ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳ ಬೇಡಿಕೆಯನ್ನು ಪೂರೈಸುವುದಕ್ಕೆ ಈ ವರ್ಷ ಹೊಸದಾಗಿ Kick EV Smassh ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಿದ್ದು, ಗ್ರಾಹಕರಿಗೆ ಉತ್ತಮ ಮೈಲೇಜ್ ಜೊತೆಗೆ ಒಳ್ಳೆಯ ಸ್ಪೀಡ್ ಅನ್ನು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತಿದೆ. ನೀವು ಕೂಡ ಖರೀದಿಸುವಂತಹ ಮನಸ್ಸು ಮಾಡ್ತಾ ಇದ್ರೆ ಈ ಸ್ಕೂಟರ್ ನಲ್ಲಿ ಏನೆಲ್ಲಾ ಇದೆ ಹಾಗೂ ಇದರ ಬೆಲೆ ಎಷ್ಟು ಎನ್ನುವಂತಹ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ.
Kick EV Smassh ಎಲೆಕ್ಟ್ರಿಕ್ ಸ್ಕೂಟರ್!
ಕಂಪನಿ Kick EV Smassh Electric Scooter ನಲ್ಲಿ 3.6 ಕಿಲೋ ವ್ಯಾಟ್ ಲೀಥಿಯಂ ಅಯಾನ್ ಬ್ಯಾಟರಿಯನ್ನ ಅಳವಡಿಸಿದೆ. ಈ ಮೂಲಕ 180 ಕಿಲೋಮೀಟರ್ಗಳ ಲಾಂಗ್ ರೇಂಜ್ ಅನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುವುದಕ್ಕೆ ಸಾಧ್ಯವಾಗುತ್ತಿದೆ. 5,000 ವ್ಯಾಟ್ಗಳ ಪವರ್ ಫುಲ್ ಮೋಟರ್ ಅನ್ನು ಕೂಡ ಇದರಲ್ಲಿ ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ.
ಭಾರತದ ಯಾವುದೇ ರೀತಿಯ ರಸ್ತೆಗಳ ಮೇಲೆ ಕೂಡ ಇದು ಸಲೀಸಾಗಿ ಓಡಾಡಲಿದೆ. ಗಂಟೆಗೆ ಸಲೀಸಾಗಿ 76 ಕಿಲೋಮೀಟರ್ ಟಾಪ್ ವೇಗದಲ್ಲಿ ಓಡುವಂತಹ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ. ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ಕೂಡ ನೀವು ಈ ಸ್ಕೂಟರ್ ನಲ್ಲಿ ಬೇರೆ ಎಲೆಕ್ಟ್ರಿಕ್ ಸ್ಕೂಟರ್ ಗೆ ಹೋಲಿಸಿದರೆ ಕಾಣಬಹುದಾಗಿದೆ. ಡಿಸ್ಕ್ ಬ್ರೇಕ್ ಕಾಂಬಿನೇಷನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಡಿಸೈನಿಂಗ್ ಅನ್ನು ಕೂಡ ಸಾಕಷ್ಟು ಸ್ಟೈಲಿಶ್ ಆಗಿ ಮಾಡಲಾಗಿದೆ.
ಗ್ರಾಹಕರ ಭರವಸೆಗಾಗಿ ಐದು ವರ್ಷಗಳ ವಾರಂಟಿಯನ್ನು ಕೂಡ ಸಂಸ್ಥೆ ನೀಡುತ್ತಿದೆ. ಆ ರೀತಿ ನೋಡೋದಕ್ಕೆ ಹೋದರೆ ಐದು ವರ್ಷಗಳ ವಾರಂಟಿಯನ್ನು ಬೇರೆ ಯಾವುದೇ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ನೀಡಿರುವುದು ಅನುಮಾನವೇ ಸರಿ. ಇನ್ನು ಈ Kick EV Smassh ಎಲೆಕ್ಟ್ರಿಕ್ ಸ್ಕೂಟರ್ನ (Electric Scooter) ಬೆಲೆಯ ಬಗ್ಗೆ ಮಾತನಾಡುವುದಾದರೆ 3 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಂಡು ಬರುತ್ತೆ. ಪಕ್ಕ ಪ್ರೀಮಿಯಂ ಕ್ವಾಲಿಟಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋದನ್ನ ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.