Karnataka Times
Trending Stories, Viral News, Gossips & Everything in Kannada

Electric Bike: ಸ್ಪ್ಲೆಂಡರ್-ಪ್ಲಾಟಿನಾಗೆ ಟಕ್ಕರ್ ಕೊಡಲು ಬಂತು ಹೊಸ ಎಲೆಕ್ಟ್ರಿಕ್ ಬೈಕ್, ಮೈಲೇಜ್ 300Km.

Advertisement

ವಾಹನಗಳನ್ನು ಖರೀಸಿ ಮಾಡುವುದಕ್ಕೆ ಜನ ಯೋಚನೆ ಮಾಡಬೇಕಾಗಿದೆ. ಯಾಕೆಂದರೆ ಡಿಸೇಲ್ ಪ್ರೆಟ್ರೋಲ್ ಬೆಲೆಯಂತೂ ಗಗನಕ್ಕೇರಿದೆ. ಜೊತೆಗೆ ಇನ್ನು ಮುಂದೆ ಇಂಧನಗಳ ಆಮದು ಕೂಡ ಇನ್ನಷ್ಟು ದುಬಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಬೈಕ್ ಅಥವಾ ಕಾರ್ ಗಳ ಮೈಲೇಜ್ ಸಾಮರ್ಥ್ಯವೂ ಗ್ರಾಹಕರ ಮನಸ್ಸುತಟ್ಟುತ್ತಿಲ್ಲ. ಇಂದು ಎಲೆಕ್ಟ್ರಿಕ್ ಮಾಹನಗಳನ್ನು ಜನ ಹೆಚ್ಚು ಕೊಂಡುಕೊಳ್ಳಲು ಬಯಸುತ್ತಿದ್ದಾರೆ.

ಪೆಟ್ರೋಲ್ ಬೆಲೆ ಏರುತ್ತಿದ್ದ ಹಾಗೆ ಜನರಲ್ಲಿ ಮೋಟರ್ ಸೈಕಲ್ ಮೇಲೆ ನಿರಾಶೆ ಕೂಡ ಹೆಚ್ಚಾಗಿದೆ. ಆದರೆ ಈಗ ಬೈಕರ್ ಗಳಿಕೆ ಸಮಾಧಾನ ನೀಡುವ Ultraviolette F77 ಬೈಕ್ ಬಿಡುಗಡೆಯಾಗಿದೆ. ಕಂಪನಿ ಇ-ಬೈಕ್ ವಿತರಣೆಯನ್ನು ಕೂಡ ಮಾಡುತ್ತಿದೆ. ಹೌದು, ಉತ್ತಮ ಕಾರ್ಯಕ್ಷಮತೆ ಹೊಂದಿರುವ ಸ್ಪೋರ್ಟ್ಸ್ ಇ- ಬೈಕ್ ಇದಾಗಿದ್ದ್, ಮೂರು ರೂಪಾಂತರಗಳಲ್ಲಿ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇ – ಬೈಕ್ ಖರೀದಿ ಮಾಡಿ ಕೇವಲ ಹತ್ತು ಸಾವಿರಕ್ಕೆ:

Advertisement

ಈ ಬೈಕ್ ಬೆಲೆ ಸಾಮಾನ್ಯ ಮೋಟಾರ್ ಬೈಕ್ ಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ಇದರ ಎಕ್ಸ್ ಶೋರೂಮ್ ಬೆಲೆ ನೋಡುವುದಾದರೆ 3.8 ಲಕ್ಷ ರೂಪಾಯಿಗಳು. ಆದರೆ ಈ ಎಂ ಐ ಮೂಲಕ ನೀವು ಸುಲಭವಾಗಿ F77 ಬೈಕ್ ಖರೀದಿ ಮಾಡಬಹುದು. ಬ್ಯಾಂಕ್ನಿಂದ ಇದಕ್ಕಾಗಿ ಸಾಲ ಪಡೆಯಬಹುದಾಗಿದೆ ಐದು ವರ್ಷಗಳ ಸಾಲವನ್ನು ತೆಗೆದುಕೊಂಡು, 9% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಅಂದ್ರೆ ನೀವು ತಿಂಗಳಿಗೆ ಕೇವಲ 10,000 ರೂಪಾಯಿಗಳ ಈ ಎಂ ಐ ಪಾವತಿಸಿದರೆ ಸಾಕು. ಇ- ಬೈಕ್ ನಿಮ್ಮದಾಗುತ್ತದೆ.

ವೈಶಿಷ್ಟತೆಗಳು:

ಎಫ್ 77 ಬೈಕ್ ಆಕರ್ಷಕ ಲುಕ್ ಹೊಂದಿದೆ. ಜೊತೆಗೆ ವಿಶೇಷ ಫೀಚರ್ ಗಳನ್ನು ಕೂಡ ಅಳವಡಿಸಿದೆ. ಎಲ್ಇಡಿ ಲೈಟಿಂಗ್, ಟಿ ಎಫ್ ಟಿ ಡಿಸ್ಪ್ಲೇ, ಮುಂಭಾಗದ ಆಕ್ಸೈಡ್ ಡೌನ್ ಸಸ್ಪೆನ್ಷನ್ ನ್ನು ಅಡ್ಜಸ್ಟ್ ಟೇಬಲ್ ಮೋನೋ ಶಾಕ್ ಜೊತೆಗೆ ಬರುತ್ತದೆ. ಈ ಬೈಕ್ ವೇಗ 130 ಕಿಲೋಮೀಟರ್ ಪ್ರತಿ ಗಂಟೆಗೆ ಚಲಿಸುತ್ತದೆ. ಬೆಂಗಳೂರು ಮೂಲದ ಈ ಮೋಟಾರ್ ಕಂಪನಿ Ultraviolette F77 ನಂತರ ಎಫ್ 99 ಮಾಡೆಲ್ ಕೂಡ ತಯಾರಿಸುವುದಕ್ಕೆ ಮುಂದಾಗಿದೆ. ದೇಶಾದ್ಯಂತ ಡೀಲರ್ ನೆಟ್ವರ್ಕ್ ಕೂಡ ಆರಂಭಿಸಿದ್ದು ಇನ್ನೂ ಮುಂದೆ ಬೈಕ್ ಖರೀದಿ ಮತ್ತು ಸೇವೆಗೆ ಸಂಬಂಧಿಸಿದ ಹಾಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಕಂಪನಿ ದೃಢಪಡಿಸಿದೆ.

Advertisement

Leave A Reply

Your email address will not be published.