Karnataka Times
Trending Stories, Viral News, Gossips & Everything in Kannada

KSRTC: ರಾಜ್ಯದ ಜನತೆಗೆ ಬೆಳಗಾಗುತ್ತಿದ್ದಂತೆ KSRTC ಗುಡ್ ನ್ಯೂಸ್! ಸಚಿವರಿಂದ ಅಧಿಕೃತ ಘೋಷಣೆ

advertisement

KSRTC: ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರ ಮಹಿಳೆಯರಿಗೆ ಕೆಎಸ್ಆರ್ಟಿಸಿ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆಯ ಜಾರಿಗೆ ತಂದಿರೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಈಗ ಅದೇ ಕೆಎಸ್ಆರ್ಟಿಸಿ ನಿಗಮ ಇನ್ನಷ್ಟು ಹೆಚ್ಚಿನ ಬಸ್ ಗಳನ್ನು ಖರೀದಿಸುವ ಬಗ್ಗೆ ರಾಜ್ಯದ ಜನತೆಗೆ ಸಂತೋಷದ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದಾಗಿದೆ.

ಕೆಎಸ್ಆರ್ಟಿಸಿ ನಿಗಮದ ಗುಡ್ ನ್ಯೂಸ್!

ರಾಜ್ಯದಲ್ಲಿ ಕೆಎಸ್ಆರ್ಟಿಸಿ ನಿಗಮದ ಸ್ಲೀಪರ್ ಬಸ್ ಗಳಿಗೆ ಬೇಡಿಕೆ ಸಾಕಷ್ಟು ಗಣನೀಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದೇ ಕಾರಣಕ್ಕಾಗಿ ಕೆಎಸ್ಆರ್ಟಿಸಿ ನಿಗಮ ಪಲ್ಲಕ್ಕಿ ಸೇವೆನ ಪ್ರಾರಂಭ ಮಾಡುವಂತಹ ಯೋಜನೆ ಹಾಕಿಕೊಂಡಿದ್ದು 30 ಸೀಟರ್ ಹಾಗೂ ಸ್ಲೀಪರ್ ಬಸ್ಸುಗಳನ್ನು ಮತ್ತು 70 ನಾನ್ ಎಸಿ ಸ್ಲೀಪರ್ ಕೋಚ್ ಬಸ್ಸುಗಳನ್ನು ಟೆಂಡರ್ ಗೆ ಕರೆದಿದೆ ಎಂಬುದಾಗಿ ತಿಳಿದುಬಂದಿದೆ. ಜೂನ್ 14ರಂದು 222 ಇಂಚು ಗಾತ್ರವನ್ನು ಹೊಂದಿರುವಂತಹ ಬಸ್ಸುಗಳನ್ನು ಖರೀದಿ ಮಾಡುವುದಕ್ಕೆ ಕೆ ಎಸ್ ಆರ್ ಟಿ ಸಿ ನಿಗಮ ಟೆಂಡರ್ ಕರೆದಿದ್ದು ಎಂಬುದಾಗಿ ತಿಳಿದು ಬಂದಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ವಸ್ತುಗಳನ್ನ ಖರೀದಿ ಮಾಡುವಂತಹ ಪ್ರಕ್ರಿಯೆ ನಡೆಯಲಿದೆ ಎನ್ನುವುದಾಗಿ ಕೂಡ ಸಂಸ್ಥೆಯ ಮೂಲಗಳಿಂದ ತಿಳಿದುಬಂದಿದೆ.

advertisement

ಇನ್ನು ಕೆಎಸ್ಆರ್ಟಿಸಿಯ ಪ್ರಮುಖರು ತಿಳಿಸಿರುವ ಮಾಹಿತಿಯ ಪ್ರಕಾರ ಕರ್ನಾಟಕ ರಾಜ್ಯದ ಸರ್ಕಾರಿ ಸಾರಿಗೆ ನಿಗಮದಲ್ಲಿ ಮೊದಲ ಬಾರಿಗೆ ಈ ರೀತಿ ಸೀಟರ್ ಹಾಗೂ ಸ್ಲೀಪರ್ ಬಸ್ಸುಗಳನ್ನು ಪರಿಚಯಿಸಲಾಗುತ್ತಿದ್ದು ಬೇರೆ ರಾಜ್ಯದಲ್ಲಿ ನಾವು ಈ ರೀತಿಯ ಬಸ್ಸುಗಳನ್ನು ನೋಡಿದ್ದೇವೆ ಹಾಗೂ ಕೆಲವೊಂದು ಖಾಸಗಿ ಸಂಸ್ಥೆಯ ಬಸ್ಸುಗಳು ಕೂಡ ಈ ರೀತಿ ಇದ್ದಾವೆ. ಇದೇ ಕಾರಣಕ್ಕಾಗಿ ನಾವು ಮೊದಲ ಹಂತವಾಗಿ 33 ಬಸ್ಸುಗಳನ್ನ ರಾಜ್ಯದಲ್ಲಿ ಪರಿಚಯಿಸುವಂತಹ ಕೆಲಸವನ್ನು ಮಾಡೋದಕ್ಕೆ ಹೊರಟಿದ್ದೇವೆ ಎನ್ನುವಂತಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನು ಟೆಂಡರ್ ನಲ್ಲಿ ಇರುವಂತಹ ಡಾಕ್ಯುಮೆಂಟ್ ನಲ್ಲಿ ಹೇಳಿರುವ ಮಾಹಿತಿಯ ಪ್ರಕಾರ ಮೊದಲಿಗೆ ಇವುಗಳು ಟ್ರಯಲ್ ರನ್ ಮಾಡಿದ ನಂತರವಷ್ಟೇ ಇವುಗಳನ್ನು ಅಧಿಕೃತವಾಗಿ ಕೆಎಸ್ಆರ್ಟಿಸಿಯ ಮೂಲಕ ಲಾಂಚ್ ಮಾಡಲಾಗುವುದು ಎಂಬುದಾಗಿ ಹೇಳಿದ್ದಾರೆ. ಒಂದು ತಿಂಗಳ ಕಾಲ ಈ ರೀತಿ ಟೆಸ್ಟ್ ಮಾಡಿದ ನಂತರವಷ್ಟೇ ಬಸ್ಸುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಇಲ್ಲಿ ಯಾವುದೇ ರೀತಿಯ ಅಸಮಾಧಾನ ಕಂಡು ಬಂದಲ್ಲಿ ಯಾವುದೇ ಪರಿಹಾರ ಇಲ್ಲದೆ ಈ ಡೀಲ್ ಅನ್ನು ಕ್ಯಾನ್ಸಲ್ ಮಾಡುವಂತಹ ಅಧಿಕಾರವನ್ನು ಕೆಎಸ್ಆರ್ಟಿಸಿ ಹೊಂದಿರುತ್ತದೆ ಅನ್ನೋದನ್ನ ಕೂಡ ಟೆಂಡರ್ ನಲ್ಲಿ ದಾಖಲಿಸಲಾಗಿದೆ.

Image Source: UoD System

ಬಸ್ನಲ್ಲಿ ಮೊಬೈಲ್ ಹಾಗೂ ಲ್ಯಾಪ್ಟಾಪ್ ಚಾರ್ಜರ್ ಪಾಯಿಂಟ್ ಗಳನ್ನು ಕೂಡ ಅಳವಡಿಸಲಾಗಿರುತ್ತದೆ ಅನ್ನೋದನ್ನ ಇಲ್ಲಿ ಸ್ಪಷ್ಟಪಡಿಸಲಾಗಿದೆ. ಜನರಿಗೆ ಸೂಚನೆಗಳನ್ನು ನೀಡುವಂತಹ ಸ್ಪೀಕರ್ ಸಿಸ್ಟಮ್ ಕೂಡ ಇದೆ. ಡ್ರೈವರ್ ಗೆ ಸುರಕ್ಷತೆಯ ದೃಷ್ಟಿಯಲ್ಲಿ ಹಿಂಬದಿಯ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿದ್ದು ಪ್ರಯಾಣಿಕರಿಗೆ ಆರಾಮದಾಯಕ ವಾದಂತಹ ತಲೆದಿಂಬನ್ನು ಕೂಡ ನೀಡಲಾಗುತ್ತದೆ.

advertisement

Leave A Reply

Your email address will not be published.