ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಾರುತಿ ಸುಜುಕಿ (Suzuki) ಇದೀಗ ಸಿಎನ್ ಜಿ ವೇರಿಯಂಟ್ ಇರುವ ಹೊಸ ಬ್ರೆಝಾ (Brezza) ಮಾರುಕಟ್ಟೆಗೆ ಶೀರ್ಘದಲ್ಲಿಯೇ ಬಿಡುಗಡೆ ಮಾಡಲಿದೆ. ಆದರೆ ಈ ವರ್ಷದ ಈ ಹೊಸ ಮಾಡೆಲ್ ಕಾರಿನ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಕೇವಲ 25,000 ರೂಪಾಯಿ ಟೋಕನ್ ನೀಡಿ ನೀವು ಈ ಕಾರನ್ನು ಬುಕ್ (Book) ಮಾಡಿಕೊಳ್ಳಬಹುದು. ಇನ್ನು ಕೇವಲ ಮೂರರಿಂದ ನಾಲ್ಕು ತಿಂಗಳಲ್ಲಿ ಹೊಸ ಬ್ರೆಝಾ ವಿಶೇಷ ಲುಕ್ ನೊಂದಿಗೆ ಮಾರುಕಟ್ಟೆಗೆ ಇಳಿಯಲಿದೆ.
ಮಾರುತಿ ಸುಜುಕಿ ಬ್ರೆಝಾ ಅತಿ ಹೆಚ್ಚು ಸೇಲ್ (Sale) ಕಂಡಿರುವ ಕಾರ್. ಹಾಗಾಗಿ ಇದರ ಸಿ ಏನ್ ಜಿ (CNG) ರೂಪಾಂತರ ಕೂಡ ಗ್ರಾಹಕರಿಗೆ ಇಷ್ಟವಾಗುತ್ತಿದೆ. ಇನ್ನು ಎಲ್ ಎಕ್ಸ್(LX), ಐ ವಿ ಎಕ್ಸ್ ಐ(IVXI), ಝೆಡ್ ಎಕ್ಸ್ ಐ (ZXI) ಹಾಗೂ ಝೆಡ್ ಎಕ್ಸ್ ಐ+ (ZXI+)ಈ ನಾಲ್ಕು ರೂಪಾಂತರಗಳಲ್ಲಿಯೂ ಕೂಡ ಸಿಎಂಜಿ ಆಯ್ಕೆ ಲಭ್ಯವಿದೆ. ಅಷ್ಟೇ ಅಲ್ಲದೆ ಆಟೋಮೆಟಿಕ್ ವರ್ಷನ್ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಎಸ್ ಯುವಿ ವಿತ್ ಸಿ ಎನ್ ಜಿ: ಇದೆ ಮೊದಲ ಬಾರಿಗೆ!
ಬ್ರೆಝಾ ಎಲ್ಲಾ ರೂಪಾಂತರಗಳಲ್ಲಿಯೂ ಆಟೋಮೆಟಿಕ್ ಟ್ರಾನ್ಸ್ ಮಿಷನ್ (Automatic Transmission) ಲಭ್ಯವಿದೆ ಆದರೆ ಬ್ರೆಝಾ ಎಲ್ಎಕ್ಸ್ಐಸಿ (Brezza lxi)ರೂಪಾಂತರದಲ್ಲಿ ಮಾತ್ರ ಇದನ್ನು ಅಳವಡಿಸಲಾಗಿಲ್ಲ. ಇದೇ ಮೊದಲ ಬಾರಿಗೆ ಗ್ರಾಹಕರು ಸಿ ಎನ್ ಜಿ ಜೊತೆಗೆ ಆಟೋಮೆಟಿಕ್ ಟ್ರಾನ್ಸ್ಮಿಷನ್ ಕೂಡ ಪಡೆಯಲಿದ್ದಾರೆ. ಅಷ್ಟೇ ಅಲ್ಲ ಸಿ ಎನ್ ಜಿ ಜೊತೆ ಎಸ್ ಯುವಿ ಕಾಂಪ್ಯಾಕ್ಟ್ (Compact suv ) ಕೂಡ ಬ್ರೆಝಾದಲ್ಲಿ ಇದೆ ಮೊದಲ ಬಾರಿಗೆ ಅಳವಡಿಸಲಾಗಿದ್ದು ಗ್ರಾಹಕರಿಗೆ ಲಭ್ಯವಾಗಲಿದೆ. 102hp ಮತ್ತು 130 ಎನ್ ಎಂ ಟಾರ್ಕ್ (Torque) ಉತ್ಪಾದಿಸುವ, ನಾಲ್ಕು ಸಿಲೆಂಡರ್ಗಳ 1.5 ಲೀಟರ್ ಎಂಜಿನ್ (4 cylinder 1.5 liter engine) ಅಳವಡಿಸಲಾಗಿದೆ. 5-ಸ್ಪೀಡ್ ಮ್ಯಾನುವಲ್ (Manual) ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ (Torque converter) ಅನ್ನು ಆಟೋಮೆಟಿಕ್ ಟ್ರಾನ್ಸ್ಮಿಷನ್ ನಲ್ಲಿ ಕಾಣಬಹುದು.
ಒಂದು ಕೆಜಿ ಸಿಎಂಜಿ: 20 ಕಿಲೋ ಮೀಟರ್ ಪ್ರಯಾಣ!
86 ಹೆಚ್ ಪಿ (HP) ಮತ್ತು 121ಎನ್ ಎಂ (NM) ಗರಿಷ್ಠ ಟಾರ್ಕ್ ಉತ್ಪಾದಿಸುವ ಸಿ ಎನ್ ಜಿ ಎಂಜಿನ್ ಹೊಂದಿರುವ ಬ್ರೆಝಾ ಮೈಲೇಜ್ ಬಗ್ಗೆ ಕಂಪನಿ ಇದುವರೆಗೂ ಸ್ಪಷ್ಟನೆ ನೀಡಿಲ್ಲ. ಒಂದು ಅಂದಾಜಿನ ಪ್ರಕಾರ 19.8 ಕಿಲೋಮೀಟರ್ ಗೆ ವ್ಯಾಪ್ತಿ ಕವರ್ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಬ್ರೆಝಾದ ಬೆಲೆ:
ಇನ್ನು ಸಿ ಏನ್ ಜಿ ವರ್ಷನ್ ಬ್ರೆಝಾ ಕಾರಿನ ಬೆಲೆ ನೋಡುವುದಾದರೆ, ಎಕ್ಸ್ ಶೋರೂಮ್ ನ ಆರಂಭಿಕ ಬೆಲೆ 7. 99 ಲಕ್ಷ ರೂಪಾಯಿಗಳು. ಟಾಪ್ ಎಂಡ್ ಮಾಡೆಲ್ ಬೆಲೆ 13.96 ಲಕ್ಷ ರೂಪಾಯಿಗಳು. ಸಿ ಎನ್ ಜಿ ಕಾರುಗಳ ಬೆಲೆ ಪ್ರೆಟ್ರೋಲ್ ಕಾರುಗಳಿಗಿಂತ ಹೆಚ್ಚಾಗಿರುತ್ತದೆ.