Maruti Swift: ಮಾರುತಿ ಸ್ವಿಫ್ಟ್ ಪ್ರಿಯರಿಗೆ ಸಿಹಿಸುದ್ದಿ, ಸಿಗಲಿದೆ 35 ರಿಂದ 40 Km ಮೈಲೇಜ್.

Advertisement
ಮಾರುತಿ ಸುಜುಕಿ ತನ್ನ ಶಕ್ತಿಶಾಲಿ ಹೈಬ್ರಿಡ್ ಗ್ರಾಂಡ್ ವಿರಾಟ ಕಾರನ್ನು ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಈ ಕಾರಿನಲ್ಲಿ ಆರು ಟ್ರಿಮ್ಸ್ ಗಳು ಇದ್ದು, Zeta+ ಮತ್ತು Alpha+ ಈ ಎರಡು ಟ್ರೀಮ್ಸ್ ಶಕ್ತಿಶಾಲಿ ಹೈಬ್ರಿಡ್ ಪವರ್ ಟ್ರೈನ್ ಆಗಿದೆ. 1.5 ಲೀಟರ್ ಸಾಮರ್ಥ್ಯದ ಮೂರು ಸಿಲಿಂಡರ್ ಅಳವಡಿಸಲಾದ ಆಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 92 ಬಿಎಚ್‌ಪಿ ಪವರ್ ಜನರೇಟಿಂಗ್ ಕೆಪ್ಯಾಸಿಟಿ ಹೊಂದಿದೆ.
ಹೈಬ್ರಿಡ್ ಪವರ್ ಟ್ರೇನ್ ಕಾರುಗಳು:
ಮಾರುತಿ ಸುಜುಕಿ ತನ್ನ ಹೊಸ ತಲೆಮಾರಿನ ಸ್ವಿಫ್ಟ್ ಹಾಗೂ ಡಿಸೈರ್ಗಳಲ್ಲಿ ಈ ಹೊಸ ಇಂಜಿನ್ ಅಳವಡಿಸಿದೆ. ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆ ಆಗಬಹುದು. ಅದರಲ್ಲೂ ಆಲ್ ನ್ಯೂ ಸ್ವಿಫ್ಟ್ ಈ ವರ್ಷದ ಕೊನೆಯ ಭಾಗದಲ್ಲಿ ಜಾಗತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಮಾರುತಿ ಸ್ವಿಫ್ಟ್ ಹಾಗೂ ಡಿಸೈರ್ ಎರಡು ಕಾರ್ ಗಳಲ್ಲಿ ಶಕ್ತಿಯುತವಾದ ಹೈಬ್ರಿಡ್ (Hybrid) ತಂತ್ರಜ್ಞಾನ ಅಳವಡಿಸಲಾಗಿದೆ. 1.2 ಲೀ ಸಾಮರ್ಥ್ಯದ ಮೂರು ಸಿಲಿಂಡರ್ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಜೊತೆಗೆ 35 ರಿಂದ 40 ಕೆಎಂಪಿಎಲ್ (KMPL) ಮೈಲೇಜ್ ನೀಡುವ ಉತ್ತಮ ಇಂಧನ ದಕ್ಷತೆ ಹೊಂದಿರುವ ಕಾರ್ ಎನಿಸಿಕೊಳ್ಳಲಿದೆ.
ವೈಶಿಷ್ಟ್ಯತೆಗಳು:
ಮುಂದಿನ ಜನರೇಶನ್ ಸ್ವಿಫ್ಟ್ (Swift )ಹಾಗೂ ಡಿಸೈರ್ (Dezire) ಕಾರುಗಳು, ಒಟಿಎ ಮತ್ತು ಧ್ವನಿ ಸಹಾಯ ನವೀಕರಣದೊಂದಿಗೆ ವಯರ್ಲೆಸ್ ಸ್ಮಾರ್ಟ್ಫೋನ್+ ಸಂಪರ್ಕ ದಂತಹ ವೈಶಿಷ್ಟ್ಯತೆಯನ್ನು ಕೂಡ ನೀಡಲಿದೆ. ಸ್ಮಾರ್ಟ್ ಫೋನ್ ಪ್ರೊ ಪ್ಲಸ್ ಟಚ್ ಸ್ಕ್ರೀನ್ (Smart Phone Pro Plus Touch Screen)ಇ ನ್ಫೋಟೈನ್ಮೆಂಟ್ ಸಿಸ್ಟಮ್ (Instrument System) ಅಳವಡಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕಾರಿನ ಬೆಲೆ ಎಷ್ಟು!?
2024ರ ಹೊತ್ತಿಗೆ ಬಿಡುಗಡೆಯಾಗಲಿರುವ ಮಾರುತಿ ಹಾಗೂ ಡಿಸೈರ್ ಹೈಬ್ರಿಡ್ ಮಾದರಿಯ ನಿಖರವಾದ ಬೆಲೆ ಹೊರಬಂದಿಲ್ಲ. ಆದರೆ ಹಿಂದಿನ ಪೆಟ್ರೋಲ್ ಮಾದರಿಗಳಿಗಿಂತ ಸುಮಾರು ಒಂದರಿಂದ 1.50 ಲಕ್ಷ ರೂಪಾಯಿ ಜಾಸ್ತಿ ಆಗುವ ಸಾಧ್ಯತೆ ಇದೆ