ಮಾರುತಿ ಸುಜುಕಿ ಕಾರುಗಳ ಭಾರತದಲ್ಲಿ ಜನಾಕರ್ಷಣೆ ಹೊಂದಿದ್ದು, ಪ್ರತೀವರ್ಷವೂ ಲಕ್ಷಾಂತರ ಕಾರುಗಳ ಮಾರಾಟವಾಗುತ್ತಿವೆ. ಮಾರುತಿ ಸುಜುಕಿ ಕಂಪೆನಿಯು ಕಳೆದ ಕೇವಲ 4 ತಿಂಗಳುಗಳಲ್ಲಿಯೇ 67,000 ಯುನಿಟ್ ಕಾರುಗಳನ್ನು ಮಾರಾಟ ಮಾಡಿರುವುದು ದಾಖಲೆಯೇ ಸರಿ. ಈ ಕಂಪೆನಿಯ ಕಾರು ಗಳ ನಿರ್ವಹಣಾ ವೆಚ್ಚ ಕಡಿಮೆ ಇರುವುದು, ಗರಿಷ್ಟ ಮೈಲೇಜ್, ಕೈಗೆಟುಕುವ ಬೆಲೆ ಸೇರಿದಂತೆ ಹಲವು ಧನಾತ್ಮಕ ಅಂಶಗಳಿಂದಾಗಿ ಜನ ಈ ಕಂಪೆನಿಯ ಕಾರುಗಳ ಮೇಲೆ ಮೋಹ ಬೆಳೆಸಿಕೊಂಡಿದ್ದಾರೆ.
ಇದೀಗ, ವಾಹನಗಳ ಮಾರುಕಟ್ಟೆಯ ವ್ಯಾಪ್ತಿ ಹಾಗೂ ವೈವಿಧ್ಯತೆಗಳು ಬದಲಾಗುತ್ತಿರುವುದರಿಂದ ಎಲ್ಲಾ ಅಂಶಗಳೆಡೆಗೆ ಕಂಪೆನಿಯೂ ದೃಷ್ಠಿ ನೆಟ್ಟಿದೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಕಾರು ತಯಾರಕರು 10 ಕಾರುಗಳನ್ನು ಮಾರಾಟ ಮಾಡಿದರೆ ಅದರಲ್ಲಿ 3 ಕಾರುಗಳ ಸಿಎಎನ್‌ಜಿ ಕಾರುಗಳು ಎನ್ನುವುದು ವಿಶೇಷ.
ಈ ನಿಟ್ಟಿನಲ್ಲಿ ಮಾರುತಿ ಸುಜುಕಿಯು ಸಿಎಎನ್‌ಜಿ ಬೆಂಬಲಿತ ಕಾರುಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿ, ಮಾರುತಿ ಸುಜುಕಿ ಸ್ವಿಫ್ಟ್ DZire S-CNG ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ಸ್ವಿಫ್ಟ್ S-CNG ಕಾರಿನ ಆರಂಭೀಕೆ ಬೆಲೆ 8.19 ಲಕ್ಷ ರೂ.ಗಳಿಂದ ಆರಂಭವಾಗಲಿದ್ದು, ಇದು ಪ್ರತಿ ಕೆಜಿ ಸಿಎನ್‌ಜಿಗೆ 32.85 ಕಿ.ಮೀ ಮೈಲೇಜ್ ನೀಡುವುದು ಎಲ್ಲರ ಗಮನ ಸೆಳೆದಿದೆ.
ಮಾರುತಿ ಸುಜುಕಿ ಸಿಎನ್‌ಜಿ ಕಾರ್‌ನ ವೇರಿಯೆಂಟ್‌ಗಳು ಹಾಗೂ ಬೆಲೆ (Ex Showroom) :
- ಮಾರುತಿ ಸುಜುಕಿ ಸ್ವಿಫ್ಟ್ VXi CNG – 8,19,500 ರೂ.
- ಮಾರುತಿ ಸುಜುಕಿ ಸ್ವಿಫ್ಟ್ VXi+ CNG -8,46,500 ರೂ.
- ಮಾರುತಿ ಸುಜುಕಿ ಸ್ವಿಫ್ಟ್ ZXi CNG – 9,19,500 ರೂ.
Maruti Suzuki CNG ಕಾರಿನ ವೈಶಿಷ್ಯತೆಗಳು :
ಮಾರುತಿ ಸುಜುಕಿ ಸ್ವಿಫ್ಟ್ CNG ಕಾರು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ+ ಮತ್ತು ಹಿಲ್ ಹೋಲ್ಡ್ ಸಹಾಯಕದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಅಲ್ಲದೇ, ಸ್ವಯಂಚಾಲಿತ ಸಿ ನಿಯಂತ್ರಣ, ವೈರ್‌ಲೆಸ್ ಚಾರ್ಜರ್, 60:40 ಸ್ಪ್ಲಿಟ್ ರಿಯರ್ ಸೀಟುಗಳು ಮತ್ತು 7 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸುಜುಕಿ ಕನೆಕ್ಟ್ ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವುದಲ್ಲದೇ, ವಾತಾವರಣಕ್ಕೆ ಕಡಿಮೆ ಮಾಲಿನ್ಯ ಹೊರಸೂಸುತ್ತದೆ.
Maruti Suzuki S CNG ಮೈಲೇಜ್ ಮತ್ತು ರನ್ನಿಂಗ್ ವೆಚ್ಚ :
ಮಾರುತಿ ಸುಜುಕಿ ಸ್ವಿಫ್ಟ್ S-CNG ಕಾರು ಪ್ರತೀ ಕೆಜಿ ಸಿಎನ್‌ಜಿಗೆ 32.85 ಕಿಮೀ ಮೈಲೇಜ್ ನೀಡುತ್ತಿದೆ ಹಾಗೂ ಪ್ರತೀ ಲೀ. ಪೆಟ್ರೋಲ್‌ಗೆ 24.8 ಕಿ.ಮೀ ಮೈಲೇಜ್ ನೀಡುತ್ತದೆ. ಬೆಂಗಳೂರಿನಲ್ಲಿ ಒಂದು ಕೆಜಿ ಸಿಎಎನ್‌ಜಿ ಬೆಲೆ 83 ರೂ.ಗಳಾಗಿದ್ದು, ಖರೀದಿದಾರರಿಗೆ ಅನುಕೂಲವಾಗಲಿದೆ.