Karnataka Times
Trending Stories, Viral News, Gossips & Everything in Kannada

Budget Car: 7 ವರ್ಷದಲ್ಲಿ ಬರೋಬ್ಬರಿ 7 ಲಕ್ಷ ಸಂಖ್ಯೆಯಲ್ಲಿ ಮಾರಾಟವಾಗಿದೆ ಭಾರತದ ಈ ಕಾರು! ಕಡಿಮೆ ಬೆಲೆ, 5 ಸ್ಟಾರ್ ಸೇಫ್ಟಿ

advertisement

ಭಾರತದ ಬಹು ಪ್ರಸಿದ್ಧಿ ಕಾರ್ ತಯಾರಿಕಾ ಕಂಪನಿಗಳು ಇತರೆ ಐಷಾರಾಮಿ ಕಾರುಗಳನ್ನು ತಯಾರು ಮಾಡುತ್ತಾ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅದರಂತೆ ಕಳೆದ 7 ವರ್ಷಗಳ ಹಿಂದೆ ಬಂದಂತಹ ಈ ಬಹು ಪ್ರಸಿದ್ಧಿ ಕಾರು ಬ್ರೆಜಾ, ಸೆಲ್ಟಾಸ್ ಹಾಗೂ ಕ್ರೆಟಾದಂತಹ ಕಾರುಗಳಿಗೆ ನೇರ ಪೈಪೋಟಿ ನೀಡುತ್ತಾ, ಈವರೆಗೂ 7 ಲಕ್ಷ ಯೂನಿಟ್ಗಳಲ್ಲಿ ಟಾಟಾ ಕಂಪನಿಯ ಟಾಟಾ ನೆಕ್ಸಾನ್ (Tata Nexon) ಮಾರಾಟವಾಗಿದೆ. 2017ರಲ್ಲಿ ಲಾಂಚ್ ಆದಂತಹ ಕಾರ್ ಇದಾಗಿದ್ದು, ಏಳು ವರ್ಷಗಳ ಕಾಲಾವಧಿಯಲ್ಲಿ ತನ್ನ ಮೈಲುಗಲ್ಲನ್ನು ಮುಟ್ಟುವಲ್ಲಿ ನೆಕ್ಸಾನ್ ಯಶಸ್ವಿಯಾಗಿದೆ.

ಇತರೆ ಕಂಪನಿಯ ಕಾರುಗಳೊಂದಿಗೆ ನೇರ ಪೈಪೋಟಿ ನೀಡಿದ ಟಾಟಾ ನೆಕ್ಸಾನ್:

 

Image Source: CarWale

 

ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಮಾರಾಟವಾದ ಭಾರತೀಯ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ಟಾಟಾ ನೆಕ್ಸನ್ (Tata Nexon), ಮಾರುತಿ ಕಂಪನಿಯ ಬ್ರೆಜಾ (Brezza), ಹುಂಡೈ ಕ್ರೆಟಾ (Hyundai Creta), ಕಿಯಾ ಸೆಲ್ಟೋಸ್ (Kia Seltos) ಹಾಗೂ ಮಹಿಂದ್ರಾ ಸ್ಕಾರ್ಪಿಯೋ (Mahindra Scorpio) ದಂತಹ ಕಾರುಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದು, ಈ ಮೂಲಕ ಏಪ್ರಿಲ್ 2024 ಮತ್ತು ಮೇ 2024ರಲ್ಲಿ ಉತ್ತಮವಾಗಿ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಕಾರು 7 ಲಕ್ಷ ಯೂನಿಟ್ ಮಾರಾಟವಾಗುವ ಮೂಲಕ 11ನೇ ಸ್ಥಾನವನ್ನು ಅಲಂಕರಿಸಿದೆ.

Tata Nexon Features:

ಇಂಟರ್ನಲ್ ಕಂಬರ್ಷನ್ ಇಂಜಿನ್ (Internal Combustion Engine) ಮತ್ತು ಎಲೆಕ್ಟ್ರಿಕಲ್ ವೆಹಿಕಲ್ (Electric Vehicle) ಎಂಬ ಎರಡು ಇಂಜಿನ್ ಆಯ್ಕೆಯಲ್ಲಿ ಲಭ್ಯವಿರುವಂತಹ ಟಾಟಾ ನೆಕ್ಸಾನ್ (Tata Nexon) ತನ್ನ ಇಂಧನ ವ್ಯವಸ್ಥೆಯಿಂದಾಗಿ ಬಾರಿ ಸದ್ದು ಮಾಡಿದ ಕಾರು. ICE ಆಯ್ಕೆಯಲ್ಲಿ ಲಭ್ಯವಿರುವಂತಹ ಟಾಟಾ ನೆಕ್ಸಾನ್ 1.2 ಲೀಟರ್ ಟರ್ಬೊ ಪೆಟ್ರೋಲ್ ಇಂಜಿನ್ ಆಯ್ಕೆಯಲ್ಲಿ ಬರಲಿದ್ದು, ಇದು 120 PS ಶಕ್ತಿ ಹಾಗೂ 170 Nm ಟಾರ್ಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

advertisement

ಜೊತೆಗೆ ಪೆಟ್ರೋಲ್ ಇಂಜಿನ್ ಆಯ್ಕೆಯ ಈ ವಾಹನವು ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್, 6-ಸ್ಪೀಡ್ ಆಟೋಮೆಟಿಕ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಹಾಗೂ 7 ಸ್ಪೀಡ್ DCA ಮೂಲಕ ಚಾಲಿತಗೊಳಲಿದೆ. ಅದರಂತೆ ಡೀಸೆಲ್ ಮೋಟಾರ್ ಅಳವಡಿಕೆಯ ಕಾರಿನಲ್ಲಿ 6 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಹಾಗೂ 6 ಸ್ಪೀಡ್ ಆಟೋಮೆಟಿಕ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಆಯ್ಕೆಗಳಿದೆ.

Tata Nexon EV Features:

 

Image Source: Tata Motors

 

40.5kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಬರಲಿರುವ Tata Nexon EV ಗಾಡಿಯಲ್ಲಿ ಮೀಡಿಯಂ ರೇಂಜ್ ಹಾಗೂ ಲಾಂಗ್ ರೇಂಜ್ ಎಂಬ ಎರಡು ಆಯ್ಕೆಗಳಿದ್ದು, ಮೀಡಿಯಂ ರೇಂಜಿನ ವಾಹನವು 129ps ಶಕ್ತಿ ಹಾಗೂ 215 Nm ಟಾರ್ಕನ್ನು ಉತ್ಪಾದಿಸಿ 325 km ಮೈಲೇಜ್ ನೀಡುತ್ತದೆ ಹಾಗೂ ಲಾಂಗ್ ರೇಂಜ್ ವಾಹನವು 145 Ps ಶಕ್ತಿ ಹಾಗೂ 215 nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಬರೋಬ್ಬರಿ 465 km ಮೈಲೇಜ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿದೆ.

Tata Nexon Price:

8 ಲಕ್ಷದಿಂದ 15.80 ಲಕ್ಷದ ಎಕ್ಸ್ ಶೋರೂಮ್ ಬೆಲೆಗೆ Tata Nexon ಇಂಟರ್ನಲ್ ಕಂಬರ್ಷನ್ ಇಂಜಿನ್ ವಾಹನ ದೊರಕಲಿದೆ. ಹಾಗೂ ಇದರ ಎಲೆಕ್ಟ್ರಿಕ್ ವರ್ಷನ್ 14.49 – 19.49 ಲಕ್ಷ ಎಕ್ಸ್ ಶೋರೂಮ್ ಬೆಲೆಗೆ ಲಭ್ಯವಿದೆ.

ಸಾಕಷ್ಟು ಆಧುನಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಟಾಟಾ ನೆಕ್ಸಾನ್ (Tata Nexon) ಎಸ್ಯುವಿಗೆ ಮನಸೋತಂತಹ ಗ್ರಾಹಕರು ಖರೀದಿ ಮಾಡಲು ಮುಗಿಬಿದ್ದಿದ್ದಾರೆ ಎಂದರೆ ತಪ್ಪಾಗಲಾರದು. ಈ ಕಾರಣದಿಂದಾಗಿ ಕೇವಲ ಏಳು ವರ್ಷಗಳಲ್ಲಿ ಟಾಟಾ ನೆಕ್ಸಾನ್ 7 ಲಕ್ಷ ಯೂನಿಟ್ಗಳಲ್ಲಿ ಮಾರಾಟವಾಗಿದೆ.

advertisement

Leave A Reply

Your email address will not be published.