿದೆ.
ಇನ್ನು ಅದೇ ರೀತಿಯಾಗಿ 6 ಸ್ಪೀಡ್ನ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ಕೂಡ ಹೊಂದಿದೆ. ಆದರೆ ಡೀಸೆಲ್ನಲ್ಲಿ ಕೊಡುತ್ತಿದ್ದ 6 ಸ್ಪೀಡ್ನ ಮ್ಯಾನುಯಲ್ ಆಯ್ಕೆಯನ್ನು ನಿಲ್ಲಿಸಲಾಗಿದೆ. ಇನ್ನು 2023ನೇ ಆವೃತ್ತಿಯಲ್ಲಿ ಹೊಸ 1.4 ಲೀಟರ್ನ ಪೆಟ್ರೋಲ್ ಟರ್ಬೊ ಎಂಜಿನ್ ನಿಲ್ಲಿಸಲಾಗಿದ್ದು 1. 5 ಲೀಟರ್ನ ಟರ್ಬೊ ಎಂಜಿನ್ ಬರುವುದಾಗಿ ಹೇಳಲಾಗುತ್ತಿದೆ. ಆದರೆ ಅದು ಸದ್ಯಕ್ಕೆ ಲಭ್ಯವಿಲ್ಲ. ಇನ್ನು ಹೊಸ ತಾಂತ್ರಿಕತೆಯ ಅಳವಡಿಕೆಯ ಪರಿಣಾಮವಾಗಿ ಕಾರಿನ ಬೆಲೆ 50 ಸಾವಿರ ರೂಪಾಯಿಯಷ್ಟು ಹೆಚ್ಚಳವಾಗಿದ್ದು ಕಾರಿನ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿಗಳಾಗಿದ್ದು ಟಾಪ್ ಎಂಡ್ ಕಾರಿನ ಬೆಲೆ 19.65 ಲಕ್ಷ ರೂಪಾಯಿಗಳಾಗಿದೆ. ಟಾಪ್ ಎಂಡ್ನಲ್ಲಿ ಎಕ್ಸ್-ಎನ್ಲೈನ್ ಡೀಸೆಲ್ ಆಟೋಮ್ಯಾಟಿಕ್ ತಾಂತ್ರಿಕತೆಯಿದೆ.
Advertisement