ಮಾರ್ಚ್ ಆರ್ಥಿಕ ವರ್ಷದ ಕೊನೆಯ ತಿಂಗಳಾಗಿದ್ದು ಈ ಸಮಯದಲ್ಲಿ ಹಲವಾರು ಬದಲಾವಣೆಗಳು ದೇಶದಲ್ಲಿ ಆಗುತ್ತವೆ. ಆಟೋಮೊಬೈಲ್ (Automobile) ಉದ್ಯಮದಲ್ಲಿಯೂ ಕೂಡ ಕೆಲವು ಹೊಸ ನಿಯಮಗಳ ಅನುಷ್ಠಾನ ಹಾಗೂ ಹಳೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ಕಾರು ತಯಾರಿಕಾ ಕಂಪನಿಗಳು ಸ್ಥಿರ ಗುಣಮಟ್ಟ ಇರುವ ವಾಹನಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ನಿಯಮ ಹೊರಡಿಸಲಾಗಿದ್ದು ಏಪ್ರಿಲ್ ಒಂದರಿಂದ ಇದು ಜಾರಿಯಾಗಲಿದೆ. ಕೆಲವು ಕಂಪನಿಗಳು ವಾಹನಗಳ ಎಂಜಿನ್ ಅನ್ನು ನವೀಕರಿಸುವುದು ಅನಿವಾರ್ಯವಾಗಿದೆ. ಆದರೆ ಈ ರೀತಿ ಎಂಜಿನ್ ನವೀಕರಣಕ್ಕೆ ಹೆಚ್ಚಿನ ವೆಚ್ಚ ತಗುಲುತ್ತದೆ. ಹಾಗಾಗಿ ಆಟೋಮೊಬೈಲ್ (Automobile) ಕಂಪನಿಗಳು ತಮ್ಮಲ್ಲಿ ಕಡಿಮೆ ಬೇಡಿಕೆ ಇರುವ ಮಾದರಿಯ ವಾಹನಗಳ ತಯಾರಿಕೆಯನ್ನು ಸ್ಥಗಿತಗೊಳಿಸುತ್ತಿದೆ. ಜೊತೆಗೆ ತಮ್ಮಲ್ಲಿ ಇರುವ ಸ್ಟಾಕ್ ಗಳನ್ನು ಖಾಲಿ ಮಾಡಲು ಹೆಚ್ಚಿನ ರಿಯಾಯಿತಿ ಕೂಡ ನೀಡುತ್ತಿವೆ.
Honda ಐದು ಮಾದರಿಗಳ ಕಾರ್ ಸ್ಥಗಿತ:
ಏಪ್ರಿಲ್ ಒಂದರ (April 1) ಬಳಿಕ ಹೋಂಡಾದ ಈ ಕೆಳಗಿನ ಐದು ಮಾಡೆಲ್ ಕಾರ್ ಗಳ ಖರೀದಿ ಮಾಡಲು ಸಾಧ್ಯವಿಲ್ಲ. ಹೋಂಡಾ ಸಿಟಿ 4 ಮತ್ತು 5ನೇ ಜನರೇಷನ್ (ಡಿಸೇಲ್ ಮಾದರಿ) ಹೋಂಡಾ ಅಮೇಜ್ (ಡೀಸೆಲ್ ಮಾದರಿ), ಹೋಂಡಾ ಜಾಝ್ ಹಾಗೂ ಹೋಂಡಾ ಡಬ್ಲ್ಯೂ ಆರ್ ವಿ. ಈ ಕಾರುಗಳು ಸ್ಟಾಕ್ ನಲ್ಲಿ ಇರುವವರೆಗೂ ಮಾತ್ರ ಮಾರಾಟ ಮಾಡಲಾಗುತ್ತದೆ ಜೊತೆಗೆ ಹೆಚ್ಚು ರಿಯಾಯಿತಿಯನ್ನು ಕೂಡ ಈ ಕಾರ್ ಖರೀದಿಯ ಮೇಲೆ ಗ್ರಾಹಕರು ಪಡೆಯಬಹುದು.
Mahindra ಮೂರು ಮಾದರಿಗಳ ಕಾರು ಮಾರಾಟ ಸ್ಥಗಿತ:
ಮಹಿಂದ್ರ ಮರಾಝೋ, ಮಹೀಂದ್ರ ಅಲ್ಟುರಸ್ G4 ಹಾಗೂ ಕೆಯುವಿ100 ಈ ಮೂರು ಕಾರುಗಳು ಇನ್ನು ಮುಂದೆ ಮಹಿಂದ್ರ ಶೋರೂಮ್ ಗಳಲ್ಲಿ ಲಭ್ಯವಿಲ್ಲ. ಸ್ಟಾಕ್ ಖಾಲಿಯಾಗುವವರೆಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಕಾರುಗಳನ್ನು ಖರೀದಿ ಮಾಡಬಹುದು.
Hyundai ನ ಎರಡು ಮಾದರಿ ಕಾರುಗಳ ಮಾರಾಟ ಸ್ಥಗಿತ:
ಇನ್ನು ಹುಂಡೈ ವೆರ್ನ ಹಾಗೂ ಹುಂಡೈ ಆಲ್ಕಝರ್ ಈ ಎರಡು ಡೀಸೆಲ್ ಮಾದರಿಯ ಕಾರ್ ಹುಂಡೈ ಶೋರೂಮ್ ನಿಂದ ಕಣ್ಮರೆ ಆಗಲಿದೆ. ಮಾರುಕಟ್ಟೆಯಲ್ಲಿ ಡೀಸೆಲ್ ವಾಹನಗಳ ಮಾರಾಟ ಕೂಡ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹುಂಡೈ ತನ್ನ ಈ ಎರಡು ಮಾದರಿಯ ಕಾರ್ ಗಳ ತಯಾರಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಕಾರ್ ಗಳು ಕೂಡ ಸ್ಟಾಕ್ ಖಾಲಿಯಾದ ನಂತರ ಮತ್ತೆ ಶೋರೂಮ್ ಗಳಲ್ಲಿ ಲಭ್ಯವಿರುವುದಿಲ್ಲ.