Karnataka Times
Trending Stories, Viral News, Gossips & Everything in Kannada

TVS Bike: ಪಲ್ಸರ್, ಗ್ಲಾಮರ್ ಎಲ್ಲಕ್ಕಿಂತಲೂ ಬ್ಯೂಟಿಫುಲ್ ಈ ಟಿವಿಎಸ್ ನ್ಯೂ ಬೈಕ್! 67 Km ಮೈಲೇಜ್, ಅತೀ ಕಡಿಮೆ ಬೆಲೆ

ಟಿವಿಎಸ್ ಕಂಪನಿ (TVS Company) ತನ್ನ ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ ಬೈಕ್ ನಿಂದಾಗಿ ಗ್ರಾಹಕರಲ್ಲಿ ಹೆಚ್ಚು ಭರವಸೆಯನ್ನು ಉಳಿಸಿಕೊಂಡು ಬಂದಿದೆ. ಅತ್ಯುತ್ತಮ ಸಾಮರ್ಥ್ಯದ ಎಂಜಿನ್‌ಗಳು ಹಾಗೂ ಹೆಚ್ಚಿನ ಮೈಲೇಜ್ (Mileage) ನೀಡುವ ಮೋಟಾರ್‌ ಬೈಕ್ ಗಳು ಟಿವಿಎಸ್ ಕ್ರೇಜ್ ನ್ನು ಅಂದಿನಿಂದ ಇಂದಿನವರೆಗೂ ಉಳಿಸಿಕೊಂಡು ಬಂದಿವೆ. ಇತ್ತೀಚೆಗೆ ಟಿವಿಎಸ್ ಕಂಪನಿ  TVS ರೈಡರ್ 125 ಬೈಕ್ ನ್ನು ನವಿಕರಣದೊಂದಿಗೆ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಲು ಸಜ್ಜಾಗಿದೆ. ಗಂಟೆಗೆ 67 ಕಿಮೀ ಮೈಲೇಜ್ ನೀಡುವ ಈ ಬೈಕ್ 124.8 ಸಿಸಿ ಎಂಜಿನ್ ಹೊಂದಿದೆ. ವಾಯ್ಸ್ ಮಾನಿಟರ್, ನ್ಯಾವಿಗೇಷನ್, ಕರೆ ಮತ್ತು ಸಂದೇಶ ಅಲರ್ಟ್, ಇಮೇಜ್ ವರ್ಗಾವಣೆ ಮತ್ತು ರೈಡ್ ವರದಿ ಮೊದಲಾದ ಹೊಸ ಹೊಸ ಫೀಚರ್ ಗಳು ಈ ಬೈಕ್ ನಲ್ಲಿವೆ.

Advertisement

ಆಕರ್ಷಕ ಸ್ಪೋರ್ಟಿ ಲುಕ್:

Advertisement

ಟಿವಿಎಸ್ ನ ರೈಡರ್ 125 ರೈಡರ್ ಗಳ ಪ್ರಯಾಣವನ್ನು ಇನ್ನಷ್ಟು ಆಹ್ಲಾದಕರವಾಗಿಸಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹೋಂಡಾ ಎಸ್ ಪಿ 125, ಹೀರೋ ಗ್ಲಾಮರ್ ಎಕ್ಸ್ ಟೆಕ್, ಬಜಾಜ್ ಪಲ್ಸರ್ ನ ಎಸ್125 ನೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಇನ್ನು ಈ ಬೈಕ್ 11.4 ಬಿಹೆಚ್ ಪಿ ಸಾಮರ್ಥ್ಯದ ಎಂಜಿನ್ ನೊಂದಿಗೆ 11.2 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಇಂಚಿನ ಟಿಎಫ್ ಟಿ ಕನ್ಸೋಲ್ (TFT Console) ಕೂಡ ಬೈಕ್ ನಲ್ಲಿ ಕಾಣಬಹುದು.

Advertisement

ರೈಡಿಂಗ್ ಮೋಜನ್ನು ಹೆಚ್ಚಿಸಬಲ್ಲ ಎರಡು ರೈಡಿಂಗ್ ಮೋಡ್‌:

Advertisement

TVS ರೈಡರ್ 125 ನಲ್ಲಿ ಬಿ ಎಸ್ 6 ಎಂಜಿನ್ ಅಳವಡಿಸಲಾಗಿದ್ದು, 10ಲೀ. ಟ್ಯಾಂಕ್ ಹೊಂದಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ (Disc Brake) ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ (Drum Brake) ಕೊಡಲಾಗಿದೆ. ಪವರ್ ಮತ್ತು ಇಕೋ ಎನ್ನುವ ಎರಡು ಮೋಡ್ ಗಳು ಜನರ ಮೂಡ್ ಗೆ ತಕ್ಕ ಹಾಗೇ ರೈಡಿಂಗ್ ಮಾಡುವ ಅನುಭವವನ್ನು ನೀಡುತ್ತವೆ. ಇನ್ನು ಮೂರು ಬಣ್ಣಗಳ ಆಯ್ಕೆ ಕೊಡಲಾಗಿದೆ. ಸುರಕ್ಷತೆಗಾಗಿ ಸೈಡ್ ಸ್ಟ್ಯಾಂಡ್ ಕಟ್ ಆಫ್ ಸ್ವಿಚ್ (Side Stand Cut Off Switch) ನೀಡಲಾಗಿದೆ. ಇನ್ನು ಈ ಬೈಕ್ ಬೆಲೆ ನೋಡುವುದಾದರೆ (ಎಕ್ಸ್ ಶೋ ರೂಮ್ ಬೆಲೆ) ರೂ.86,803 ರಿಂದ ರೂ.1 ಲಕ್ಷ ರೂಪಾಯಿಗಳು.

1 Comment
  1. Rajesh says

    Nice

Leave A Reply

Your email address will not be published.