Karnataka Times
Trending Stories, Viral News, Gossips & Everything in Kannada

Bajaj Auto: ಕಷ್ಟಪಟ್ಟು ದುಡಿಯುತ್ತಿರುವ ಎಲ್ಲರಿಗು ಬಜಾಜ್ ಕಂಪನಿ ಗುಡ್ ನ್ಯೂಸ್! ಕಡಿಮೆ ಬೆಲೆಗೆ 70Km ಮೈಲೇಜ್ ಬೈಕ್

advertisement

Bajaj Auto: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತಹ ಪರಿಸರ ಮಾಲಿನ್ಯಕ್ಕೆ ಹಾಗೂ ಪೆಟ್ರೋಲ್ ಬೆಲೆ ಏರಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಭಾರತದ ಅತ್ಯಂತ ನಂಬಿಕಸ್ತ ದ್ವಿಚಕ್ರ ವಾಹನ ನಿರ್ಮಾಣ ಕಂಪನಿ ಆಗಿರುವಂತಹ ಬಜಾಜ್ ಆಟೋ ಜಗತ್ತಿನ ಮೊಟ್ಟಮೊದಲ ಸಿ ಎನ್ ಜಿ ಬೈಕ್ ಅನ್ನು ಕೊನೆಗೂ ಲಾಂಚ್ ಮಾಡೋ ನಿರ್ಧಾರಕ್ಕೆ ಬಂದಿದೆ. ಹೌದು ಇದೇ ಜುಲೈ ತಿಂಗಳಲ್ಲಿ ಲಾಂಚ್ ಆಗಲಿರುವಂತಹ ಬಜಾಜ್ ಸಂಸ್ಥೆಯ CNG ಬೈಕ್ ಬಗ್ಗೆ ಬನ್ನಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಬಜಾಜ್ ಸಿ ಎನ್ ಜಿ ಬೈಕ್

ಪ್ರಪಂಚದ ಮೊದಲ ಸಿ ಎನ್ ಜಿ ನಿಂದ ಚಲಾಯಿಸಲಾಗುವಂತಹ ಬೈಕ್ ಅನ್ನು ಇದೇ ಜುಲೈ 4ನೇ ದಿನಾಂಕದಂದು ಬಜಾಜ್ ಸಂಸ್ಥೆ ಲೋಕಾರ್ಪಣೆ ಮಾಡಲಿದೆ. ಖಂಡಿತವಾಗಿ ದ್ವಿಚಕ್ರ ವಾಹನಗಳ ಇಂಡಸ್ಟ್ರಿಯಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಲ್ಲಿ ಟೆಸ್ಟಿಂಗ್ ವೇಳೆ ಕಂಡು ಬಂದಿರುವ ರೀತಿಯಲ್ಲಿ ನೋಡಿದಾಗ ಸಿಂಗಲ್ ಸೀಟ್, ಎಲ್ಇಡಿ ಹೆಡ್ ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹಾಗೂ ಸೈಡ್ ಲೆಗ್ ಗಾರ್ಡ್ ಗಳನ್ನು ಕೂಡ ಕಾಣಬಹುದಾಗಿತ್ತು.

advertisement

CT125 ಬೈಕಿನ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ ಡಿಸೈನ್ ಅನ್ನು ಇದು ಹೊಂದಿದೆ ಎಂಬುದಾಗಿ ಕೆಲವೊಂದು ಮೂಲಗಳಿಂದ ತಿಳಿದು ಬಂದಿದ್ದು ಇದರ ಹೆಸರನ್ನು ಪ್ಲಾಟಿನ ಅಂತ ಇಡಬಹುದು ಅನ್ನೋ ಸುದ್ದಿ ಕೂಡ ಎಲ್ಲ ಕಡೆ ಓಡಾಡ್ತಾ ಇದೆ. ಜುಲೈ 5 ನೇ ತಾರೀಕಿಗೆ ಪ್ರತಿಯೊಂದು ಮಾಹಿತಿಗಳು ಕೂಡ ಬಹಿರಂಗವಾಗಿ ಸಂಸ್ಥೆಯಿಂದ ಹೊರಬರಲಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ 80,000ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಮಾರುಕಟ್ಟೆಗೆ ಮಾರಾಟಕ್ಕೆ ಬರಲಿದೆ.

ಒಂದು ಕೆಜಿ ಸಿಎನ್ ಜಿಗೆ ಭರ್ಜರಿ 70 ಕಿಲೋ ಮೀಟರ್ ಮೈಲೇಜ್ ನೀಡುವಂತಹ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ ಅನ್ನೋದು ಕೂಡ ಇಲ್ಲಿ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಮೈಲೇಜ್ ಜೊತೆಗೆ ಪರಿಸರ ಮಾಲಿನ್ಯದ ವಿಚಾರದಲ್ಲಿ ಕೂಡ ಇದು ಪರಿಸರ ಸ್ನೇಹಿ ವಾಹನದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪೆಟ್ರೋಲ್ ಬೆಲೆ ಹಾಗೂ ವಾಹನದ ಮೇಂಟೆನೆನ್ಸ್ ವಿಚಾರಕ್ಕೆ ಬಂದರೆ ಖಂಡಿತವಾಗಿ ಬಜಾಜ್ ಸಂಸ್ಥೆ ಹೊಸದಾಗಿ ಪರಿಚಯಿಸಲು ಹೊರಟಿರುವಂತಹ ಸಿಎನ್ಜಿ ಬೈಕ್ ಸಾಕಷ್ಟು ರೀತಿಯಲ್ಲಿ ಗ್ರಾಹಕರಿಗೆ ಲಾಭವನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ.

Image Source: Mathrubhumi

ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ bajaj ಸಂಸ್ಥೆ ಇದನ್ನು ಮಧ್ಯಮ ವರ್ಗದ ಗ್ರಾಹಕರನ್ನ ಗಮನದಲ್ಲಿ ಇಟ್ಟುಕೊಂಡು ಮಾರುಕಟ್ಟೆಗೆ ಲಾಂಚ್ ಮಾಡಲು ಹೊರಟಿದ್ದು ಜುಲೈ 5 ನೇ ದಿನಾಂಕದಂದು ಈ ಬೈಕ್ ಯಾವ ರೀತಿಯಲ್ಲಿ ಇರುತ್ತದೆ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬಹುದಾಗಿದ್ದು ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಇದು ಬದಲಾವಣೆಯನ್ನು ತರಬಹುದೆಂಬುದನ್ನು ಕಾದು ನೋಡಬೇಕಾಗಿದೆ.

advertisement

Leave A Reply

Your email address will not be published.