7 Seater Cars: 15 ಲಕ್ಷ ರೂಪಾಯಿ ಒಳಗೆ ದೊರೆಯುವ ಬೆಸ್ಟ್ 7 ಸೀಟ್ಕಾರುಗಳು ಇಲ್ಲಿವೆ.

Advertisement
ಬಹುತೇಕರ ಜೀವನದ ಒಂದು ಸಾಧನೆಯ ಕನಸ್ಸು ಎಂದರೆ ಅದು ಮನೆ, ವಾಹನ ಇತ್ಯಾದಿ ಖರೀದಿ ಮಾಡುವುದು ಎಲ್ಲರ ಕನಸಿಗಿರುತ್ತದೆ. ಅದೇ ರೀತಿ ಇಂದು ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ ಅದರ ನವನವೀನತೆಯ ಖರೀದಿದಾರರು ಸಹ ಹೆಚ್ಚಾಗಿದ್ದಾರೆ. ಇದೀಗ ಅಂತಹ ಆಕರ್ಷಕ ಕಾರು ಉತ್ತಮ ಗುಣವೈಸಿಷ್ಟ್ಯತೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಬಹುತೇಕ ಮಾಡೆಲ್‌ಗಳಲ್ಲಿ ಏಳು ಸೀಟುನ ಕಾರು (7 Seater Car) ಕೂಡ ಒಂದು, ಲಕ್ಸುರಿ ಬಟನ್‌ಗಳ ಮೂಲಕವೇ ಸೀಟು ಅಡ್ಜಸ್ಟ್ ಕೂಡ ಮಾಡಿಕೊಳ್ಳಬಹುದು.
ಕುಟುಂಬ ಸಮೇತ ಎಲ್ಲಾದರೂ ಹೋಗಬೇಕಾದರೆ ಏಳು ಆಸನಗಳಿರುವ ಕಾರು ಅನುಕೂಲಕರವಾಗುತ್ತದೆ. ಹೀಗೆ ಇಡೀ ಕುಟುಂಬವು ಅತ್ಯಂತ ಸುಲಭವಾಗಿ ಪ್ರಯಾಣಿಸಬಹುದು, ಅದೇ ರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಕಾರಿನ ಮಾರಾಟ ಅಧಿಕವಾಗೆ ಆಗುತ್ತಿದೆ. ಕಾರು ಖರೀದಿಸುವಾಗ
ನಿಮಗೆ ಎಷ್ಟು ಸೀಟಿನ ಕಾರು ಖರೀದಿಸಬೇಕು ಎಂಬ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬಂದು ಐದು, ಆರು ಅಥವಾ ಏಳು ಸೀಟಿನ ಕಾರಿನಲ್ಲಿ ಯಾವುದು ನಿಮ್ಮ ಅಗತ್ಯ ಎಂಬುದನ್ನು ತೀರ್ಮಾನಿಸಿ ಆಯ್ಕೆ ಮಾಡಿಕೊಳ್ಳುತ್ತೀರಿ. ಅದೇ ರೀತಿ ಕಡಿಮೆ ಬೆಲೆಗೆ 7 ಸೀಟುಗಳ ಕಾರು ಇದೀಗ ಲಭ್ಯ ವಿದೆ.
ಯಾವೆಲ್ಲ ಕಾರು:
Honda CR-V:
ಹೋಂಡಾ CR-V ಕಾರು ಅತ್ಯುತ್ತಮ ಆಯ್ಕೆಯಾಗಿದ್ದು , ಕಾರು ಒಳಗೆ ಮತ್ತು ಹೊರಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ, ಇದು ಲಾಂಗ್ ಡ್ರೈವ್‌ಗಳಿಗೆ ಸೂಕ್ತವಾಗಿದ್ದು 7ಸೀಟಿನ ಕಾರು (7 Seater Car) ಆಗಿದೆ. ಜೊತೆಗೆ, ಇದು ಉತ್ತಮ ಇಂಧನ ದಕ್ಷತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ಶ್ರೇಣಿಯನ್ನು ನೀಡುತ್ತದೆ.
Mahindra Bolero:
ಮಹೀಂದ್ರಾ ಬೊಲೆರೊ ಕಾರು ಕೂಡ ಕಡಿಮೆ ಬೆಲೆಗೆ ದೊರೆಯುವ ಎಸ್ಯುವಿ ಏಳು ಸೀಟಿನ ಕಾರು ಮಧ್ಯಮ ವರ್ಗದವರಿಗೂ ಸುಲಭವಾಗಿ ಖರೀದಿ ಮಾಡಬಹುದು. ಇದರ ಆರಂಭಿಕ ಬೆಲೆ 9.63 ಲಕ್ಷ ರೂಪಾಯಿ. ಇದರಲ್ಲಿ ಲ್ಯಾಡರ್ ಫ್ರೇಮ್ ಹಾಗೂ ಆರ್ಡಬ್ಲ್ಯುಡಿ ಕಾನ್ಫಿಗರೇಷನ್ ಕೂಡ ಇರುತ್ತದೆ.
Toyota Innova Crysta:
ಟೊಯೊಟಾ ಇನ್ನೋವಾ ಕ್ರಿಸ್ಟಾದ ಭಾರತದಲ್ಲಿ 7 ಆಸನಗಳ ಕಾರುಗಳ ಪಟ್ಟಿಯಲ್ಲಿ ಇದು ಕೂಡ ಒಂದು, ಇದರ ಬೆಲೆ ರೂ. 11 ಲಕ್ಷ ಆಗಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ.
Mahindra Scorpio Classic:
ಮಹೀಂದ್ರಾದ ಜನಪ್ರಿಯ ಕಾರು ಸ್ಕಾರ್ಪಿಯೊ ಕ್ಲಾಸಿಕ್ನ ಆರಂಭಿಕ ಬೆಲೆ 12.64 ಲಕ್ಷ ರೂಪಾಯಿ ಆಗಿದ್ದು ಏಳು ಸೀಟಿನ ಕಾರು ಇದಾಗಿದೆ, ಎಸ್ ಹಾಗೂ ಎಸ್11 ಎಂಬ ಎರಡು ಆವೃತ್ತಿಯಲ್ಲಿ ಲಭ್ಯವಿದ್ದು ಇದರಲ್ಲಿ 2.2 ಲೀಟರ್ನ ಡೀಸೆಲ್ ಎಂಜಿನ್ ಇದ್ದು 132 ಪಿಎಸ್ ಪವರ್ ಬಿಡುಗಡೆ ಮಾಡುತ್ತದೆ.