Karnataka Times
Trending Stories, Viral News, Gossips & Everything in Kannada

Tata: 8 ಲಕ್ಷಕ್ಕೆ ಬರಲಿದೆ ಟಾಟಾದ ಈ ಬೆಂಕಿ ಕಾರು! ಹೆಸರು ಕೇಳಿಯೇ ನಡುಗಿದ ಇತರೆ ಕಂಪನಿಗಳು

advertisement

ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಗ್ರಾಹಕರ ರುಚಿಗೆ ತಕ್ಕಂತೆ ಕಂಪನಿಗಳು ಕಾರುಗಳನ್ನು ತಯಾರಿಸಿ ಮಾರಾಟ ಮಾಡುವಂತಹ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಅದರಲ್ಲೂ ವಿಶೇಷವಾಗಿ ಕಾಂಪಿಟೇಶನ್ ಹೆಚ್ಚಾಗಿರುವ ಕಾರಣದಿಂದಾಗಿ ಬೆಳೆಯಲಿ ಕೂಡ ಕಂಪನಿಗಳು ಗ್ರಾಹಕರಿಗೆ ಮನಮೆಚ್ಚಿಸುವಂತಹ ಕೆಲಸವನ್ನು ಮಾಡೋದಕ್ಕೆ ಹೊರಟಿದ್ದಾರೆ ಅದರಲ್ಲೂ ವಿಶೇಷವಾಗಿ ನಮ್ಮ ಭಾರತದ ಕಂಪನಿ ಆಗಿರುವಂತಹ ಟಾಟಾ ಈ ಕೆಲಸವನ್ನ ವಿಶೇಷವಾಗಿ ಮಾಡ್ತಾ ಇದೆ. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಟಾಟಾ ಸಂಸ್ಥೆಯ ಹೊಸ ಕಾರ್ ಆಗಿರುವಂತಹ Tata Blackbird ಕಾರಿನ ಬಗ್ಗೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Tata Blackbird ಕಾರಿನ ಬಗ್ಗೆ ಹೆಚ್ಚುವರಿ ಮಾಹಿತಿ:

 

Image Source: Times Bull

 

ಅತ್ಯಂತ ಶೀಘ್ರದಲ್ಲಿಯೇ ಟಾಟಾ ಸಂಸ್ಥೆ Tata Blackbird ಕಾರನ್ನು ಭಾರತದ ಮಾರುಕಟ್ಟೆಗೆ ಲಾಂಚ್ ಮಾಡುವಂತಹ ಯೋಜನೆಯನ್ನು ರೂಪಿಸಿಕೊಂಡಿದೆ. ಈ ಕಾರಿನಲ್ಲಿ ಸನ್ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಟಚ್ ಸ್ಕ್ರೀನ್ ಇಂಫೋಟೈನ್ಮೆಂಟ್ ಸಿಸ್ಟಮ್, ಮಲ್ಟಿ ಫಂಕ್ಷನಿಂಗ್ ಸ್ಟೇರಿಂಗ್ ವೀಲ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನ ನೀವು ಮುಂದಿನ ದಿನಗಳಲ್ಲಿ ಲಾಂಚ್ ಆದ್ಮೇಲೆ ಕಾಣಬಹುದಾಗಿದೆ.

ಕಂಪನಿ ಇದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಬಿಟ್ಟು ಕೊಟ್ಟಿಲ್ಲ ಹಾಗಿದ್ದರೂ ಕೂಡ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಚರ್ಚೆಗಳು ಲಾಂಚ್ ಆಗುವುದಕ್ಕಿಂತ ಮುಂಚೆನೇ ನಡೀತಾ ಇದೆ. ಹೀಗಾಗಿ ಈ ಕಾರಿನ ಮೇಲೆ ಸಾಕಷ್ಟು ನಿರೀಕ್ಷೆಗಳು ಕೂಡ ಹೆಚ್ಚಾಗಿವೆ ಎಂದು ಹೇಳಬಹುದು.

advertisement

ಈ ಕಾರಿನಲ್ಲಿ ಟರ್ಬೋ ಚಾರ್ಜ್ ಪೆಟ್ರೋಲ್ ಇಂಜಿನ್ ಜೊತೆಗೆ ಡೀಸೆಲ್ ಇಂಜಿನ್ ಅನ್ನು ಕೂಡ ಅಳವಡಿಸಲಾಗುತ್ತಿದೆ ಅನ್ನುವಂತಹ ಮಾಹಿತಿಗಳು ಕೂಡ ಕೇಳಿಬಂದಿವೆ. Tata Blackbird ಕಾರಿನಲ್ಲಿ ಒಳ ವಿನ್ಯಾಸವನ್ನು ಸಾಕಷ್ಟು ಪ್ರೀಮಿಯಂ ಲೆವೆಲ್ ನಲ್ಲಿ ಮಾಡಲಾಗಿದೆ ಎನ್ನುವಂತಹ ಮಾಹಿತಿ ಕೂಡ ಕೇಳಿಬಂದಿದೆ.

ಉತ್ತಮವಾಗಿರುವಂತಹ ಸೌಂಡ್ ಸಿಸ್ಟಮ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. Tata Blackbird ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವಂತಹ ಅತ್ಯಂತ ಸ್ಟೈಲಿಶ್ ಕಾರ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಕಂಪನಿಯ ಮೂಲಗಳಿಂದ ತಿಳಿದುಬಂದಿದೆ.

Tata Blackbird Price:

 

Image Source: The Financial Express

 

ತಿಳಿದು ಬಂದಿರುವ ಮಾಹಿತಿಯ ಪ್ರಕಾರ Tata Blackbird ಕಾರು 8 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಬೇಸಿಕ್ ವೇರಿಯಂಟ್ ಅನ್ನು ಮಾರಾಟ ಮಾಡುವುದಕ್ಕೆ ಪ್ರಾರಂಭ ಮಾಡಲಿದೆ ಅನ್ನುವಂತಹ ಮಾಹಿತಿ ಇದೆ. ಬೆಲೆ ಬಗ್ಗೆ ಕೂಡ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ ಆದರೆ ಮಾರುಕಟ್ಟೆಯ ಮೂಲಗಳು ಇದೇ ಮಾಹಿತಿಯನ್ನು ಪುಷ್ಠಿಕರಿಸುತ್ತಿವೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಒಳಗಾಗಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಲಾಂಚ್ ಆಗುವಂತಹ ಸಾಧ್ಯತೆ ಇದೆ ಎನ್ನುವಂತಹ ಮಾಹಿತಿ ಕೂಡ ಇದೆ.

advertisement

Leave A Reply

Your email address will not be published.