ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ಹ್ಯುಂಡೈ ವೆರ್ನಾ; ಬುಕ್ಕಿಂಗ್ ಆರಂಭವಾಗಿದೆ. ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಹುಂಡೈ (Hyundai). ಈವರೆಗೆ ಭಾರತದಲ್ಲಿ ಹುಂಡೈ ನ ಸಾಕಷ್ಟು ಕಾರ್ ಗಳು ಮಾರಾಟವಾಗಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಸಾಕಷ್ಟು ವಿವಿಧ ವೇರಿಯಂಟ್ ಕೂಡ ಹುಂಡೈ ಬಿಡುಗಡೆ ಮಾಡಿದೆ. ಅದರಲ್ಲಿ ನೆಕ್ಸ್ಟ್ ಜನರೇಶನ್ ವೆರ್ನಾ (Verna) ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಮಧ್ಯಮ ಗಾತ್ರದ ಸೆಡಾನ್ ವೆರ್ನ ಹೊಸ ಆವೃತ್ತಿಯಾಗಿದ್ದು ಇದರ ಆರಂಭಿಕ ಬೆಲೆ 10.89 ಲಕ್ಷ ಗಳು ಮಾತ್ರ. ಇನ್ನು ಇದರ ಟಾಪ್ ಎಂಡ್ ವೇರಿಯಂಟ್ ಕೂಡ ಲಭ್ಯವಿದ್ದು 17.37 ಲಕ್ಷ ರೂಪಾಯಿಗಳು ಎಂದು ಕಂಪನಿ ಹೇಳಿಕೊಂಡಿದೆ.
ಹೋಂಡಾ ಸಿಟಿ (Honda City), ಸ್ಕೋಡ ಸ್ಲಾಬಿಯ (Skoda Slavia), ಫೋಕ್ಸ್ ವ್ಯಾಗನ್ ವರ್ಟಸ್ (Volkswagen Virtus), ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz) ಮೊದಲಾದ ವಾಹನಗಳೊಂದಿಗೆ ವೆರ್ನಾ ನೇರವಾಗಿ ಸ್ಪರ್ಧಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗ್ ಗಳು ಹಾಗೂ ಎಬಿಸಿ ಮತ್ತು ಇಬಿಡಿ ಜೊತೆಗೆ 3 ವರ್ಷಗಳ ಅನಿಯಮಿತ ಕಿಲೋಮೀಟರ್ ವ್ಯಾರೆಂಟಿ ಕೂಡ ಕಂಪನಿ ನೀಡುತ್ತಿದೆ. ಕೇವಲ ಒಂದು ತಿಂಗಳಲ್ಲಿ ವೆರ್ನ 8,000ಕ್ಕೂ ಹೆಚ್ಚು ಬುಕಿಂಗ್ ಪಡೆದಿದೆ ಅಂದ್ರೆ, ಈ ಕಾರಿನ ವೈಶಿಷ್ಟ್ಯತೆ ನಿಮಗೆ ಈಗಾಗಲೇ ಗೊತ್ತಾಗಿರಬಹುದು.
ಇನ್ನು ಹುಂಡೈ ವೆರ್ನಾ (Hyundai Verna 2023) ದ ಇನ್ನಷ್ಟು ವಿಶೇಷತೆಯನ್ನು ನೋಡುವುದಾದರೆ ಸೆಗ್ಮೆಂಟ್ ಲೀಡಿಂಗ್ ವೀಲ್ ಬೇಸ್ ಅಳವಡಿಸಲಾಗಿದ್ದು 528 ಲೀಟರ್ ನ ಅತ್ಯುತ್ತಮ ಸಾಮರ್ಥ್ಯದ ಬೂಟ್ ಸ್ಪೇಸ್ ಕೂಡ ಅಳವಡಿಸಲಾಗಿದೆ. ಇನ್ನು ಹೆಡ್ ಲೈನ್ ಸೆಟಪ್ ಸ್ವಿಫ್ಟ್ ರೀತಿಯದ್ದಾಗಿದ್ದು ಉದ್ದ ಮತ್ತು ಚೂಪಾದ ರೇಖೆಗಳನ್ನು ಹೊಂದಿದೆ. ನಾಲ್ಕು ರೂಪಾಂತರಗಳಲ್ಲಿ ಹಾಗೂ ಏಳು ಬಣ್ಣಗಳಲ್ಲಿ ಹೊಸ ವೆರ್ನ ಲಭ್ಯವಿದೆ. ಬಿಳಿ, ಕಪ್ಪು, ಕೆಂಪು, ಬೂದು, ಸಿಲ್ವರ್ ಹಾಗೂ ಕಂದು ಬಣ್ಣದ ಎರಡು ಛಾಯೆಗಳು ಲಭ್ಯವಿದೆ. ಮೃದುವಾದ ಟಚ್ ಸ್ಕ್ರೀನ್ ಕ್ಯಾಬಿನ್ ಡ್ಯಾಶ್ ಬೋರ್ಡ್, ಡುಯಲ್ ಟೋನ್ ಬೀಚ್ ಕಪ್ಪು ಬಣ್ಣದ ಒಳಾಂಗಣ ಇನ್ನಷ್ಟು ಅತ್ಯಾಕಶ್ಯಕವಾಗಿ ಅಳವಡಿಸಲಾಗಿದೆ.
ಎರಡು ಸ್ಟ್ರೋಕ್ ವೀಲ್ ಸ್ಟೀರಿಂಗ್ ಕೂಡ ವೇರ್ನಾದಲ್ಲಿ ಕೊಡಲಾಗಿದ್ದು 64 ಬಣ್ಣಗಳೊಂದಿಗೆ ಸುತ್ತುವರಿದ ಬೆಳಕನ್ನು ಪಡೆಯುವಂತೆ ಸೇಡಾನ್ ಬಿಸಿ ಮತ್ತು ಗಾಳಿ ಮುಂಭಾಗದ ಆಸನಗಳನ್ನು ಜೋಡಿಸಲಾಗಿದೆ. ಟಿ ಎಫ್ ಡಿ ಎಂ ಐ ಡಿ ಇಂಪೋರ್ಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹಾಗೂ ಧ್ವನಿ ಆದೇಶಗಳನ್ನು ಈ ಸಿಸ್ಟಮ್ ಒಳಗೊಂಡಿದೆ. ಇಂಗ್ಲೀಷ್ ಮತ್ತು ಕೊರಿಯನ್ ಮಾತ್ರವಲ್ಲದೆ 10 ಪ್ರಾದೇಶಿಕ ಭಾಷಾ ಆಯ್ಕೆಗಳ ನ್ಯಾವಿಗೇಶನ್ ಕೂಡ ವೆರ್ನಾದಲ್ಲಿ ಕಾಣಬಹುದು.
ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬ್ಯಾಗ್ ಗಳು ಇವೆ. ಈಬಿಡಿ ಜೊತೆಗೆ ಎಬಿಎಸ್ ಸೇರಿದಂತೆ 30ಕ್ಕೂ ಹೆಚ್ಚು ಸುರಕ್ಷಿತ ವೈಶಿಷ್ಟ್ಯಗಳನ್ನು ಈ ಕಾರಿನಲ್ಲಿ ನೀವು ಕಾಣಬಹುದು. ಘರ್ಷಣೆಯ ಎಚ್ಚರಿಕೆ ಸ್ಮಾರ್ಟ್, ಕ್ರೂಸ್ ನಿಯಂತ್ರಣ, ಬ್ಲೈಂಡ್ ಸ್ಪಾಟ್ ಎಚ್ಚರಿಕೆ ಮೊದಲಾದ ವೈಶಿಷ್ಟ್ಯತೆಗಳು ಕೂಡ ಈ ಕಾರಿನಲ್ಲಿ ಇವೆ. ಇನ್ನು ಮೈಲೇಜ್ ವಿಚಾರಕ್ಕೆ ಬಂದರೆ ಹುಂಡೈ ವೆರ್ನ ಹಿಂದಿನ ಎನ್ ಎ 1.5 ಲಿ ಇಂಜಿನ್ ಜೊತೆಗೆ ಎರಡು ಹೊಸ ಇಂಜಿನ್ ಪಡೆದಿದ್ದು, 115 ಹೆಚ್ ಪಿ ಮತ್ತು 143.8 ಎನ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಮಾನ್ಯುಯಲ್ ಮತ್ತು ಐ ವಿ ಟಿ ನೀಡಲಾಗಿದ್ದು 18.6 km ಮತ್ತು 19.6 kmpl (IVT) ಮೈಲೇಜ್ ನೀಡುತ್ತದೆ.
ಸ್ಪೋರ್ಟಿಯರು 1.5 ಲೀಟರ್ ಟರ್ಬೊ ಜಿಡಿಐ ಪೆಟ್ರೋಲ್ ಇಂಜಿನ್ ರೂಪಾಂತರವು 160 ಹೆಚ್ ಪಿ ಮತ್ತು 253 ಎಂಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಹಾಗೂ ಪ್ಯಾಡಲ್ ಶಿಫ್ಟ್ ಗಳ ಜೊತೆಗೆ 7 ಸ್ಪೀಡ್ ಡಿಸಿಟಿ ಆಯ್ಕೆಯನ್ನು ಕೂಡ ನೀಡಲಾಗಿದೆ. ಈ ಕಾರಿನ ಇಂಧನ ದಕ್ಷತೆ ಹಾಗೂ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ.