Karnataka Times
Trending Stories, Viral News, Gossips & Everything in Kannada

Royal Enfield 650: ಹೊಸ ರೂಪದಲ್ಲಿ ಎಂಟ್ರಿ ಕೊಟ್ಟ ನೂತನ ರಾಯಲ್ ಎನ್‌ಫೀಲ್ಡ್ 650 ಬೈಕುಗಳು

ರಾಯಲ್ ಎನ್ ಫೀಲ್ಡ್ ಹಲವು ಭಾರತೀಯ ಬೈಕರ್ಸ್ ಗಳಿಗೆ ಕೇವಲ ಒಂದು ಬೈಕ್ ಅಲ್ಲ, ಅದೊಂದು ಭಾವನೆ. ಅಷ್ಟರಮಟ್ಟಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಪ್ರೀತಿಸುವವರಿದ್ದಾರೆ. ಇದು ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್ ಕೂಡ ಹೌದು. ರಾಯಲ್ ಎನ್ ಫೀಲ್ಡ್ ಇದೀಗ ತನ್ನ 650 ಅವಳಿ ಮಾದರಿಯನ್ನು ಹೊಸ ವರ್ಷಕ್ಕೆ ನವೀಕರಣ ಮಾದರಿಯಲ್ಲಿ ಬಿಡುಗಡೆ ಮಾಡಿದೆ. 650 ಅವಳಿ ಮಾದರಿಗಳಾದ Interceptor 650 ಹಾಗೂ Continental GT 650 ಹೊಸ ವೈಶಿಷ್ಟ್ಯತೆಗಳನ್ನು ಹೊಂದಿರುವುದು ಮಾತ್ರವಲ್ಲದೇ ವಿಶೇಷವಾದ ಹೊಸ ಬಣ್ಣಗಳಲ್ಲಿಯೂ ಕೂಡ ತಯಾರಾಗಿದೆ.

Interceptor 650 ಯಲ್ಲಿ ನಾಲ್ಕು ಹೊಸ ಬಣ್ಣಗಳು ಹಾಗೂ Continental GT 650 ಯಲ್ಲಿ ಎರಡು ಹೊಸ ಬಣ್ಣಗಳನ್ನು ಹೆಚ್ಚುವರಿಯಾಗಿ ನೀಡಲಾಗಿದ್ದು ರಾಯಲ್ ಎಲ್ ಫೀಲ್ಡ್ ಬೈಕರ್ಸ್ ಮನಸ್ಸಿನಲ್ಲಿ ರಂಗು ಮೂಡಿಸಲಿದೆ. ಮಾದರಿಯಲ್ಲಿ ಯು ಎಸ್ ಬಿ ಚಾರ್ಜಿಂಗ್ ಪೋರ್ಟ್, ಹೊಸ ಎಲ್ಇಡಿ ಹೆಡ್ ಲ್ಯಾಂಪ್, ಹೊಸ ಸ್ವಿಚ್ ಗೇರ್, ಅತ್ಯುತ್ತಮ ಸೀಟ್ಗಳು ಎಲ್ಲವೂ ಬೈಕ್ ಗಳ ಕೃಷಿಯನ್ನು ಹೆಚ್ಚಿಸಲಿದೆ.

Join WhatsApp
Google News
Join Telegram
Join Instagram

ರಾಯಲ್ ಎನ್ ಫೀಲ್ಡ್ ನ CEO B. Govindarajan 650 ಟ್ವಿನ್ ಮಾದರಿಯ ಹೊಸ ಬಣ್ಣಗಳ ಬಗ್ಗೆ ಮಾತನಾಡಿದ್ದು “Interceptor 650” ಹಾಗೂ Continental GT 650 ಎರಡು ಅವಳಿ ಬೈಕ್ ಗಳು ವಿಶ್ವದ್ಯಾಂತ ಸವಾರಿಗರ ಉತ್ಸಾಹವನ್ನು ಹೆಚ್ಚಿಸಿದೆ ಹಾಗೂ ಅವರ ಅಪಾರ ಪ್ರೀತಿಯನ್ನು ಗಳಿಸಿಕೊಂಡಿದೆ. ಇದೀಗ ಪೂರ್ಣ ಪ್ರಮಾಣದ ಹೊಸ ಬ್ಲಾಕ್ ವೆರಿಯಂಟ್ ಹಾಗೂ ಇತರ ಬಣ್ಣಗಳು ನಮ್ಮ ಗ್ರಾಹಕರ ರೈಡಿಂಗ್ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ. ಜೊತೆಗೆ ಹೊಸ ಆಧುನಿಕ ಫೀಚರ್ ಗಳು ರೈಡರ್ಸ್ ರೈಡಿಂಗ್ ಸಂತೋಷವನ್ನು ದುಪ್ಪಟ್ಟಾಗಿಸಲಿದೆ”ಎಂದು ಹೇಳಿದ್ದಾರೆ.

650 ಟ್ವಿನ್ ಬಣ್ಣಗಳು:

ಹೊಸ ಮಾದರಿಯ 650 ಟ್ವಿನ್ ಮಾದರಿ ಬೈಕ್ ಗಳು, ಈ ಬಾರಿ ಬ್ಲಾಕ್ ರೂಪಾಂತರಗಳನ್ನು ಪರಿಚಯಿಸಿದೆ. Interceptor 650 ಯಲ್ಲಿ ಬ್ಲಾಕ್ ರೇ ಮತ್ತು ಬಾರ್ಸಿಲೋನಾ ಬ್ಲೂ ಆಕರ್ಷಕ ಕಲರ್ ಆಗಿದ್ದರೆ, ಕಾಂಟಿನೆಂಟಲ್ ಜಿಟಿಯಲ್ಲಿ, ಸ್ಲಿಪ್ ಸ್ಟ್ರೀಮ್ ಬ್ಲೂ ಹಾಗೂ ಅಪೆಕ್ಸ್ ಗ್ರೇ ಬಣ್ಣಗಳು ಹೆಚ್ಚು ಆಕರ್ಷಕವಾಗಿದೆ. ಇನ್ನು ಈ ಎಲ್ಲ ಮಾದರಿಗಳಲ್ಲಿ ಗಳನ್ನು ಹೆಚ್ಚುವರಿಯಾಗಿ ನೀವು ಕಾಣಬಹುದು. ಜೊತೆಗೆ ಅಲಾಯಿ ವೀಲ್ಸ್, ಟ್ಯೂಬ್ ಲೆಸ್ ಟೈಯರ್ ಗಳನ್ನು ಕೂಡ ಈ ಬೈಕ್ ನಲ್ಲಿ ವಿಶೇಷವಾಗಿ ಅಳವಡಿಸಲಾಗಿದೆ.

ಇಂಟರ್ಸೆಪ್ಟರ್ ನಲ್ಲಿ ಈ ಹಿಂದೆ ವೆಂಚುರ್ ಬ್ಲೂ ಶೇಡ್ ಹೆಚ್ಚು ಫೇಮಸ್ ಆಗಿತ್ತು. ಇದರ ಬದಲಿಗೆ ಗ್ರಾಹಕರಿಗೆ ಎರಡು ಬಣ್ಣಗಳ ಹೊಸ ಆಯ್ಕೆ ನೀಡಲಾಗಿದ್ದು ಅವು ಬ್ಲಾಕ್ ಪರ್ಲ್ ಹಾಗೂ ಕ್ಯಾಲಿ ಗ್ರೀನ್ ಬಣ್ಣಗಳಾಗಿವೆ. ಇನ್ನು ಎಂಜಿನ್ ನಾವ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ಇಂಟರ್ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಎರಡರಲ್ಲಿಯೂ 674.95 ಸಿಸಿ ಎಂಜಿನ್ ಅಳವಡಿಸಲಾಗಿದೆ. ಜೊತೆಗೆ ಎರಡು ಸಿಲೆಂಡರ್ ಮಾದರಿಯನ್ನು ಇದರಲ್ಲಿ ಕಾಣಬಹುದು.

Leave A Reply

Your email address will not be published.