ಮಾರುಕಟ್ಟೆಗೆ ಹೊಸ ಹೊಸ ರೀತಿಯ ಕಾರುಗಳು ಬರುತ್ತಿದ್ದ ಹಾಗೆ ಅದರ ವಿನ್ಯಾಸ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳಲು ಜನರಿಗೆ ಕುತೂಹಲ ಇದ್ದೇ ಇರುತ್ತೆ. ಜೊತೆಗೆ ಇಂತಹ ಕಾರ್ ಗಳನ್ನೇ ಖರೀದಿ ಮಾಡಲು ಕೂಡ ಮುಂದಾಗುತ್ತಾರೆ. ನಿಮ್ಮ ಬಳಿ 25 ಲಕ್ಷ ರೂಪಾಯಿಗಳ ಬಜೆಟ್ ಇದ್ರೆ ಈ ಸುಧಾರಿತ ವೈಶಿಷ್ಟ್ಯ ಹೊಂದಿರುವ ಬೆಸ್ಟ್ ಕಾರ್ ನಿಮಗಾಗಿ.
Hyundai Tucson:
ಹ್ಯುಂಡೈ SUV ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಯಾಕೆಂದರೆ ಇದರಲ್ಲಿ ಇರುವ ವೈಶಿಷ್ಟ್ಯತೆಗಳು ನಿಮ್ಮ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕವಾಗಿ ಆಗುವಂತೆ ಮಾಡುತ್ತವೆ. ಮೊದಲನೆಯದಾಗಿ ಈ ಕಾರಿನಲ್ಲಿ 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಇದೆ. ಆಂಡ್ರಾಯ್ಡ್ ಆಟೋ (Android Auto) ಮತ್ತು ಆಪಲ್ ಕಾರ್ ಪ್ಲೇ (Apple Car Play), ಬ್ಲೂಲಿಂಕ್ ಸಂಪರ್ಕಿತ ವೈಶಿಷ್ಟ್ಯಗಳು ಕೂಡ ಅಳವಡಿಸಲಾಗಿದೆ. ಸೌಂಡ್ ಸಿಸ್ಟಮ್ ಕೂಡ ವಿನೂತನವಾಗಿದೆ. ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ ಪನೋರಮಿಕ್ ಸನ್‌ರೂಫ್ ಕುಟುಂಬದ ಜೊತೆಗೆ ಪ್ರಯಾಣ ಹೋಗುವುದರ ಖುಷಿಯನ್ನು ಹೆಚ್ಚಿಸುತ್ತವೆ.
ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ಮಳೆ-ಸೆಸ್ನಾರ್ ವೈಪರ್‌ಗಳು, ಗ್ಲೋವ್‌ಬಾಕ್ಸ್ ಹಾಗೂ ಎಲೆಕ್ಟ್ರಿಕ್ ಬೆಂಬಲಿತ ಎದುರಿನ ಸೀಟ್ ಗಳು ಹೀಗೆ 60ಕ್ಕೂ ಹೆಚ್ಚು ವೈಶಿಷ್ಟ್ಯಗಳಿವೆ ಅಂದ್ರೆ ನಿಮಗೂ ಆಶ್ಚರ್ಯವಾಗಬಹುದು. ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ, ಆರು ಏರ್‌ಬ್ಯಾಗ್ ಗಳಿವೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ ಇದೆ. ಹಿಲ್ ಸ್ಟಾರ್ಟ್ ಅಸಿಸ್ಟ್, ಡೌನ್‌ಹಿಲ್ ಬ್ರೇಕ್ ಕಂಟ್ರೋಲ್ ಚಾಲಕರಿಗೆ ಇನ್ನಷ್ಟು ಸುರಕ್ಷತೆ ನೀಡುತ್ತವೆ. ಜೊತೆಗೆ ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಫ್ಯಾಮಿಲಿ ಟ್ರಿಪ್ ಅನ್ನು ನಿರಾಳವಾಗಿಸುತ್ತವೆ.
Hyundai Kona Electric:
ಇದು ಎಲೆಕ್ಟ್ರಿಕ್ ಎಸ್ ಯು (Electric SUV) ವಿಆಗಿದ್ದು ಇಕೋ ಕಂಫರ್ಟ್ ಗೆ ಹೆಚ್ಚು ಮಹತ್ವ ನೀಡಲಾಗಿದೆ. ಸಿಂಗಲ್-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಇನ್ನು ನಾಲ್ಕು ಡ್ರವಿಂಗ್ ಮೋಡ್ ನಲ್ಲಿ ಇವಿ ಕಾರ್ ಲಭ್ಯವಿದೆ. ಅವುಗಳೆಂದರೆ, ಇಕೋ, ಇಕೋ+, ಕಂಫರ್ಟ್ ಮತ್ತು ಸ್ಪೋರ್ಟ್. ಸುರಕ್ಷತೆಗಾಗಿ ಸಾಮಾನ್ಯವಾಗಿ ಬಿಗ್ ಬಜೆಟ್ ಎಸ್ ಯು ವಿ ಗಳಲ್ಲಿ ಇರುವಂತೆ ಇದರಲ್ಲಿಯೂ ಆರು ಏರ್ ಬ್ಯಾಗ್ ಗಳು ಇವೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಡೌನ್‌ಹಿಲ್ ಬ್ರೇಕ್ ಕಂಟ್ರೋಲ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಇವಿಷ್ಟು ಈ ಕಾರಿನಲ್ಲಿ ಅಳವಡಿಸಲಾದ ವೈಶಿಷ್ಟ್ಯತೆಗಳು. ಇನ್ನು ಈ ಕಾರಿನ ನಾಲ್ಕೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಇವೆ.
Jeep Compass:
ಕಂಪಾಸ್ ಕಾರಿನ ಬಗ್ಗೆ ಮಾತನಾಡುವುದಾದರೆ, ಇದು ಇನ್ನೂ ಹೈ ಎಂಡ್ ಕಾರ್ ಆಗಿದ್ದು, ಸಾಕಷ್ಟು ಆರಾಮದಾಯಕ ಪ್ರಯಾಣ ನೀಡುತ್ತದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಆಕರ್ಷಕವಾಗಿಯೂ ಇವೆ. ಇಬಿಡಿ ಹೊಂದಿಕೊಂಡು ಎಬಿಎಸ್ ಹಾಗೂ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಇಎಸ್ ಸಿ ಲಭ್ಯವಿದೆ. ಹಿಲ್ ಅಸಿಸ್ಟ್ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮೊದಲಾದ ವೈಶಿಷ್ಟ್ಯತೆಗಳೂ ಇದರಲ್ಲಿವೆ.
Toyota Innova Crysta:
ಇದಂತೂ ಭಾರತದಲ್ಲಿ ಅತೀಹೆಚ್ಚು ಮಾರಾಟ ಕಂಡ ಕಾರ್ ಗಳಲ್ಲಿ ಒಂದು. ಇದರ ವೈಶಿಷ್ಟ್ಯತೆಗಳನ್ನು ನೋಡುವುದಾದರೆ ಸುರಕ್ಷತೆಗಾಗಿ 7 ಏರ್ ಬ್ಯಾಗ್ ಗಳು ಇವೆ. ಚೈಲ್ಡ್ ಲಾಕ್, ಸ್ಟ್ ಬೆಲ್ಟ್ ರಿಮೈಂಡರ್ ಕಂಟ್ರೋಲ್ ಹೆಚ್ಚು ಸುರಕ್ಷತೆಯನ್ನು ಒದಗಿಸುತ್ತವೆ. ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಇದೆ ಹಾಗೇನೇ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಇದಲ್ಲದೇ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಈ ಕಾರಿನಲ್ಲಿದೆ. ಇಬಿಡಿ, ಎಬಿಎಸ್, ಹೆಚ್ ಎಸ್ ಎ, ವಿ ಎಸ್ ಸಿ, ಸ್ಪೀಡ್-ಅಲರ್ಟ್ ಸಿಸ್ಟಮ್ ಕೂಡ ಕಾರಿನಲ್ಲಿ ಲಭ್ಯವಿವೆ.