Karnataka Times
Trending Stories, Viral News, Gossips & Everything in Kannada

SUV Car: ಫಾರ್ಚುನರ್ ಗಿಂತ 12 ಲಕ್ಷ ಕಡಿಮೇ ಬೆಲೆಗೆ ಬರಲಿದೆ ಈ ಕಾರು! ಬೊಂಬಾಟ್ ಲುಕ್

advertisement

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಸಾಕಷ್ಟು ಆಕರ್ಷಕ ಕಾರ್ಗಳು ಪ್ರತಿ ತಿಂಗಳು ಪದಾರ್ಪಣೆ ಮಾಡುತ್ತಿರುತ್ತವೆ, ಅದರಂತೆ ಪ್ರತಿಷ್ಠಿತ ಕಾರ್ ಕಂಪನಿಗಳಲ್ಲಿ ಒಂದಾದ ನಿಸ್ಸಾನ್, ಆಗಸ್ಟ್ ತಿಂಗಳಿನಲ್ಲಿ ಹೊಚ್ಚಹೊಸ ಕಾರನ್ನು ಬಿಡುಗಡೆ ಮಾಡುವ ಎಲ್ಲಾ ತಯಾರಿಯನ್ನು ನಡೆಸುತ್ತಿದ್ದು ಇದರ ಕ್ಲಾಸಿಕ್, ಶಕ್ತಿಯುತ ಇಂಧನ ವ್ಯವಸ್ಥೆ ಹಾಗೂ ಆಕರ್ಷಕ ವೈಶಿಷ್ಟ್ಯತೆಗೆ ಮನಸೋತ ಗ್ರಾಹಕರು ಖರೀದಿ ಮಾಡಲು ನಿರ್ಧರಿಸಿದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವಂತಹ ಕಾರ್ ಮತ್ಯಾವುದೂ ಅಲ್ಲ ಎಲ್ಲೆಡೆ ಭಾರಿ ಸೆನ್ಸೇಷನ್ ಸೃಷ್ಟಿ ಮಾಡುತ್ತಿರುವ ‘ನಿಸ್ಸಾನ್ ಎಕ್ಸ್ ಟ್ರೈಲ್ (Nissan X-Trail), ಟೊಯೋಟಾ ಇನ್ನೋವಾ (Toyota Innova) ಫಾರ್ಚುನರ್ (Fortuner) ಹಾಗೂ ಎಂಜಿ ಗ್ಲಾಸ್ಟರ್ ನಂತಹ ಭಾರತೀಯ ಪ್ರತಿಶತ ಕಾರುಗಳಿಗೆ ನೇರವಾದ ಸ್ಪರ್ಧೆ ನೀಡಲು ಸಜ್ಜಾಗುತ್ತಿದೆ.

Nissan X-Trail Powerful Fuel System:

 

Image Source: Top Gear

 

1.5L ಪೆಟ್ರೋಲ್ ಇಂಜಿನ್ ವ್ಯವಸ್ಥೆಯಲ್ಲಿ ಬರಲಿರುವಂತಹ ನಿಸ್ಸಾನ್ ಎಕ್ಸ್ ಟ್ರೈಲ್ (Nissan X-Trail) ಎಸ್ಯುವಿಯಲ್ಲಿ ಟರ್ಬೋ ಪೆಟ್ರೋಲ್ ಇಂಧನದ ವ್ಯವಸ್ಥೆ ಕೂಡ ಲಭ್ಯವಿದ್ದು, ಇದರ ಹೈಬ್ರಿಡ್ ವಿನ್ಯಾಸವು ಭಾರತದಲ್ಲಿ ಲಭ್ಯವಿರುವುದಿಲ್ಲ.

ನಿಸ್ಸಾನ್ ಕಂಪನಿಯು ಈ ವಾಹನವನ್ನು ಅದಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, 204hp ಶಕ್ತಿ ಹಾಗೂ 305 Nm ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಇದರ ಶಕ್ತಿಯುತ ಇಂಧನ ವ್ಯವಸ್ಥೆ (Powerful Engine) ಹಾಗೂ ಮೈಲೇಜ್ ಕೆಪಾಸಿಟಿಗೆ ಇತರೆ ದೇಶದ ಗ್ರಾಹಕರು ಮನಸೋತು ಹೋಗಿದ್ದಾರೆ.

advertisement

Nissan X-Trail Safety:

ಇತ್ತೀಚಿನ ಎಲ್ಲಾ ವಾಹನಗಳಲ್ಲಿಯೂ ಸುರಕ್ಷತಾ ಕ್ರಮಗಳಿಗೆ ಹೆಚ್ಚು ಮನ್ನಣೆ ನೀಡಿ, ವಾಹನವನ್ನು ತಯಾರು ಮಾಡಲಾಗುತ್ತಿದ್ದು, ನಿಸ್ಸಾನ್ ಎಕ್ಸ್ ಟ್ರೈಲ್ ನಲ್ಲಿಯೂ ಆರು ಏರ್ ಬ್ಯಾಗ್ ವ್ಯವಸ್ಥೆ, ಆಧುನಿಕ ಚಾಲಕ ಸಹಾಯಕ ವ್ಯವಸ್ಥೆ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಹನವನ್ನು ಸುಲಭವಾಗಿ ಹ್ಯಾಂಡಲ್ ಮಾಡಲು ಹಿಲ್ ನಿಯಂತ್ರಣ ವ್ಯವಸ್ಥೆಯನ್ನು(Hill Controller System) ಅಳವಡಿಸಲಾಗಿದೆ. ಇದು ಅತಿ ಹೆಚ್ಚು ಸ್ಲೋಪ್ ಇದ್ದ ಸಮಯದಲ್ಲಿ ಹೆಚ್ಚು ಸಹಾಯಕ್ಕೆ ಬರಲಿದೆ.

Nissan X-Trail Features:

 

Image Source: TheSocialKhabar.in

 

ಐದು ಹಾಗೂ ಏಳು ಸೀಟರ್ನ ಆಯ್ಕೆಯಲ್ಲಿ ಬರಲಿರುವ ನಿಸ್ಸಾನ್ ಎಕ್ಸ್ ಟ್ರೈಲ್ ನಲ್ಲಿ‌ ಆಟೋಮೆಟಿಕ್ ಟ್ರಾನ್ಸ್ ಮಿಷನ್ ಸೌಲಭ್ಯವಿದೆ. 12.3 ಇಂಚಿನ ಟಚ್ ಸ್ಕ್ರೀನ್ ಇಂಫೋಟೈನ್ಮೆಂಟ್ ಸಿಸ್ಟಮ್ (Touch Screen Infotainment System) ಅಳವಡಿಕೆ, ಎರಡು ಆಕರ್ಷಕ ಒಳಾಂಗಣದ ಬಣ್ಣಗಳ ಆಯ್ಕೆಯಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಸಿಗಲಿದೆ.

ವಯರ್ಲೆಸ್ ಆಪಲ್ ಕಾರ್ ಪ್ಲೇಸ್ ಸೌಲಭ್ಯ, ಎಲೆಕ್ಟ್ರಾನಿಕ್ಸ್ ಸ್ಥಿರತೆ ನಿಯಂತ್ರಣ, ಎಲ್ಇಡಿ ಹೆಡ್ ಲೈಟ್ ಮತ್ತು ಟೆಲ್ ಲೈಟ್ ಆಯ್ಕೆಗಳು, ಮಸ್ಕುಲಾರ್ ಗ್ರಿಲ್ (Muscular Grille) ಮತ್ತು ಡ್ಯುಯಲ್ ಟೋನ್ ಕ್ಲೈಮೇಟ್ ಕಂಟ್ರೋಲರ್ ಅಳವಡಿಕೆಗಳಿದೆ. ಇನ್ನು ಈ Nissan X-Trail ಕಾರಿನ ಬೆಲೆ ಸುಮಾರು 40 ಲಕ್ಷದವರೆಗೆ ಇರಲಿದೆ ಫಾರ್ಚುನರ್ ಗಿಂತ 12 ಲಕ್ಷ ದರ ಕಡಿಮೆ ಇರಲಿದೆ ಎನ್ನಲಾಗಿದೆ.

advertisement

Leave A Reply

Your email address will not be published.