Electric Car: 10 ಲಕ್ಷ ರೂಪಾಯಿಗಳಿಗೆ 300 ಕಿಲೋಮೀಟರ್ ಚಲಿಸಬಲ್ಲ ಎಲೆಕ್ಟ್ರಿಕ್ ಕಾರ್!

Advertisement
ಇಂದು ದೇಶದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ (Electric Vehicles) ವಾಹನಗಳ ಬೇಡಿಕೆ ಹೆಚ್ಚಿದ್ದು ಅಲ್ಲದೆ ಕಂಪನಿಗಳ ನಡುವೆ ಪೈಪೋಟಿ ಕೂಡ ಶುರುವಾಗಿದೆ ಯಾಕೆಂದರೆ ಗ್ರಾಹಕರಿಗೆ ಅನುಕೂಲವಾಗುವಂತಹ ಬಹಳ ವಿಭಿನ್ನವಾದ ಎಲೆಕ್ಟ್ರಿಕ್ ವಾಹನಗಳನ್ನು ಮೋಟಾರ್ ಕಂಪನಿಗಳು ತಯಾರಿಸುತ್ತಿವೆ. ಈಗ ಮತ್ತೊಂದು ವಾಹನ ತಯಾರಿಕಾ ಸಂಸ್ಥೆಯಾಗಿರುವ ಎಂಜಿ ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆ ಮಾಡಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಎಲೆಕ್ಟ್ರಾನಿಕ್ ವಾಹನಗಳಿಗೆ ಸಡ್ಡು ಹೊಡೆದು ಬಿಡುಗಡೆಗೆ ಸಿದ್ಧವಾಗಿರುವ ಈ ಎಲೆಕ್ಟ್ರಾನಿಕ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ ಮೊದಲನೇದಾಗಿ 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ 300 ಕಿಮೀ ಚಲಿಸಬಹುದಾದ ಇವಿ ಕಾರ್ (EV car) ಇದಾಗಿದೆ. ಎಂ ಜಿ ಕಾಮೆಟ್ ಇವಿ ಕಾರಣ ಇನ್ನಷ್ಟು ವೈಶಿಷ್ಟತೆಗಳ ಬಗ್ಗೆ ನೋಡುವುದಾದರೆ.
ಎಂಜಿ ಕಾಮೆಟ್ ಇವಿ ಕಾರ್ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೇವಲ 10 ಲಕ್ಷ ರು. ಗಳ ಕಾರ್ 300ಕಿಮಿ. ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯ ಹೊಂದಿದೆ. ಇದನ್ನು ವೂಲಿಂಗ್ ಏರ್ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಕಾರು ಭಾರತದಲ್ಲಿ ಬಿಡುಗಡೆಯಾದರೆ ಈಗ ಇರುವ ಕಾರುಗಳಿಗಿಂತಲೂ ಕಡಿಮೆ ಬೆಲೆಗೆ ಸಿಗುವ ಕಾರ್ ಇದಾಗಲಿದೆ. ಯಾಕೆಂದರೆ ಸಾಮಾನ್ಯವಾಗಿ ಇವಿ ಕಾರ್ ಗಳ ಬೆಲೆ ಜಾಸ್ತಿ ಇರುತ್ತೆ. ಆದರೆ ಎಂಜಿ ಕಾಮೆಟ್ ಈವಿ ಬೆಲೆ 10 ಲಕ್ಷ ರೂಪಾಯಿಗಳು ಮಾತ್ರ.
ಎಂಜಿ ಕಾಮೆಟ್ ಇವಿ ವೈಶಿಷ್ಟ್ಯತೆಗಳು:
ಎಂ ಜಿ ಕಾಮೆಟ್(MG Comet) ಇವಿ ಇತ್ತೀಚಿಗೆ ಫೋಟೋಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋಗಳ ಆಧಾರದ ಮೇಲೆ ಹೇಳುವುದಾದರೆ ಎಂಜಿ ಬ್ರಾಂಡಿಂಗ್ ಹೊರಭಾಗದಲ್ಲಿ ನೀಡಲಾಗಿದ್ದು ಚಾರ್ಜಿಂಗ್ ಪೋರ್ಟ್ ಒಳಭಾಗದಲ್ಲಿ ಫಿಕ್ಸ್ ಮಾಡಲಾಗಿದೆ. ಇನ್ನು ಡ್ಯೂಯಲ್ ಟೋನ್ ಲಂಬವಾಗಿ ಜೋಡಿಸಲಾದ ಹೆಡ್ ಲ್ಯಾಂಪ್ ಮೊದಲಾದವು ಆಕರ್ಷಕವಾಗಿಯೂ ಇವೆ. ಎಲ್ಇಡಿ ಲೈಟ್ (LED Light) ವಿಂಡ್ ಸ್ಕ್ರೀನ್(Windscreen), ಕ್ರೋಮ್ ಸ್ಟ್ರಿಪ್ (Chrome Strip) ಓಆರ್ ವಿಎಂ (Orvm) ಹಿಂಭಾಗದಲ್ಲಿ ಕ್ವಾರ್ಟರ್ ಗ್ಲಾಸ್ (Quarter Glass) ಅಳವಡಿಸಲಾಗಿದೆ.
ಬ್ಯಾಟರಿ ಮತ್ತು ಮೋಟಾರ್:
ಎಂ ಜಿ ಕಂಪನಿಯು ತನ್ನ ಇವಿ ಕಾರಿನಲ್ಲಿ ಐದು ವಿಭಿನ್ನ ಬಣ್ಣಗಳನ್ನು ನೀಡಿದೆ. ಬಿಳಿ, ನೀಲಿ, ಹಳದಿ, ಗುಲಾಬಿ ಹಾಗೂ ಹಸಿರು ಬಣ್ಣಗಳಲ್ಲಿ ನೀವು ಈ ಕಾರನ್ನು ಖರೀದಿ ಮಾಡಬಹುದು. ಬ್ಯಾಟರಿ ಸಾಮರ್ಥ್ಯ ನೋಡುವುದಾದರೆ 20-25 ಕೆ ಡಬ್ಲ್ಯೂ ಹೆಚ್ ಆಗಿದ್ದು 68 ಹೆಚ್ ಪಿ ಪವರ್ ಉತ್ಪಾದಿಸುವ ಸಿಂಗಲ್ ಫ್ರಂಟ್ ಎಕ್ಸೆಲ್ ಮೋಟಾರ್(Single Front exal Motor) ಅಳವಡಿಸಲಾಗಿದೆ. ಇನ್ನು ಯಾವುದೇ ಹ್ಯಾಚ್ ಬ್ಯಾಕ್ ಕಾರ್ ಗಳಿಗೂ ಕಡಿಮೆ ಇಲ್ಲದಂತಹ ಲುಕ್ ಹೊಂದಿದ್ದು, ಮೂರು ಡೋರ್ ಇದೆ. ನಾಲ್ಕು ಆಸನಗಳ ಕಾರ್ ಇದಾಗಿದೆ.