Tata Car: ಗಣೇಶ ಹಬ್ಬಕ್ಕೆ ಸಿಹಿಸುದ್ದಿ! ಟಾಟಾದ ಈ ಕಡಿಮೆ ಬೆಲೆಯ ಕಾರಿನ ಎಂಟ್ರಿ ಗ್ಯಾರಂಟಿ, ಬಡವರ ರೇಂಜ್ ರೋವರ್
ಈಗಾಗಲೇ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ದೃಢವಾಗಿ ನಿಂತಿರುವಂತಹ ಟಾಟಾ ಮೋಟಾರ್ಸ್ ಕಂಪನಿ ಬೇರೆ ಬೇರೆ ಸೆಗ್ಮೆಂಟ್ ನಲ್ಲಿ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸುವ ಕೆಲಸವನ್ನು ಮಾಡುತ್ತಿದೆ. ಸದ್ಯಕ್ಕೆ ಕೇಳಿ ಬರುತ್ತಿರುವ ಮಾಹಿತಿ ಟಾಟಾ ನೆಕ್ಸನ್ (Tata Nexon) ಪ್ಲಾಟ್ ಫಾರ್ಮ್ ಆಧಾರಿತ ಹೊಸ ಕಾರೊಂದು ಮಾರುಕಟ್ಟೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.
ನಾವು ಮಾತನಾಡುತ್ತಿರುವುದು ಟಾಟಾ (Tata) ಸಂಸ್ಥೆಯ ಹೊಸ ಕಾರು ಆಗಿರುವಂತಹ Tata Blackbird ಬಗ್ಗೆ. ಇದು ಲಾಂಚ್ ಆಗುವಂತಹ ಮಾತುಕತೆಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಟಾಟಾ ನೆಕ್ಸನ್ ಕಾರ್ (Tata Nexon Car) ನ ಕೂಪ್ ಡಿಸೈನ್ ನಲ್ಲಿ ಈ ಕಾರು ಮೂಡಿ ಬರಲಿದೆ ಎನ್ನುವ ಮಾಹಿತಿ ಸಿಕ್ಕಿದ್ದು 2018 ರಿಂದಲೂ ಕೂಡ ಈ ಕಾಡು ಬಿಡುಗಡೆಯಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. Tata Blackbird ಕಾರಿನ ಉದ್ದ 4.3 ಮೀಟರ್ ಆಗಿರಲಿದೆ ಎಂಬುದಾಗಿ ತಿಳಿದು ಬಂದಿದೆ. Tata Blackbird ಕಾರು ಪಾಸ್ಟ್ ಬ್ಯಾಕ್ ಡಿಸೈನ್ ನಲ್ಲಿ ಈ ಬಾರಿ ಮೂಡಿ ಬರಲಿದೆ.
ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಫ್ರೆಂಟ್ ಏರ್ ಬ್ಯಾಗ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ವಾಹನದ ಸ್ಟೆಬಿಲಿಟಿ ಮ್ಯಾನೇಜರ್ ಹಾಗೂ ಸ್ಟೆಬಿಲಿಟಿ ಕಂಟ್ರೋಲ್ ಗಳಂತಹ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ. Tata Blackbird ಇಂಜಿನ್ ವಿಚಾರಕ್ಕೆ ಬಂದ್ರೆ ಮೂರು ಆಯ್ಕೆಗಳು ನಿಮಗೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಕಂಪನಿಯ ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ.
ಮೊದಲನೆಯದಾಗಿ 1.5 ಲೀಟರ್ MPI ಪೆಟ್ರೋಲ್ ಇಂಜಿನ್ 113Bhp ಪವರ್ ಹಾಗೂ 143.8Nm ಟಾರ್ಕ್. 1.5 ಲೀಟರ್ U2 CRDi ಡೀಸೆಲ್ ಇಂಜಿನ್ 113Hp ಪವರ್ ಹಾಗೂ 250Nm ಟಾರ್ಕ್. 1.4 ಲೀಟರ್ ಕಪ್ಪಾ ಟರ್ಬೋ GDI ಪೆಟ್ರೋಲ್ ಇಂಜಿನ್ 138Hp ಪವರ್ ಅನ್ನು ಜನರೇಟ್ ಮಾಡುತ್ತದೆ. ಈ ಕಾರುಗಳ ಇಂಜಿನ್ ಗಳು ನಿಮಗೆ ಮ್ಯಾನ್ ವಾಲ್ ಹಾಗೂ ಆಟೋಮೆಟಿಕ್ ಎರಡು ಟ್ರಾನ್ಸ್ಮಿಷನ್ ಗಳನ್ನು ಕೂಡ ನೀಡುತ್ತದೆ. ಆರಂಭಿಕ ಬೆಲೆ 15 ಲಕ್ಷ ಎನ್ನಲಾಗಿದೆ.